ನವದೆಹಲಿ : ಇಂದು ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಸಿಹಿಸುದ್ದಿ (Good News) ನೀಡಲಾಗಿದ್ದು, ತುಟ್ಟಿಭತ್ಯೆಯನ್ನು (DA) ಶೇಕಡಾ 3ರಷ್ಟು ಹೆಚ್ಚಿಸಲು ಅಧಿಕೃತ ಅನುಮೋದನೆ ನೀಡಲಾಗಿದೆ. ಈ ನಿರ್ಧಾರದಿಂದಾಗಿ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಆರ್ಥಿಕ ಅನುಕೂಲವಾಗಲಿದೆ.
ಮೂಲ ವೇತನದ ಶೇ. 63ಕ್ಕೆ ಏರಿಕೆಯಾದ ತುಟ್ಟಿಭತ್ಯೆ
ಈ ನೂತನ ಹೆಚ್ಚಳದೊಂದಿಗೆ ನೌಕರರ ಒಟ್ಟು ತುಟ್ಟಿಭತ್ಯೆಯ ಪ್ರಮಾಣವು ಪ್ರಸ್ತುತ ಇರುವ ಶೇಕಡಾ 60ರಿಂದ ಶೇಕಡಾ 63ಕ್ಕೆ ತಲುಪಲಿದೆ. ಬೆಲೆ ಏರಿಕೆ ಮತ್ತು ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರವು ಈ ತೀರ್ಮಾನವನ್ನು ಕೈಗೊಂಡಿದ್ದು, ನೌಕರರ ಮಾಸಿಕ ವೇತನದಲ್ಲಿ ಗಮನಾರ್ಹ ಏರಿಕೆ ಕಂಡುಬರಲಿದೆ.
ಹಿಂದಿನ ಪರಿಷ್ಕರಣೆಯ ವಿವರ
ಸರ್ಕಾರವು ಈ ಹಿಂದೆ ಜಾರಿಗೆ ತಂದಿದ್ದ ಪರಿಷ್ಕರಣೆಯಲ್ಲಿ ತುಟ್ಟಿಭತ್ಯೆಯನ್ನು ಶೇಕಡಾ 60ಕ್ಕೆ ಏರಿಕೆ ಮಾಡಿತ್ತು. ಈ ಹಿಂದಿನ ಆದೇಶವು 2026ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿತ್ತು. ಇದೀಗ ಮತ್ತೆ ಶೇಕಡಾ 3ರಷ್ಟು ಹೆಚ್ಚಳ ಮಾಡಿರುವುದರಿಂದ ನೌಕರರ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
ಕಾಂಗ್ರೆಸ್‌ನ ಮತಗಳ್ಳತನದ ಸುಳ್ಳನ್ನು ತಿರಸ್ಕರಿಸಿದ ಪ್ರಜ್ಞಾವಂತ ಮತದಾರರು : ಬಿ.ಎಸ್. ಯಡಿಯೂರಪ್ಪ






