ಆರಂಭಿಕ ಕೆ.ಎಲ್.ರಾಹುಲ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಪೋಟಿಸಿದ ಆಕರ್ಷಕ ಅರ್ಧಶತಕದ ಫಲವಾಗಿ ಭಾರತ ಬಾಂಗ್ಲಾದೇಶ ವಿರುದ್ದ 5 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸೆಮೀಸ್ ದಾರಿಯನ್ನು ಸುಗಮ ಮಾಡಿಕೊಂಡಿದೆ ಮತ್ತು ಟೇಬಲ್ ಟಾಪರ್ ಆಗಿ ಹೊರಹೊಮ್ಮಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಕೆ.ಎಲ್.ರಾಹುಲ್ (50 ರನ್, 32 ಎಸೆತ, 3 ಬೌಂಡರಿ, 4 ಸಿಕ್ಸರ್), ಮಾಜಿ ನಾಯಕ ವಿರಾಟ್ ಕೊಹ್ಲಿ (64 ರನ್, 44 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 20 ಓವರ್‌ಗಳ ಕೋಟಾದಲ್ಲಿ 184 ರನ್‌ಗಳನ್ನು ಗಳಿಸಿತ್ತು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು ಆರಂಭಿಕ ಲಿಟನ್ ದಾಸ್ (60 ರನ್, 27 ಎಸೆತ, 7 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಸುಲಭವಾಗಿ ಗುರಿಯನ್ನು ತಲುಪುವ ಹಂತದಲ್ಲಿತ್ತು. ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನ 20 ಓವರ್‌ಗಳಿಂದ 151ರನ್ ಗುರಿಯೊಂದಿಗೆ 16 ಓವರ್ಗಳಿಗೆ ಇಳಿಸಲಾಯಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಬೌಲಿಂಗ್ ಮುಂದೆ ನಲುಗಿ 6 ವಿಕೆಟ್ ನಷ್ಟಕ್ಕೆ 16 ಓವರ್‌ಗಳಲ್ಲಿ 145 ರನ್‌ಗಳಿಸಿ ಸೋಲೊಪ್ಪಿಕೊಂಡಿತ್ತು.







