ಬೆಂಗಳೂರಿನಲ್ಲಿ (Bengaluru) ವರದಕ್ಷಿಣೆ ಕಿರುಕುಳಕ್ಕೆ (Dowry harassment) ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಕೊಡಿಗೇಹಳ್ಳಿಯಲ್ಲಿ ವಾಸವಿದ್ದ ವಿಜಯಕುಮಾರಿ (32) ಆತ್ಮಹತ್ಯೆ ಶರಣಾಗಿರುವ ಮಹಿಳೆ.

ರಾಮಯ್ಯ ಆಸ್ಪತ್ರೆಯಲ್ಲಿ (Ramaiah hospital) ಸ್ಟಾಫ್ ನರ್ಸ್ ಆಗಿ ವಿಜಯ ಕುಮಾರಿ ಕೆಲಸ ಮಾಡುತ್ತಿದ್ದರು.ಆದ್ರೆ ಇಂದು ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯಕುಮಾರಿ ಆತ್ಮಹತ್ಯೆಗೆ ಗಂಡ ಮತ್ತು ಆತನ ಕುಟುಂಬಸ್ಥರ ಪ್ರಚೋದನೆ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದು, ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.