• Home
  • About Us
  • ಕರ್ನಾಟಕ
Tuesday, December 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಜ್ಜನಿಗೆ ಆಮ್ಲಜನಕ ಬೇಕಾಗಿದೆ ಎಂದು ಸಹಾಯ ಕೋರಿದ ಯುವಕನ ವಿರುದ್ಧ FIR ದಾಖಲಿಸಿದ ಉತ್ತರ ಪ್ರದೇಶ ಸರ್ಕಾರ

ಫಾತಿಮಾ by ಫಾತಿಮಾ
April 28, 2021
in ದೇಶ
0
ಅಜ್ಜನಿಗೆ ಆಮ್ಲಜನಕ ಬೇಕಾಗಿದೆ ಎಂದು ಸಹಾಯ ಕೋರಿದ ಯುವಕನ ವಿರುದ್ಧ FIR ದಾಖಲಿಸಿದ ಉತ್ತರ ಪ್ರದೇಶ ಸರ್ಕಾರ
Share on WhatsAppShare on FacebookShare on Telegram

ತನ್ನ ತಾತನಿಗೆ ಆಕ್ಸಿಜನ್ ಸಿಲಿಂಡರ್ ಗಾಗಿ ಮನವಿ ಮಾಡಿದ ಯುವಕನೊಬ್ಬನ‌‌ ಮೇಲೆ ಯುಪಿ‌‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು‌ ‘ದಿ ವೈರ್’ ವರದಿ ಮಾಡಿದೆ. ಶಶಾಂಕ್ ಯಾದವ್ ಅವರ ಅಜ್ಜನಿಗೆ ಕರೋನವೈರಸ್ ಇದೆಯೇ ಎಂದು ಉಲ್ಲೇಖಿಸಿರಲಿಲ್ಲ.  ಆದರೆ, ಭಯ  ಉಂಟುಮಾಡುವ ಉದ್ದೇಶದಿಂದ ವದಂತಿಯನ್ನು ಪ್ರಸಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ADVERTISEMENT

ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ, ಈ ವ್ಯಕ್ತಿ “ದಾರಿತಪ್ಪಿಸುವ ಮಾಹಿತಿಯನ್ನು ಹರಡುತ್ತಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.  ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಲು ಯಾದವ್ ಆಮ್ಲಜನಕ ಪೂರೈಕೆ ಮತ್ತು ಕರೋನವೈರಸ್ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ರಾಮಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೀರೇಂದ್ರ ಸಿಂಗ್ ಹೇಳಿದ್ದಾರೆ.  “ವಿಚಾರಣೆಯ ಸಮಯದಲ್ಲಿ ಆರೋಪಿಯ ಸುಳ್ಳು ಟ್ವೀಟ್‌ನ ಕಾರಣದಿಂದಾಗಿ ಹಲವಾರು ವ್ಯಕ್ತಿಗಳು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ಕಂಡುಬಂದಿದೆ” ಎಂದು ಸಿಂಗ್ ಪತ್ರಿಕೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಯಾದವ್ ಅವರು ಸೋಮವಾರ ಸಂಜೆ ಟ್ವಿಟರ್ ಬಳಸಿ ಎಸ್‌ಒಎಸ್ ಕಳುಹಿಸಿ ನಟ ಸೋನು ಸೂದ್ ಅವರನ್ನು ಟ್ಯಾಗ್ ಮಾಡಿದ್ದರು.  ಅವರ ಸ್ನೇಹಿತ ಅಂಕಿತ್‌ ಆ ಸಂದೇಶವನ್ನು ಬಳಸಿ ‘ದಿ ವೈರ್’ ಪತ್ರಕರ್ತ ಅರ್ಫಾ ಖನುಮ್ ಶೆರ್ವಾನಿ ಅವರ ಸಹಾಯವನ್ನು ಕೋರಿದರು. ಕೆಲವು ಗಂಟೆಗಳ ನಂತರ, ಶೆರ್ವಾನಿ ಅವರು ಯಾದವ್ ಅವರ ಅಜ್ಜನಿಗೆ ಸಹಾಯ ಕೇಳುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.  ಈ ಸಂದೇಶಗಳಲ್ಲಿ ಎಲ್ಲೂ ಕರೋನ ವೈರಸ್ ಅನ್ನು ಉಲ್ಲೇಖಿಸಿರಲಿಲ್ಲ. ಆದರೆ ಸಹಾಯಕ್ಕಾಗಿ ಕೇಂದ್ರ ಸಚಿವ ಮತ್ತು ಅಮೆಥಿ ಸಂಸದೆ ಸ್ಮೃತಿ ಇರಾನಿಯವರನ್ನೂ  ಟ್ಯಾಗ್ ಮಾಡಲಾಗಿತ್ತು.

