ನಾವು ಸೇವಿಸುವ ಆಹಾರದಲ್ಲಿ ದೇಹಕ್ಕೆ ಬೇಕಾದಂಥ ಪೋಷಕಾಂಶಗಳು ಇರುವುದು ಅತ್ಯಗತ್ಯ ಇದರ ಜೊತೆಗೆ ಫೈಬರ್ ಅಂಶ ಕೂಡ ಬೇಕು. ದೇಹದಲ್ಲಿ ಫೈಬರ್ ಕಂಟೆಂಟ್ ಕಡಿಮೆಯಾದಾಗ ಕಾನ್ಸ್ಟಿಪೇಶನ್ ಸಮಸ್ಯೆ ಡೈಜೆಶನ್ ತೊಂದರೆ ಎದುರಾಗುತ್ತದೆ.ಹಾಗಿದ್ರೆ ಫೈಬರ್ ಅಂಶದಿಂದ ಆರೋಗ್ಯಕ್ಕೆ ಏನು ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ.

ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ
ಫೈಬರ್ ಅಂಶವಿದ್ದರೆ, ಜೀರ್ಣಾಂಗ ವ್ಯವಸ್ಥೆಯ ಮೂಲಕ ನಾವು ಸೇವಿಸಿದ ಆಹಾರವನ್ನು ಮೂವ್ ಸಹಕಾರಿ ..ಹಾಗೂ ಹೆಚ್ಚು ಜನಕ್ಕೆ ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ.ಇದನ್ನು ತಡೆಯಲು ಫೈಬರ್ ಅಗ್ಯತ್ಯ ಮತ್ತು ಮೂಲವ್ಯಾಧಿಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಬ್ಲಡ್ ಶುಗರ್ ಲೆವೆಲ್ ಗೆ ಉತ್ತಮ
ನಾವು ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದಾಗ. ಫೈಬರ್ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ, ಹಾಗೂ ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಂಟ್ರೋಲ್ ಮಾಡಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ
ದೇಹದಲ್ಲಿ ಫೈಬರ್ ಅಂಶ ಹೆಚ್ಚಿದಾಗ ಹಸಿವು ಜಾಸ್ತಿ ಆಗುವುದಿಲ್ಲ ಹೊಟ್ಟೆ ತುಂಬಿದಂತಿರುತ್ತದೆ, ಹಾಗೂ ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಬಯಸುವವರು ಹೆಚ್ಚು ಫೈಬರ್ ಆಹಾರ ಸೇವಿದುವುದು ಸಹಾಯಕಾರಿ.
ರಕ್ತದೊತ್ತಡವನ್ನು ಬೆಂಬಲಿಸುತ್ತದೆ
ಫೈಬರ್ ಅಂಶ ಪದಾರ್ಥವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.












