ಸರ್ಕಾರದ ಮೊನೊಗ್ರಾಮ್ ಬಳಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನಕಲು ಮಾಡಿ ಸರ್ಕಾರ ಮತ್ತು ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆಂದು ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕಾರ್ಯಾಚರಣೆ ಯಶಸ್ವಿಗೊಳಿಸಿದ ಪೊಲೀಸ್ ತಂಡಕ್ಕೆ ಇಲಾಖೆ ವತಿಯಿಂದ 40 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಮನೊಗ್ರಾಮ್ ಬಳಸಿ ವಾಹನಗಳ ಡಿಎಲ್ ,ಆರ್ ಸಿ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ಕಾರ್ಡ್ , ಗುರುತಿನ ಚೀಟಿಗಳನ್ನು ನಕಲಿ ತಯಾರಿಸಿ ಸರ್ಕಾರ ಮತ್ತು ಸಾರ್ವಜನಿಕರನ್ನು ವಂಚಿಸುತ್ತಿದ್ದ ಈ ಜಾಲದ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಂಧಿತ ಆರೋಪಿಗಳಿಂದ ಸರ್ಕಾರದ ಮೊನೊಗ್ರಾಮ್ ಇರುವ 9 ಸಾವಿರ ಆಧಾರ್ಕಾರ್ಡ್, 1200 ರೇಷನ್ಕಾರ್ಡ್ಗಳು, ವಿಳಾಸ ನಮೂದಿಸದೆ ಇರುವ 20 ಸಾವಿರ ಮತ್ತು ನಮೂದಿಸಿರುವ 6240 ಮತದಾನದ ಗುರುತಿನ ಚೀಟಿಗಳು, 250 ಆರ್ಸಿ ಬುಕ್ಗಳು, ತಯಾರಿಕೆಗೆ ಬಳಸುತ್ತಿದ್ದ 3 ಲ್ಯಾಪ್ಟಾಪ್,ಪ್ರಿಂಟರ್, ಸಿಪಿಯು ಮತ್ತು 60 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸರ್ಕಾರಿ ದಾಖಲಾತಿಗಳನ್ನು ಮುದ್ರಿಸುವ ಗುತ್ತಿಗೆ ಕಂಪನಿಯಾದ ರೋಸ್ ಮಾರ್ಟ್ನನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಡಾಟಾ ಕದ್ದು ನಕಲಿ ತಯಾರಿಯಲ್ಲಿ ತೊಡಗಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಈ ಸಂಬಂಧ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಡಿಸಿಪಿ ರವಿಕುಮಾರ್ ಉಪಸ್ಥಿತರಿದ್ದರು.