ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿರು ಹನಿಟ್ರ್ಯಾಪ್ ಪ್ರಕರಣಕ್ಕೆ (Honey trap) ಸಂಬಂಧಿಸಿದಂತೆ ಸಚಿವ ರಾಜಣ್ಣ (KN Rajanna) ಮತ್ತು ಅವರ ಪುತ್ರ ಎಂ.ಎಲ್.ಸಿ ರಾಜೇಂದ್ರ (MLC Rajanna) ಹೈಕಮಾಂಡ್ ಭೇಟಿಗೆ ಮುಂದಾಗಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಚಿವ ಕೆ.ಎನ್ ರಾಜಣ್ಣ ಅಧಿವೇಶನದಲ್ಲಿ ಮಾಡಿದ ಹನಿ ಟ್ರ್ಯಾಪ್ ಆರೋಪದ ಬಗ್ಗೆ ಮಾಹಿತಿ ನೀಡಲು ಈ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರ ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಈ ಹನಿಟ್ರ್ಯಾಪ್ ಕೇಸ್ ಸಂಬಂಧಪಟ್ಟಂತೆ ಪುರಾವೆ ಸಹಿತವಾಗಿ ದೂರು ನೀಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.ಅಲ್ಲದೇ ಇದೇ ವೇಳೆ ಫೋನ್ ಟ್ಯಾಪಿಂಗ್ ಆರೋಪದ ಬಗ್ಗೆಯೂ ದೂರು ನೀಡಲಿದ್ದು ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.