30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ‌‌ ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು ತಾನು ಯಾದವ್‌ಗೆ ಹಲವು ಬಾರಿ ಕರೆ ಮಾಡಿದ್ದೇನೆ ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಅಮೆಥಿ ಪೊಲೀಸರನ್ನು ಸಹ ಸಹಕರಿಸಲು ಕೇಳಿಕೊಂಡಿದ್ದೆ ಎಂದು ಅವರು ಹೇಳಿದರು.

ಆದರೆ ಅಷ್ಟು ಹೊತ್ತಿಗೆ ಯಾದವ್ ಅವರ ಅಜ್ಜ ನಿಧನರಾದರು.  ಈ ಬಗ್ಗೆ ಅಂಕಿತ್ ಶೆರ್ವಾನಿಗೆ ಮಾಹಿತಿ ನೀಡಿದ ನಂತರ, ಅವರು ಮಾಹಿತಿಯನ್ನು ಇರಾನಿಗೆ ರವಾನಿಸಿದರು.  ಕೇಂದ್ರ ಸಚಿವರು ಅವರು ತಮ್ಮ ಸಂತಾಪ ವ್ಯಕ್ತಪಡಿಸಿದರು. ಅದೇ ಸಂಜೆ ಯಾದವ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪೊಲೀಸರು “88 ವರ್ಷದ ಆ ವ್ಯಕ್ತಿಗೆ ಕರೋನಾ ವೈರಸ್ ಇರಲಿಲ್ಲ. ಅವರು ರಾತ್ರಿ 8 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ” ಎಂದು ಹೇಳಿದರು.  “ಈ ಸಮಯದಲ್ಲಿ ಭಯ ಹುಟ್ಟಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಖಂಡನೀಯ ಮಾತ್ರವಲ್ಲ ಕಾನೂನು ಪ್ರಕಾರ ಅಪರಾಧವೂ ಹೌದು” ಎಂದು ಪೊಲೀಸರು ತಿಳಿಸಿದ್ದಾರೆ. ಈ‌ ಹಿನ್ನೆಲೆಯಲ್ಲಿ ರಾಮ್‌ಗಂಜ್ ಪೊಲೀಸ್ ಸ್ಟೇಷನ್‌ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಯುಪಿ ಮುಖ್ಯಮಂತ್ರಿ ಘೋಷಿಸಿದ ಕೆಲವೇ ದಿನಗಳ ನಂತರ ಪೊಲೀಸರು ಈ‌ ಕ್ರಮ ಕೈಗೊಂಡಿದ್ದಾರೆ. ಎಪ್ರಿಲ್ 24ರಂದು ಕೆಲವೇ ಪತ್ರಕರ್ತರನ್ನೊಳಗೊಂಡ ವರ್ಚುವಲ್ ಮೀಟಿಂಗ್ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯ‌ನಾಥ್ ಅವರು ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕೊರತೆ ಇದೆ ಎಂದು ವದಂತಿ ಹಬ್ಬಿಸುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದ್ದರು.

ಎಪ್ರಿಲ್ 25ರಂದು ನಡೆದ ಉನ್ನತ ಅಧಿಕಾರಿಗಳ‌‌‌ ಪರಿಶೀಲನಾ ಸಭೆಯಲ್ಲೂ ಆಕ್ಸಿಜನ್ ಕೊರತೆಯ ಬಗ್ಗೆ ರಿಪೋರ್ಟ್ ಮಾಡುವ ಖಾಸಗಿ ಆಸ್ಪತ್ರೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆದೇಶಿಸಿದ್ದಾರೆ ಎಂದು ‘ದಿ ಹಿಂದು’ ವರದಿ ಮಾಡಿದೆ.


ಕಳೆದ ವಾರ ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಟ್ವಿಟ್ಟರ್ ಕೋವಿಡ್ ಎರಡನೇ ಅಲೆಗೆ ಸಂಬಂಧಿಸಿದ 52 ಟ್ವೀಟ್‌ಗಳನ್ನು ಡಿಲೀಟ್ ಮಾಡಿತ್ತು. ಅವುಗಳಲ್ಲಿ ಬಹುತೇಕ ಟ್ವೀಟ್‌ಗಳು‌ ಆಕ್ಸಿಜನ್ ಕೊರತೆಗೆ ಸಂಬಂಧಿಸಿದ್ದು. ಇದಾಗಿ ಒಂದು ದಿನದ ನಂತರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸುಮಾರು 100 ಪೋಸ್ಟ್‌ಗಳನ್ನು ತೆಗೆದುಹಾಕಲು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕೋರಿಕೊಂಡಿತ್ತು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

Tags: Youth Sought Oxygen for Grandfather via Tweet
Previous Post

ಸಿದ್ದೀಕ್‌ ಕಪ್ಪನ್‌ರನ್ನು ದೆಹಲಿ AIIMS ಗೆ ದಾಖಲಿಸುವಂತೆ UP ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

Next Post

ಅಕ್ಕಿ ಕೇಳಿದವರಿಗೆ ಸತ್ತು ಹೋಗು ಅಂದದ್ದನ್ನೂ ಸಮರ್ಥಿಸಿಕೊಂಡ ಸಚಿವ ಉಮೇಶ್ ಕತ್ತಿ!

Related Posts

Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
0

ಸಮಾಜದಲ್ಲಿ ಬದಲಾವಣೆ ಬೇಕಾದರೆ ಮೊದಲು ಸರಿಯಾದ ಜನಪ್ರತಿನಧಿಯನ್ನು ಆಯ್ಕೆ ಮಾಡಬೇಕು. ಈ ಆಯ್ಕೆ ಮಾಡುವುದು ಸವಾಲಿನ ಕೆಲಸ. ಇದು ಜವಾಬ್ದಾರಿಯುತವಾದ ಕೆಲಸ ಎಂದು ಕಾರ್ಮಿಕ ಹಾಗೂ ಧಾರವಾಡ...

Read moreDetails

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025

“ವೃಷಭ” ಗೂಳಿ ತರಹ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೂ ಒಳ್ಳೆಯದಾಗಲಿ: ಡಿ.ಕೆ.ಶಿವಕುಮಾರ್

December 22, 2025
ಪಾಕಿಸ್ತಾನಕ್ಕೆ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ: ಉಡುಪಿಯಲ್ಲಿ ಮತ್ತೊಬ್ಬನ ಬಂಧನ

ಪಾಕಿಸ್ತಾನಕ್ಕೆ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ: ಉಡುಪಿಯಲ್ಲಿ ಮತ್ತೊಬ್ಬನ ಬಂಧನ

December 22, 2025
Ahmedabad: ಮಹಿಳೆಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ: ವಿಡಿಯೋ ವೈರಲ್‌

Ahmedabad: ಮಹಿಳೆಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ: ವಿಡಿಯೋ ವೈರಲ್‌

December 21, 2025
Next Post
ಅಕ್ಕಿ ಕೇಳಿದವರಿಗೆ ಸತ್ತು ಹೋಗು ಅಂದದ್ದನ್ನೂ ಸಮರ್ಥಿಸಿಕೊಂಡ ಸಚಿವ ಉಮೇಶ್ ಕತ್ತಿ!

ಅಕ್ಕಿ ಕೇಳಿದವರಿಗೆ ಸತ್ತು ಹೋಗು ಅಂದದ್ದನ್ನೂ ಸಮರ್ಥಿಸಿಕೊಂಡ ಸಚಿವ ಉಮೇಶ್ ಕತ್ತಿ!

Please login to join discussion

Recent News

Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
Top Story

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

by ಪ್ರತಿಧ್ವನಿ
December 22, 2025
ಹೊಸ ವರ್ಷಕ್ಕೆ ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಠಿಣ: ರಾಜ್ಯವ್ಯಾಪಿ ಪೊಲೀಸ್ ಬೇಟೆ
Top Story

ಹೊಸ ವರ್ಷಕ್ಕೆ ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಠಿಣ: ರಾಜ್ಯವ್ಯಾಪಿ ಪೊಲೀಸ್ ಬೇಟೆ

by ಪ್ರತಿಧ್ವನಿ
December 22, 2025
Top Story

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
December 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada