ನೂತನ ಸಂಸತ್ ಉದ್ಘಾಟನೆಗೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಆದರೆ ಈ ನೂತನ ಸಂಸತ್ ಉದ್ಘಾಟನೆಯ ವಿಚಾರವಾಗಿ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗ್ತಿದೆ .

ಈ ವಿಚಾರವಾಗಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿರುವ ಮಕ್ಕಳಂ ನೀತಿ ಮಾಯಂ ಮುಖ್ಯಸ್ಥ ಹಾಗೂ ನಟ ಕಮಲ್ಹಾಸನ್ ನಮ್ಮ ಹೊಸ ಸಂಸತ್ತು ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು..? ಎಂಬುದಕ್ಕೆ ಈ ದೇಶಕ್ಕೆ ಉತ್ತರ ನೀಡಬಲ್ಲೀರಾ ಎಂದು ಕೇಳಿದ್ದಾರೆ.
ರಾಷ್ಟ್ರದ ಮುಖ್ಯಸ್ಥ ಎನಿಸಿರುವ ರಾಷ್ಟ್ರಪತಿಗಳು ಏಕೆ ಈ ಐತಿಹಾಸಿಕ ಕ್ಷಣಕ್ಕೆ ಹಾಜರಾಗಬಾರದು..? ಎಂದು ಪ್ರಶ್ನಿಸಿದ್ದಾರೆ.