• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಯಾನ್‌ ಇಂಡಿಯನ್‌ ನಾಗಬಂಧಂ- ದಿ ಸೀಕ್ರೆಟ್ ಟ್ರೆಷರ್ ಸಿನಿಮಾದ ಪ್ರೀ ಲುಕ್‌ ರಿಲೀಸ್‌;ಜನವರಿ 13ರಂದು ರುದ್ರನ ಅನಾವರಣ.

ಪ್ರತಿಧ್ವನಿ by ಪ್ರತಿಧ್ವನಿ
January 7, 2025
in Top Story, ಇತರೆ / Others, ಕರ್ನಾಟಕ
0
ಪ್ಯಾನ್‌ ಇಂಡಿಯನ್‌ ನಾಗಬಂಧಂ- ದಿ ಸೀಕ್ರೆಟ್ ಟ್ರೆಷರ್ ಸಿನಿಮಾದ ಪ್ರೀ ಲುಕ್‌ ರಿಲೀಸ್‌;ಜನವರಿ 13ರಂದು ರುದ್ರನ ಅನಾವರಣ.
Share on WhatsAppShare on FacebookShare on Telegram

ಟಾಲಿವುಡ್‌ನ ಫ್ಯಾಷನೇಟ್‌ ಸಿನಿಮಾ ಮೇಕರ್‌ಗಳಲ್ಲಿ ಒಬ್ಬರಾಗಿರುವ ಅಭಿಷೇಕ್ ನಾಮಾ ಈಗ ಪ್ಯಾನ್‌ ಇಂಡಿಯನ್‌ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಡೆವಿಲ್: ದಿ ಬ್ರಿಟಿಷ್ ಸೀಕ್ರೆಟ್ ಏಜೆಂಟ್ ಚಿತ್ರದ ಯಶಸ್ವಿ ನಿರ್ದೇಶನದ ನಂತರ, “ನಾಗಬಂಧಂ- ದಿ ಸೀಕ್ರೆಟ್ ಟ್ರೆಷರ್” ಸಿನಿಮಾದ ಜತೆಗೆ ಅವರ ಎಂಟ್ರಿಯಾಗಿದೆ. ಇಂದು (ಜ. 7) ಈ ಚಿತ್ರದ ಪ್ರಿ-ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಇದೇ ಚಿತ್ರದ ರುದ್ರನ ಲುಕ್‌ ಜನವರಿ 13ರಂದು ಚಿತ್ರತಂಡ ರಿವೀಲ್‌ ಮಾಡಲಿದೆ.

ADVERTISEMENT

ಅಭಿಷೇಕ್ ನಾಮಾ ನಿರ್ದೇಶನ ಮಾತ್ರವಲ್ಲದೆ, ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಅಭಿಷೇಕ್ ಪಿಕ್ಚರ್ಸ್ ಸಹಯೋಗದಲ್ಲಿ NIK ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಿಶೋರ್ ಅನ್ನಪುರೆಡ್ಡಿ ಮತ್ತು ತಾರಕ್ ಸಿನಿಮಾಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಿ ಇರಾ ಮತ್ತು ದೇವಾಂಶ್ ನಾಮಾ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.ಈ ಚಿತ್ರದಲ್ಲಿ ತೆಲುಗಿನ ಪೆದ್ದ ಕಾಪು ಚಿತ್ರದ ಮೂಲಕ ಗುರುತಿಸಿಕೊಂಡ ವಿರಾಟ್ ಕರ್ಣ ನಾಯಕನಾಗಿ ನಟಿಸುತ್ತಿದ್ದಾರೆ.

ಸದ್ಯ ರಿವೀಲ್‌ ಆಗಿರುವ ಪ್ರಿ-ಲುಕ್ ಪೋಸ್ಟರ್‌ನಲ್ಲಿ ನಾಯಕನು ಪುರಾತನ ದೇವಾಲಯದ ಬೃಹತ್ ಬಾಗಿಲಿನ ಮುಂದೆ ನಿಂತಿರುವುದನ್ನು ಕಾಣಬಹುದು. ಬಾಗಿಲು ಸ್ವಲ್ಪ ತೆರೆದಿರುವುದರಿಂದ, ಒಳಗಿನಿಂದ ಬೆಳಕು ಹೊರಸೂಸುತ್ತಿದೆ. ಅದರಂತೆ ಸಂಕ್ರಾಂತಿ ಹಬ್ಬದ ಜೊತೆಗೆ ಜನವರಿ 13 ರಂದು ಈ ಸಿನಿಮಾದ ಪ್ರಮುಖ ಪಾತ್ರವಾದ ರುದ್ರನನ್ನು ಪರಿಚಯಿಸುವುದಾಗಿ ತಯಾರಕರು ಘೋಷಿಸಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಪತ್ತೆಯಾದ ನಿಧಿ ಆಧರಿತ ಕಾಲ್ಪನಿಕ ಕಥೆ ಇದಾಗಿದ್ದು, ಅಭಿಷೇಕ್ ನಾಮ ಈ ಸಿನಿಮಾದ ಕಥೆ ಬರೆದಿದ್ದಾರೆ. ನಾಗಬಂಧಂ ಭಾರತದಲ್ಲಿನ 108 ವಿಷ್ಣು ದೇವಾಲಯಗಳ ಸುತ್ತಲಿನ ರಹಸ್ಯವನ್ನು ಸಿನಿಮಾ ಮೂಲಕ ತೆರೆದಿಡಲಿದೆಯಂತೆ. ಆ ನಿಧಿಯನ್ನು ಸರ್ಪಗಳು ರಕ್ಷಿಸುತ್ತಿವೆ ಎಂಬ ನಂಬಿಕೆಯ ಹಿನ್ನೆಲೆಯ ಕಥೆಯೂ ಈ ಚಿತ್ರದ್ದಾಗಿರಲಿದೆ .

ನಾಗಬಂಧಂ ಚಿತ್ರದಲ್ಲಿ ನಭಾ ನಟೇಶ್ ಮತ್ತು ಈಶ್ವರ್ಯ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ ಮತ್ತು ಜಗಪತಿ ಬಾಬು, ಜಯಪ್ರಕಾಶ್, ಮುರಳಿ ಶರ್ಮಾ ಮತ್ತು ಕೆಜಿಎಫ್ ಚಿತ್ರದ ಮೂಲಕ ಖ್ಯಾತಿ ಪಡೆದಿರುವ ಕನ್ನಡದ ನಟ ಅವಿನಾಶ್ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೌಂದರ್ ರಾಜನ್ ಎಸ್ ಕ್ಯಾಮರಾಮನ್‌ ಆಗಿದ್ದು, ಅಭೆ ಸಂಗೀತ ನೀಡಿದ್ದಾರೆ. ಕಲ್ಯಾಣ್ ಚಕ್ರವರ್ತಿ ಸಂಭಾಷಣೆ ಬರೆದಿದ್ದು, ಸಂತೋಷ್ ಕಾಮಿರೆಡ್ಡಿ ಸಂಕಲನ ಮಾಡಿದ್ದಾರೆ. ಅಶೋಕ್ ಕುಮಾರ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ.

ನಾಗಬಂಧಂ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, 2025ರಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಬರೋಬ್ಬರಿ 100 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ.

Tags: 108 Vishnu templesJagapathi BabuJayaprakashKalyan Chakrabortymovie "NagabandhamMurali Sharma and Kannada actor Avinash Aghori of KGF fame.Nagabandham stars Nabha Natesh and Eishwarya Menon as the female leads and features Jagapathi BabuSoundar Rajan S is the cameraman and Abhe.
Previous Post

ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಮೋದನೆಗೆ ಮನವಿ:ಸಚಿವ ಪ್ರಿಯಾಂಕ್ ಖರ್ಗೆ

Next Post

ಜೆಡಿಎಸ್‌ನಲ್ಲಿ ಆಕ್ಟೀವ್‌ ಆದ ಯುವ ನಾಯಕರು.. ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ..

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post
ಜೆಡಿಎಸ್‌ನಲ್ಲಿ ಆಕ್ಟೀವ್‌ ಆದ ಯುವ ನಾಯಕರು.. ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ..

ಜೆಡಿಎಸ್‌ನಲ್ಲಿ ಆಕ್ಟೀವ್‌ ಆದ ಯುವ ನಾಯಕರು.. ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada