• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಬಾರಿ ದೆಹಲಿಯನ್ನು ಬಿಟ್ಟು ಕೇಂದ್ರ ಬಜೆಟ್ ಮಂಡನೆ ಆಗುತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
January 8, 2025
in Top Story, ಕರ್ನಾಟಕ, ರಾಜಕೀಯ
0
ಈ ಬಾರಿ ದೆಹಲಿಯನ್ನು ಬಿಟ್ಟು ಕೇಂದ್ರ ಬಜೆಟ್ ಮಂಡನೆ ಆಗುತ್ತಾ..?
Share on WhatsAppShare on FacebookShare on Telegram

ADVERTISEMENT

ಒಂದು ಕಡೆ ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಮತ್ತೊಂದು ಕಡೆ ಅದೇ ಸಮಯದಲ್ಲಿ ಫೆಬ್ರವರಿ 01 ರಂದು ಕೇಂದ್ರ ಬಜೆಟ್‌ ಮಂಡನೆ ಆಗಲಿದೆ. ಆದರೆ ಕೇಂದ್ರ ಸರ್ಕಾರ ಬಜೆಟ್​ ಮಂಡನೆ ಮಾಡುವುದರಿಂದ ವಿರೋಧ ಪಕ್ಷಗಳಿಗೆ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರದ ಬಜೆಟ್​ ದೆಹಲಿಯನ್ನು ಹೊರತುಪಡಿಸಿ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚನೆ ಕೊಟ್ಟಿದೆ.

ಈ ಬಾರಿಯ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್​ನಲ್ಲಿ ದೆಹಲಿಗೆ ಸಂಬಂಧಿಸಿದ ಯಾವುದೇ ಯೋಜನೆ ಘೋಷಣೆ ಮಾಡುವಂತಿಲ್ಲ. ಈ ಬಗ್ಗೆ ಈಗಾಗಲೇ ಸಚಿವ ಸಂಪುಟ ಕಾರ್ಯದರ್ಶಿಗೆ ಅಧಿಕೃತ ಸೂಚನೆ ಕಳುಹಿಸಿಕೊಟ್ಟಿದ್ದೇವೆ. ಕೇಂದ್ರ ಬಜೆಟ್​ನಲ್ಲಿ ದೆಹಲಿಗೆ ಸಂಬಂಧಿಸಿದ ವಿಚಾರ ಇರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್​ ಕುಮಾರ್​ ತಿಳಿಸಿದ್ದಾರೆ. ಹಾಗಿದ್ದರೆ ದೆಹಲಿಗೆ ಪ್ರತ್ಯೇಕವಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಬಜೆಟ್​ ಮಂಡನೆ ಮಾಡುತ್ತಾ ಅನ್ನೋ ಅನುಮಾನ ಬರುವುದು ಸಹಜ. ಆದರೆ..

Kpcc ಅಧ್ಯಕ್ಷ ಸ್ಥಾನಕ್ಕೆ ಸಿದ್ರಾಮಯ್ಯನೂ ಆಗಬಹುದು! DK Suresh ಈ ಮಾತು ಹೇಳಿದ್ಯಾಕೆ? #pratidhvani

ಕೇಂದ್ರ ಸರ್ಕಾರ ದೆಹಲಿಗೆ ಕೊಡಬೇಕಿರುವ ಯೋಜನೆಗಳಿಗೆ ಹಣವನ್ನು ಮೀಸಲಿಡುತ್ತದೆ. ಆದರೆ ಕೇಂದ್ರದ ಬಜೆಟ್​ ಪುಸ್ತಕದಲ್ಲಿ ಸೇರಿಸುವುದಿಲ್ಲ ಅಷ್ಟೆ. ಚುನಾವಣೆ ಆದ ಬಳಿ ದೆಹಲಿಗೆ ಇಂತಿಷ್ಟು ಯೋಜನೆಗಳನ್ನು ನೀಡಿದ್ದೇವೆ ಎಂದು ಸರ್ಕಾರವೇ ಒಂದು ಪ್ರಕಟಣೆ ಹೊರಡಿಸಬಹುದು ಅಷ್ಟೆ. ಅಥವಾ ಯೋಜನೆಗಳಿಗೆ ಚಾಲನೆ ಕೊಟ್ಟಾಗ ತನ್ನಷ್ಟಕ್ಕೆ ತಾನೇ ಬಹಿರಂಗ ಆಗಲಿದೆ. ಇನ್ನು ದೆಹಲಿಯನ್ನು ಕೇಂದ್ರಿತವಾಗಿ ಇಟ್ಟುಕೊಂಡು ಬೇರೆ ಬೇರೆ ರಾಜ್ಯಗಳಿಗೆ ಯೋಜನೆ ಘೋಷಣೆ ಆದಾಗ ದೆಹಲಿಗೂ ಆ ಯೋಜನೆಯ ಲಾಭ ಸಿಗುವುದಾದರೆ ಅದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಆದರೆ ಈಗಾಗಲೇ ಅತ್ಯುತ್ತಮವಾಗಿರುವ ಶಾಲೆಗಳು, ಉನ್ನತ ಮಟ್ಟದ ಆರೋಗ್ಯ ಸೇವೆ, ಉದ್ಯಾನವನಗಳು, ಉಚಿತ ವಿದ್ಯುತ್, ಉಚಿತ ನೀರು ಸೇರಿದಂತೆ ಜನತೆಗೆ ಬೇಕಿರುವ ಯೋಜನೆಗಳನ್ನು ಜಾರಿ ಮಾಡಿರುವ ಆಮ್​ ಆದ್ಮಿ ಸರ್ಕಾರವನ್ನು ಕೆಳಗಿಳಿಸಲು ಕೇಂದ್ರ ಸರ್ಕಾರ ಬಜೆಟ್​ನಲ್ಲಿ ತನಗೆ ಇಷ್ಟ ಬಂದ ಯೋಜನೆಗಳನ್ನು ಜಾರಿ ಮಾಡುವ ಸಾಧ್ಯತೆ ಇತ್ತು. ಅದೇ ಕಾರಣಕ್ಕಾಗಿ ಚುನಾವಣಾ ಆಯೋಗ ಮಧ್ಯಂತರ ಸೂಚನೆ ನೀಡಿದೆ. ದೆಹಲಿಗೆ ಕೇಂದ್ರಿತವಾಗಿ ದೆಹಲಿಗಷ್ಟೇ ಸೀಮಿತವಾದ ಅದರಲ್ಲೂ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಘೋಷಣೆಗಳನ್ನು ಆಯೋಗ ತಡೆದಿದೆ.

