
ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರಾಮನಗರದ ಚನ್ನಪಟ್ಟಣದಲ್ಲಿ ಪ್ರವಾಸ ಕೈಗೊಂಡಿದ್ದು, ಇತ್ತೀಚೆಗೆ ನಿಧನರಾದ ಜೆಡಿಎಸ್ ಕಾರ್ಯಕರ್ತರ ನಿವಾಸಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಆಕ್ರೋಶ ಹೊರ ಹಾಕಿದ್ದ್ದು, ರಾಜ್ಯ ಸರ್ಕಾರ ಬಸ್ ದರ, ಹಾಲಿನ ದರ ಏರಿಕೆ ಮಾಡಿದೆ. ಗ್ಯಾರಂಟಿ ಹೆಸರಲ್ಲಿ ಗಿಮಿಕ್ ಮಾಡ್ತಿದ್ದಾರೆ. ಎಂಪಿ ಚುನಾವಣೆ ವೇಳೆ 4 ತಿಂಗಳ ಹಣ ಹಾಕಿದ್ರು. ಉಪಚುನಾವಣೆ ವೇಳೆ 3 ತಿಂಗಳ ಹಣ ಹಾಕಿದ್ರು. ಇನ್ನು ಜಿಲ್ಲಾ ಪಂಚಾಯತ್ – ತಾಲೂಕು ಪಂಚಾಯತ್ ಚುನಾವಣೆ ವೇಳೆ 6 ತಿಂಗಳ ಹಣ ಹಾಕ್ತಾರೆ. ರಾಜ್ಯದ ಸಂಪತ್ತನ್ನ ಕಾಂಗ್ರೆಸ್ ಕೊಳ್ಳೆ ಹೊಡಿತಿದೆ. ಇದಕ್ಕೆಲ್ಲ ಜನ ಕಾಲ ಬಂದಾಗ ಉತ್ತರ ಕೊಡ್ತಾರೆ ಅಂತ ಹೇಳಿದ್ರು.

ಇನ್ನು ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿದ ನಿಖಿಲ್ ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಚರ್ಚೆ ಆಗಿಲ್ಲ. ಇದೇ 12 ರಂದು ಭಾನುವಾರ ಪಕ್ಷದ ಕಚೇರಿಯಲ್ಲಿ ಸಭೆ ಇದೆ. ಶಾಸಕರು, ಮಾಜಿ ಶಾಸಕರು, ಮುಖಂಡರು ಬರಲಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡ್ತೇವೆ ಅಂತ ಹೇಳಿದ್ರು
ಹಾಸನದಲ್ಲಿ ಸಂಸದ ಶ್ರೇಯಸ್ ಪಟೇಲ್ ವಿರುದ್ಧ MLC ಸೂರಜ್ ರೇವಣ್ಣ ಕಿಡಿ ಕಾರಿದ್ದಾರೆ. ಸೂರಜ್ MLC ಆಗಿ ಮೂರು ವರ್ಷ ಆದ್ರೂ ಏನ್ ಮಾಡಿದ್ದಾರೆ ಅಂತ ಶ್ರೇಯಸ್ ಪಟೇಲ್ ಪ್ರಶ್ನೆ ಮಾಡಿದ್ದಾರೆ. ಸೂರಜ್ ರೇವಣ್ಣ ಮಾಡಿರುವ ಕೆಲಸಗಳು ಕಣ್ಮುಂದೆ ಇದೆ. ಸಂಸದರಿಗೆ ಮಾಹಿತಿ ಕೊರತೆ ಇರ್ಬೇಕು ಎಂದು ಕಿಡಿಕಾರಿದ್ದಾರೆ.
ನಾನು ಕೇವಲ ಹೊಳೆನರಸೀಪುರಕ್ಕೆ ಕೆಲಸ ಮಾಡಿಲ್ಲ. ಇಡೀ ಜಿಲ್ಲೆಗೆ ಬೇಕಾದ ರೀತಿ ಅನುದಾನ ನೀಡಿದ್ದೇನೆ. ಮೂರು ವರ್ಷದಲ್ಲಿ ಐವತ್ತು ಕೋಟಿ ಅನುದಾನ ಕೊಟ್ಟಿದ್ದೇನೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಹೋಗಿದೆ. ಹಳ್ಳಿಗಳಿಗೆ ಭೇಟಿ ಕೊಟ್ಟು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ಮಾಡಿದ್ದೇನೆ. ಸಂಸದನಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಶೂನ್ಯ ಅಂತ ಕಿಡಿಕಾರಿದ್ದಾರೆ.