• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಆಯುರ್ವೇದದ ಅಮೂಲ್ಯ ರತ್ನ ʼಅಗ್ನಿಶಿಖೆʼ ಪತ್ತೆ

by
August 27, 2020
in ಕರ್ನಾಟಕ
0
ಆಯುರ್ವೇದದ ಅಮೂಲ್ಯ ರತ್ನ ʼಅಗ್ನಿಶಿಖೆʼ ಪತ್ತೆ
Share on WhatsAppShare on FacebookShare on Telegram

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ….. ಲಿಲಿಯೇಸಿ ಕುಟುಂಬಕ್ಕೆ ಸೇರಿದ ಗಿಡವೊಂದನ್ನು ಮತ್ತೆ ಈ ಬಾರಿಯ ಮುಂಗಾರು ಮಳೆ ಕರುಣಿಸಿದೆ. ಹೌದು, ವಿಷಜಂತುಗಳ ವಿಷವನ್ನೇ ಕರಗಿಸಬಲ್ಲ ಅಮೂಲ್ಯವಾದ ಔಷಧೀಯ ಗುಣ ಹೊಂದಿರುವ ಸಸ್ಯವೊಂದು ಮಳೆ ಅಭಾವ, ಅರಣ್ಯನಾಶದಿಂದ ವಿನಾಶದಂಚಿನಲ್ಲಿತ್ತು. ಇಷ್ಟು ದಿನ ಕಣ್ಮರೆಯಾಗಿದ್ದ ಸಸ್ಯ ಈ ಬಾರಿಯ ಮುಂಗಾರು ಮಳೆಗೆ ನರೇಗಲ್ ಹೋಬಳಿಯ ಹಳ್ಳ, ಸರುವು ಭಾಗದ ಅಡವಿ ಪ್ರದೇಶದಲ್ಲಿ ಮತ್ತೆ ಪತ್ತೆಯಾಗಿದೆ. ಇದು ಒಂದು ಬಳ್ಳಿ ತರಹದ ಗಿಡವಾಗಿದೆ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದೆ. ಇದನ್ನು ಸಂಸ್ಕೃತದಲ್ಲಿ ಲಾಂಗಲೀ, ತಾಮ್ರಚೂಡ, ಆಂಗ್ಲ ಭಾಷೆಯಲ್ಲಿ ಫೈರ್‌ ಲಿಲ್ಲಿ ಹಾಗೂ ವೈಜ್ಞಾನಿಕವಾಗಿ ಗ್ಲೋರಿಯೊಸಾ ಸುರ‍್ಬಾ ಎಂದು ಕರೆದರೆ ಕನ್ನಡದಲ್ಲಿ ಅಗ್ನಿಶಿಖೆ, ಗೌರಿ ಹೂ, ಕೋಳಿ ಜುಟ್ಟಿನ ಹೂ, ಕೋಳಿ ಕಟುಕನ ಗಡ್ಡೆ, ಕಾಲಿಹರಿ, ನೆಲಗುಲಿಕ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ADVERTISEMENT

ಮಳೆಗಾಲ ಆರಂಭಗೊಂಡಾಗ ಅಡವಿ, ಪೊದರು ಪ್ರದೇಶಗಳಲ್ಲಿ ಕಂಡುಬರುತ್ತದೆ. ಈಗ ನರೇಗಲ್ ಹೋಬಳಿ ಕೆಲ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಈ ಸಸ್ಯವು ಕೆಂಪು ಅಥವಾ ಮರಳು ಮಣ್ಣಿನ ಭಾಗದಲ್ಲಿ ನೀರು ಹರಿದು ಹೋಗುವ ವ್ಯವಸ್ಥೆಯಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಕೋಮಲವಾದ ಉದ್ದನೆಯ ತಿಳಿ ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ಹಳದಿ ಮತ್ತು ಕೆಂಪು ಬಣ್ಣದ ಹೂವುಗಳು ತುಂಬಾ ಸುಂದರವಾಗಿರುತ್ತವೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಹೂ ಬಿಡುವ ಈ ಸಸ್ಯ ನೋಡುಗರನ್ನು ಆಕರ್ಷಿಸುತ್ತದೆ. ನೈಸರ್ಗಿಕವಾಗಿ ಚಿಟ್ಟೆಗಳು ಮತ್ತು ಸೂರಹಕ್ಕಿಗಳು ಗೌರಿಹೂವಿನ ಪರಾಗಸ್ಪರ್ಷ ಮಾಡುತ್ತವೆ.

ಈ ಸಸ್ಯದ ಬೇರು ಗಡ್ಡೆಯನ್ನು ವಿಷಜಂತು, ವಿಷಕೀಟ, ಚೇಳು, ಹಾವು ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ. ಶುಚಿಗೊಳಿಸಿ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳುತ್ತಾರೆ. ಅನಾದಿ ಕಾಲದಿಂದಲೂ ಗಿರಿಜನ, ಬುಡಕಟ್ಟು ಜನ, ಅರಣ್ಯವಾಸಿಗಳು, ಕುರಿಗಾಯಿಗಳು ಇದರ ಬೇರುಗಡ್ಡೆಯನ್ನು ಸಂರಕ್ಷಿಸಿಟ್ಟುಕೊಳ್ಳುತ್ತ ಬಂದಿದ್ದಾರೆ. ಅಷ್ಟೇ ಅಲ್ಲದೆ ತೀವ್ರ ಸ್ವರೂಪದ ಸಂಧಿವಾತ, ಚರ್ಮರೋಗ, ಹುಣ್ಣು(ಕುರ) ನಿವಾರಣೆಗೂ ಬಳಸುತ್ತಾರೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಮಾಹಿತಿ ನೀಡಿದರು.

