ಭಾರತೀಯ ಸರ್ಕಾರಿ ಸ್ವಾಮ್ಯದ Sansad Tv ಯ ಯೂಟ್ಯೂಬ್ ಚಾನಲ್ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರದ್ದುಗೊಳಿಸಲಾಗಿದೆ.
ಸದ್ಯದ ಮಟ್ಟಿಗೆ ವಾಹಿನಿಯೂ ಯಾವ ಮಾರ್ಗಸೂಚಿಯನ್ನು ಉಲ್ಲಂಘಿಸಿದೆ ಎಂದು ಸ್ಪಷ್ಟಪಡಿಸಿಲ್ಲ. ಸದ್ಯ ಈ ಕುರಿತು ಗೂಗಲ್ಗೆ ಇ ಮೇಲ್ ಮಾಡಲಾಗಿದ್ದು ಇನ್ನು ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದು ಬಂದಿದೆ.
2021ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ವಿಸರ್ಜಿಸಿ ಹೊಸದಾಗಿ ಸಂಸದ್ ಟಿವಿಯನ್ನು ರಚಿಸಲಾಗಿತ್ತು. ವಾಹಿನಿಯೂ ಮೇಲ್ಮನೆ ಹಾಗೂ ಕೆಳಮನೆ ಕಲಾಪಗಳ ನೇರ ಪ್ರಸಾರದ ಜೊತೆಗೆ ಕೆಲವು ಧ್ವನಿಮುದ್ರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತಿತ್ತು.

ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಯೂಟ್ಯೂಬ್ ಸಮುದಾಯ ಮಾರ್ಗಸೂಚಿಗಳ ಪುಟದ ಪ್ರಕಾರ ವಾಹಿನಿಯೂ ಮಾನವ ವಿಮರ್ಶಕರು ಹಾಗೂ ಯಂತ್ರ ಕಲಿಕೆಯ ಸಂಯೋಜನೆಯನ್ನು ಬಳಸಿಕೊಂಡು ನಿಯಮಗಳನ್ನು ಜಾರಿಗೆ ತರುತ್ತದೆ. ವಿಷಯ ಅಥವಾ ದೃಷ್ಟಿಕೋನ, ರಾಜಕೀಯ ಹಿನ್ನೆಲೆ ಮತ್ತು ಅದಕ್ಕೆ ಸಂಬಂಧಪಟ್ಟವರ್ನು ಲೆಕ್ಕಿಸದೆ ಎಲ್ಲರಿಗೂ ಮಾರ್ಗಸೂಚಿಗಳು ಅನ್ವಯಿಸುತ್ತವೆ ಎಂದು ಯೂಟ್ಯೂಬ್ ಮಾರ್ಗಸೂಚಿ ಹೇಳುತ್ತದೆ.
ಸದ್ಯ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವ ಉಲ್ಲಂಘನೆಗಳು ಫೇಕ್ ಎಂಗೇಜ್ಮೆಂಟ್ಸ್, ಮಕ್ಕಳ ಸುರಕ್ಷತೆ, ನಗನತೆ ಹಾಗೂ ಲೈಂಗಿಕ ವಿಷಯಕ್ಕೆ ಸಂಬಂಧಿಸಿರುವುದಾಗಿ ತಿಳಿದು ಬಂದಿದೆ.