ಸೆಪ್ಟಂಬರಿನಲ್ಲಿ ಭಾರತದಲ್ಲಿ ಇಂಗ್ಲೆಂಡ್ನೊಂದಿಗೆ ನಡೆಯಬೇಕಿದ್ದ ನಿಗದಿತ ಓವರ್ಗಳ ಕ್ರಿಕೆಟ್ ಪಂದ್ಯ ಮುಂದೂಡಲ್ಪಡುವ ಸಾಧ್ಯತೆಗಳಿವೆ. ಹಾಗೂ ನ್ಯೂಝಿಲ್ಯಾಂಡ್ ನೆಲದಲ್ಲಿ ನಡೆಯಬೇಕಿದ್ದ ಪಂದ್ಯವೂ ಮುಂದೂಡಲ್ಪಡುವ ಸೂಚನೆ ಲಭಿಸಿದೆ. BCCI ಇದುವರೆಗೂ ಔಪಚಾರಿಕವಾಗಿ ಯಾವುದೇ ಘೋಷನೆ ಮಾಡಿಲ್ಲವಾದರೂ, ಶೀಘ್ರದಲ್ಲೇ ಈ ಕುರಿತು ಹೇಳಿಕೆ ನೀಡಬಹುದು.
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್ ಭಾರತದಲ್ಲಿ ಮೂರು ಏಕದಿನ ಹಾಗೂ ಮೂರು T20 ಸರಣಿ ಪಂದ್ಯಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ಈ ಸಂಕಷ್ಟದ ಹೊತ್ತಲ್ಲಿ ಇಂಗ್ಲಂಡ್ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು BCCI ಹಿರಿಯ ಅಧಿಕಾರಿ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಶುಕ್ರವಾರ ನಡೆಯಲಿರುವ ಬಿಸಿಸಿಐ ಸಭೆಯಲ್ಲಿ ಭಾರತದ ಭವಿಷ್ಯದ ಪ್ರವಾಸಗಳು ಹಾಗೂ ಕಾರ್ಯಕ್ರಮಗಳು ಮುಖ್ಯ ಚರ್ಚಾ ವಿಷಯವಾಗಲಿದೆ. ಸಭೆಯ ಬಳಿಕ ಬಿಸಿಸಿಐ ಮುಂದಿನ ತೀರ್ಮಾನ ಪ್ರಕಟಗೊಳಿಸಲಿದೆ.
ಸೆಪ್ಟಂಬರ್ ಕೊನೆಯಲ್ಲಿ ನಡೆಯಬೇಕಿದ್ದ ಇಂಗ್ಲಂಡ್ ಭಾರತ ಸರಣಿ ಹಾಗೂ, ICC T20 ವರ್ಲ್ಡ್ ಕಪ್ ಮುಂದೂಡುವ ಸಾಧ್ಯತೆ ಇರುವುದರಿಂದ ಐಪಿಎಲ್ ಪಂದ್ಯಾಟ ನಡೆಸುವ ಸಾಧ್ಯತೆ ಬಲವಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯಂತೂ ಖಾಲಿ ಸ್ಟೇಡಿಯಂನಲ್ಲಾದರೂ ಸರಿ, ಐಪಿಎಲ್ ನಡೆಸುವುದಾಗಿ ತುದಿಗಾಲಲ್ಲಿ ನಿಂತಿದ್ದಾರೆ.