ಅಗ್ನಿಶಿಖೆ ಸಸ್ಯದಲ್ಲಿ ಕೋಲ್ಶಿಸಿನ್ ಎಂಬ ಆಲ್ಕಲಾಯಿಡ್ ಇರುತ್ತದೆ. ಇದು ಔಷಧಿ ತಯಾರಿಗೆ ಬೇಕಾಗುವ ಪ್ರಮುಖ ರಾಸಾಯನಿಕ ಇದಾಗಿದೆ. ಈ ರಾಸಾಯನಿಕವು ನೈಸರ್ಗಿಕ ರೂಪದಲ್ಲಿ ಲಭಿಸುವುದರಿಂದ ಈ ಸಸ್ಯದ ಬೇರುಗಡ್ಡೆ ಹಾಗೂ ಬೀಜಗಳಿಗೆ ಜಾಗತಿಕ ಮಟ್ಟದಲ್ಲಿ ಬೆಲೆಬಾಳುವ ಮಾರುಕಟ್ಟೆಯಿದೆ. ಈಗಲೂ ಈ ಅಪರೂಪದ ಸಸ್ಯದ ಮೇಲೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎನ್ನುತ್ತಾರೆ ಆಯುಷ್ ವೈದ್ಯ ಡಾ. ನಾಗರಾಜ ಎಲ್. ಗ್ರಾಮಪುರೋಹಿತ್.

ದೇವರಿಗೆ ಅತಿಪ್ರಿಯವಾದ ಹೂವಾಗಿದ್ದು ಕಾಡು ಜನರು ಧಾರ್ಮಿಕ ಆಚರಣೆಗಳಲ್ಲಿ ಎಲ್ಲಿಂದಲಾದರೂ ಹುಡುಕಿ ತಂದು ದೇವರಿಗೆ ಅರ್ಪಿಸಿ ಗೌರವಿಸುವ ಸಂಪ್ರದಾಯವಿದೆ ಎಂದು ಗ್ರೀನ್ ಆರ್ಮಿ ತಂಡದ ಸದಸ್ಯ ಕಿರಣಕುಮಾರ ತಳಕವಾಡ ತಿಳಿಸಿದರು.

ಇಂತಹ ಹಲವಾರು ಸಸ್ಯಗಳು ಉತ್ತರ ಕರ್ನಾಟಕದ ಬಯಲು ಸೀಮೆಯ ಪ್ರದೇಶದಲ್ಲಿವೆ. ಅವುಗಳನ್ನು ಗುರುತಿಸುವ ಕಾರ್ಯವಾಗಬೇಕು. ಅವುಗಳನ್ನು ಒಂದೆಡೆ ಸೇರಿಸಿ, ಬೆಳೆಸಿ ಪೋಷಿಸಿ ಅವುಗಳಿಂದಾಗುವ ಉಪಯೋಗವನ್ನು ಸಾಮಾನ್ಯ ಜನರಿಗೆ ತಲುಪಿಸುವ ಯೋಜನೆಯನ್ನು ರೂಪಿಸಬೇಕು. ಇಂದು ಅನೇಕ ಜನರು ಸಂಧಿವಾತ, ಚರ್ಮರೋಗ, ಜ್ವರ ಹೀಗೆ ಅನೇಕ ಸಂಕಷ್ಟ ಗಳಿಂದ ಬಳಲುತ್ತಿದ್ದಾರೆ. ಅಲೋಪಥಿಕ್ ಔಷಧಿಗಳಿಗಿಂತ ಅಯರ್ವೇದದ ಗಿಡಮೂಲಿಕೆಗಳಿಂದ ರೋಗಗಳ ನಿವಾರಣೆ ಸಾಧ್ಯ. ಇಂತಹ ಕೆಲಸಕ್ಕೆ ಪಾರಂಪರಿಕ ವೈದ್ಯರು ಮುಂದಾಗಬೇಕಿದೆ.

Tags: AyurvedaBiodiversityFire lilyʼಅಗ್ನಿಶಿಖೆʼಆಯುರ್ವೇದಜೀವವೈವಿಧ್ಯ
Previous Post

BS ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ಕೊಟ್ಟವರು ಯಾರು..?

Next Post

ಇಂದು ಮಹತ್ವದ ಜಿಎಸ್‌ಟಿ ಕೌನ್ಸಿಲ್ ಸಭೆ: ರಾಜ್ಯಗಳಿಗೆ ಸಿಗುತ್ತಾ ಹೆಚ್ಚಿನ ಪ್ರಮಾಣದ ಪಾಲು?

Related Posts

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?
Top Story

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

by ಪ್ರತಿಧ್ವನಿ
April 22, 2026
0

ಗದಗ :  ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ. https://youtu.be/dMLKOlJu3kY?si=xK3Kdu_8RkdSidp9...

Read moreDetails
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
Next Post
ಇಂದು ಮಹತ್ವದ ಜಿಎಸ್‌ಟಿ ಕೌನ್ಸಿಲ್ ಸಭೆ: ರಾಜ್ಯಗಳಿಗೆ ಸಿಗುತ್ತಾ ಹೆಚ್ಚಿನ ಪ್ರಮಾಣದ ಪಾಲು?

ಇಂದು ಮಹತ್ವದ ಜಿಎಸ್‌ಟಿ ಕೌನ್ಸಿಲ್ ಸಭೆ: ರಾಜ್ಯಗಳಿಗೆ ಸಿಗುತ್ತಾ ಹೆಚ್ಚಿನ ಪ್ರಮಾಣದ ಪಾಲು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada