ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಉಸ್ತುವಾರಿ ಬದಲಾವಣೆಯನ್ನು ಬಿಜೆಪಿ ಮಾಡಿದೆ. ತೆರೆಮರೆಯಲ್ಲಿ ಸದ್ದಿಲ್ಲದೆ, ಈ ಹಿಂದೆ ಆರ್. ಅಶೋಕ್ ಅವರಿಗೆ ನೀಡಿದ್ದ ಕ್ಷೇತ್ರದ ಉಸ್ತುವಾರಿಯನ್ನು ಡಾ.ಸಿ.ಎನ್. ಅಶ್ವತ್ಥ್ನಾರಾಯಣ್ ಅವರ ಹೆಗಲಿಗೆ ವಹಿಸಿದೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬಳಿಕ ಶುರುವಾಯಿತು ಹೊಸ ರಾಜಕೀಯ ಲೆಕ್ಕಾಚಾರ ಈ ಕ್ಷೇತ್ರಕ್ಕಾಗಿಯೇ ಶುರುವಾಗಿದ್ದು, ಆರ್.ಅಶೋಕ್ ಬದಲಿಗೆ ಡಾ.ಸಿ. ಎನ್. ಅಶ್ವತ್ಥ್ನಾರಾಯಣ್ಗೆ ಉಸ್ತುವಾರಿ ಬದಲಾವಣೆ ಮಾಡಲಾಗಿದೆ.
ಅಷ್ಟಕ್ಕೂ ಬೆಂಗಳೂರು ಗ್ರಾಮಾಂತರ ಅಖಾಡದಲ್ಲಿ ಉಸ್ತುವಾರಿ ಬದಲಾಗಿದ್ದೇಕೆ?
ಇನ್ನು ಆರ್.ಅಶೋಕ್ರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎತ್ತಂಗಡಿ ಮಾಡಿ, ಆ ಸ್ಥಾನಕ್ಕೆ ಅಶ್ವತ್ಥ್ನಾರಾಯಣ್ ಅವರನ್ನು ಕರೆ ತಂದಿದ್ದು ಏಕೆ? ಎಂಬುದನ್ನು ನೋಡುವುದಾದ್ರೆ,
ಈ ಹಿಂದೆ ಅಶ್ವತ್ಥ್ನಾರಾಯಣ್ ಹಾಕಿದ ಅದೊಂದು ಅವಾಜ್ ಇಲ್ಲಿಯೂ ವರ್ಕ್ಔಟ್ ಆಗಿದೆ ಎನ್ನಲಾಗಿದೆ.
“ಪ್ರತಿಧ್ವನಿ” ಗೆ ಬಿಜೆಪಿಯ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಸಿ.ಎನ್ ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ. ಡಾ.ಸಿ.ಎನ್. ಮಂಜುನಾಥ್. ಹೆಚ್. ಡಿ. ದೇವೇಗೌಡರ ಅಳಿಯ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಕೂಡ ಹೌದು. ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವವರು. ಇತ್ತ ಕಾಂಗ್ರೆಸ್ನಿಂದ ಎದುರಾಳಿ ಆಗಿರುವವರು ಡಿ.ಕೆ.ಸುರೇಶ್.
ಇನ್ನು ಡಿ.ಕೆ.ಸುರೇಶ್ ಅವರನ್ನು ಎದುರಿಸಬೇಕಾದ್ರೆ, ಗಡಸುತನ ಇರಲೇಬೇಕು. ನಿಮಗೆಲ್ಲಾ ನೆನಪಿರಬಹುದು ಅದೊಂದು ಘಟನೆ ನಡೆದಿತ್ತು ರಾಮನಗರದ ನೆಲದಲ್ಲಿ. ಎಲ್ಲರಿಗೂ ಆ ಘಟನೆ ನೆನಪು ಇದ್ದೇ ಇರುತ್ತದೆ.
ಅದು ರಾಮನಗರ ಜಿಲ್ಲಾಡಳಿತದ ವತಿಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮ. ಆ ಕಾರ್ಯಕ್ರಮದ ವೇದಿಕೆಯಲ್ಲಿ ಅಂದಿನ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಸಿ. ಎನ್.ಅಶ್ವತ್ಥ್ನಾರಾಯಣ್ ಭಾಷಣ ಆರಂಭ ಮಾಡಿದ್ರು.ಅದೇ ಸಂದರ್ಭದಲ್ಲಿ ಕೆಲ ನಾಯಕರುಗಳು ಡಿಕೆ, ಡಿಕೆ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಅಶ್ವತ್ಥ್ನಾರಾಯಣ್ ಭಾಷಣಕ್ಕೂ ಅದು ಅಡ್ಡಿಯುಂಟು ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅಶ್ವತ್ಥ್ನಾರಾಯಣ್ ಅವಾಜ್ ಹಾಕಿದರು. ವೇದಿಕೆಯಲ್ಲಿದ್ದ ಸಂಸದ ಡಿ.ಕೆ. ಸುರೇಶ್ಗೂ ಅಶ್ವತ್ಥ್ನಾರಾಯಣ್ಗೂ ವೇದಿಕೆಯಲ್ಲಿಯೇ ಮುಖಾಮುಖಿ ಆಗಿ ಹೋಯಿತು. ಇದು ರಾಷ್ಟ್ರಮಟ್ಟದಲ್ಲೂ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಯಿತು.
ಇದೇ ಇಂದು ಅಶ್ವತ್ಥ್ನಾರಾಯಣ್ಗೆ ವರ್ಕ್ಔಟ್ ಆಗಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಸ್ತುವಾರಿ ಬದಲಾವಣೆ ಮಾಡಲಾಗಿದೆ ಎಂಬ ಮಾತು ಆರಂಭವಾಗಿದೆ.
ಈ ಮೊದಲು ಆರ್.ಅಶೋಕ್ಗೆ ಉಸ್ತುವಾರಿ ಕೊಟ್ಟಿದ್ದು, ಈಗ ಅವರ ಬದಲಿಗೆ ಅಶ್ವತ್ಥ್ನಾರಾಯಣ್ಗೆ ಉಸ್ತುವಾರಿ ನೀಡಲಾಗಿದೆ. ಅದೊಂದು ಘಟನೆಯನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅಮಿತ್ ಶಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಶತಾಯಗತಾಯ ಬೆಂಗಳೂರು ಗ್ರಾಮಾಂತರ ಗೆಲ್ಲಲೇಬೇಕೆಂದು ಅಶ್ವತ್ಥ್ನಾರಾಯಣ್ ಅವರಿಗೆ ಉಸ್ತುವಾರಿ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.