ಇತ್ತೀಚೆಗಷ್ಟೇ ಪುನರಾರಂಭಗೊಂಡಿರುವ ಗುಜರಾತ್ನ ಮೋರ್ಬಿಯಲ್ಲಿರುವ ತೂಗು ಸೇತುವೆ ಕುಸಿದು ಬಿದ್ದಿದ್ದು ಕನಿಷ್ಟ 141 ಮಂದಿ ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಸೇತುವೆ ಕುಸಿಯುವಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು ಎಂದು ಹೇಳಲಾಗಿದೆ.
ಮೋರ್ಬಿ ತೂಗು ಸೇತುವೆಯು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ದುರಸ್ತಿ ಮತ್ತು ನವೀಕರಣದ ನಂತರ, ಕೇವಲ ನಾಲ್ಕು ದಿನಗಳ ಹಿಂದೆ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಪುನರಾರಂಭಿಸಲಾಗಿತ್ತು.
ಇನ್ನು ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ಬಿಜೆಪಿ-ಟಿಎಂಸಿ ನಡುವಿನ ಮಾತಿನ ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಮೋರ್ಬಿ ಸೇತುವೆ ದುರಂತದಿಂದ ಕೇಂದ್ರಿಯಾ ತನಿಖಾ ಸಂಸ್ಥಗಳಾದ ED ಹಾಗೂ CBI ನಿಷ್ಕ್ರಿಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು ತನಿಖಾ ಸಂಸ್ಥೆಗಳು ಸಾಮಾನ್ಯ ಜನರ ವಿರುದ್ದ ಮಾತ್ರ ಕೆಲಸ ಮಾಡುವುದು ಎಂದು ಕಿಡಿಕಾರಿದ್ದಾರೆ.
Ed-CBI ಯಾಕೆ ಕ್ರಮ ಜರುಗಿಸುತ್ತಿಲ್ಲ ಮೋರ್ಬಿ ಬ್ರಿಡ್ಜ್ ದುರಂತವನ್ನ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
2019ರ ಚಳಿಗಾಲದ ಅಧಿವೇಶನದಲ್ಲಿ ಕೇಮದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತದ್ದುಪಡಿ ಕಾಯ್ದೆಯನ್ನು ತಾವು ಹಾಗೂ ತಮ್ಮ ಪಕ್ಷ ಟಿಎಂಸಿ ಸಂಪೂರ್ಣವಾಗಿ ವಿರೋಧಿಸಿದ್ದು ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಬಿಜೆಪಿಯವರು ಈ ತಂತ್ರ ಹೆಣೆದಿದ್ದಾರೆ ಎಂದು ಹೇಳಿದ್ದಾರೆ.