Tags: aap candidate list for delhi electioncentre stops delhi budgetDelhiDelhi Assembly Electiondelhi assembly election 2025Delhi assembly electionsDelhi Electiondelhi election 2025delhi election 2025 datedelhi election newsdelhi electionsdelhi elections 2025delhi government budget 2023delhi newshome ministry on delhi budgethow is budget presented in delhi assemblywhy did centre stop delhi budget
Previous Post

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಚುನಾವಣೆ.. ಎಲ್ಲರಲ್ಲೂ ಒಂದು ಡೌಟ್​..

Next Post

ನಟಿ ಜಯಂತಿ ಅವರ ಲವ್ಲಿ & ಲೋನ್ಲಿ ಪುಸ್ತಕ ಬಿಡುಗಡೆ ಮಾಡಿದ ಸಿಎಂ..

Related Posts

ಅಕ್ಟೋಬರ್ 20ರಿಂದ ಹೊಸ ವ್ಯಾಪಾರ ನಿಯಮ; ಭಾರತ-ನ್ಯೂಜಿಲೆಂಡ್ FTAಯಿಂದ ಏನೆಲ್ಲ ಬದಲಾವಣೆ?
Top Story

ಅಕ್ಟೋಬರ್ 20ರಿಂದ ಹೊಸ ವ್ಯಾಪಾರ ನಿಯಮ; ಭಾರತ-ನ್ಯೂಜಿಲೆಂಡ್ FTAಯಿಂದ ಏನೆಲ್ಲ ಬದಲಾವಣೆ?

by ಪ್ರತಿಧ್ವನಿ
September 21, 2026
0

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA) ಅಕ್ಟೋಬರ್ 20, 2026ರಿಂದ ಜಾರಿಗೆ ಬರಲಿದೆ. ಎರಡೂ ದೇಶಗಳು ಒಪ್ಪಂದವನ್ನು ಅನುಮೋದಿಸಿದ ಬಳಿಕ ಈ...

Read moreDetails
ಸಾರ್ವಜನಿಕರೇ ಹಾವು ಕಚ್ಚಿದಾಗ ಈ ತಪ್ಪುಗಳನ್ನು ಮಾಡಬೇಡಿ.!

ಸಾರ್ವಜನಿಕರೇ ಹಾವು ಕಚ್ಚಿದಾಗ ಈ ತಪ್ಪುಗಳನ್ನು ಮಾಡಬೇಡಿ.!

September 21, 2026
ಪ್ರತಾಪ್ ಸಿಂಹ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು; ದಲಿತರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದ ಶಾಸಕ

ಪ್ರತಾಪ್ ಸಿಂಹ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು; ದಲಿತರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದ ಶಾಸಕ

September 21, 2026
108 ಆ್ಯಂಬುಲೆನ್ಸ್ ಸೇವೆ ಸ್ಥಗಿತದ ಎಚ್ಚರಿಕೆ; ಬೇಡಿಕೆ ಈಡೇರಿಕೆಗೆ ನೌಕರರ ಗಡುವು ಮುಕ್ತಾಯ

108 ಆ್ಯಂಬುಲೆನ್ಸ್ ಸೇವೆ ಸ್ಥಗಿತದ ಎಚ್ಚರಿಕೆ; ಬೇಡಿಕೆ ಈಡೇರಿಕೆಗೆ ನೌಕರರ ಗಡುವು ಮುಕ್ತಾಯ

September 21, 2026
ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಡಾ. ಅಜಯ್ ಧರ್ಮಸಿಂಗ್ ಸೂಚನೆ

September 21, 2026
Next Post
ನಟಿ ಜಯಂತಿ ಅವರ ಲವ್ಲಿ & ಲೋನ್ಲಿ ಪುಸ್ತಕ ಬಿಡುಗಡೆ ಮಾಡಿದ ಸಿಎಂ..

ನಟಿ ಜಯಂತಿ ಅವರ ಲವ್ಲಿ & ಲೋನ್ಲಿ ಪುಸ್ತಕ ಬಿಡುಗಡೆ ಮಾಡಿದ ಸಿಎಂ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada