ಗರ್ಭವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ಹೆಚ್ಚು ಕಾಳಜಿಯನ್ನು ವಹಿಸುವುದು ಅವಶ್ಯ..ತಾಯಿ ಹಾಗು ಮಗುವಿನ ಆರೋಗ್ಯ ತುಂಬಾನೆ ಮುಖ್ಯವಾಗಿರುತ್ತದೆ.ಅದು ಕೂಡ ೭ ನೇ ತಿಂಗಳಿಂದ ಮಗುವಿನ ಚಲನೆ ಅಂದ್ರೆ ಮೂವ್ಮೆಂಟ್ಸ್ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳಬೇಕು..ಮಗುವಿನ ಮೂವ್ಮೆಂಟ್ಸ್ ಅಲ್ಲಿ ಸ್ವಲ್ಪ ವ್ಯತ್ಯಾಸ ಕಂಡರು ತಪ್ಪದೆ ವೈದ್ಯರನ್ನು ಕನ್ಸಲ್ಟ್ ಮಾಡುವುದು ಉತ್ತಮ.ಇನ್ನು ಮಗುವಿನ ಮೂವ್ಮೆಂಟ್ಸ್ ಯಾವ ರೀತಿ ಇರಬೇಕು, ಕೌಂಟ್ ಹೇಗೆ ಇಟ್ಟುಕೊಳ್ಳಬೇಕು ಎಂಬುವುದರ ಮಾಹಿತಿ ಹೀಗಿದೆ..

ಮಗುವಿನ ಕಿಕ್‌ಗಳನ್ನು ಕೌಂಟ್ ಏಕೆ ಮಾಡ್ಬೇಕು?
- ಒದೆತಗಳನ್ನು ಎಣಿಸುವುದರಿಂದ ಭ್ರೂಣದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯಕಾರಿಯಾಗುತ್ತದೆ ಮತ್ತು ಏನಾದರು ಸಮಸ್ಯೆ ಇದೆಯೇ ಎಂಬುದನ್ನು ಪತ್ತೆಹಚ್ಚಲು ಕೌಂಟ್ ಮುಖ್ಯ.

ಮೂವ್ಮೆಂಟ ಹಾಗು ಕಿಕ್ ಕೌಂಟ್ ಇಟ್ಟು ಕೊಳ್ಳುವುದು ಹೇಗೆ?
- ಕುಳಿತುಕೊಳ್ಳಲು ಅಥವಾ ಮಲಗಲು, ಆರಾಮದಾಯಕವಾದ ಸ್ಥಳವನ್ನು ಆಯ್ಕೆ ಮಾಡಿ.
- ಕೈಗಳನ್ನು ನಿಮ್ಮ ಹೊಟ್ಟೆಯ ಮೇಲೆ ಇರಿಸಿ ಮತ್ತು ಮಗುವಿನ ಚಲನೆಯನ್ನು ಫೀಲ್ ಮಾಡುತ್ತಾ ಗಮನಹರಿಸಿ.
- ಪ್ರತಿ ಒದೆತ, ಉರುಳುವಿಕೆ ಯನ್ನು ಕೌಂಟ್ ಗೆ ತೆಗೆದುಕೊಳ್ಳಿ.ಆದ್ರೆ ಬಿಕ್ಕಳಿಕೆ ಅಥವಾ ಸಂಕೋಚನಗಳನ್ನು ಎಣಿಸಬೇಡಿ.

- 10 ಒದೆತಗಳನ್ನು ಅನುಭವಿಸಲು ತೆಗೆದುಕೊಳ್ಳುವ ಸಮಯವನ್ನು ಟ್ರ್ಯಾಕ್ ಮಾಡಲು ಟೈಮರ್ ಅಥವಾ ಗಡಿಯಾರವನ್ನು ಬಳಸಿ.ಇದು ತುಂಬಾನೆ ಅವಶ್ಯಕ.
ಒದೆತಗಳ ಎಣಿಕೆ
- ಸಾಮಾನ್ಯವಾಗಿ ಒದೆತಗಳ ಎಣಿಕೆ 2 ಗಂಟೆಗಳಲ್ಲಿ 10 ಒದೆತಗಳು ಇದ್ದರೆ ಅದು ನಾರ್ಮಲ್ ಎಂದರ್ಥ .ಪ್ರತಿಯೊಂದು ಮಗುವಿನ ಚಲನೆಯ ಮಾದರಿಯು ವಿಭಿನ್ನವಾಗಿರುತ್ತದೆ.
- 2 ಗಂಟೆಗಳಲ್ಲಿ 10 ಕ್ಕಿಂತ ಕಡಿಮೆ ಒದೆತಗಳು ಕಂಡುಬಂದರೆ, ನೀವು ಡಾಕ್ಟರ್ ಕನ್ಸಲ್ಟ್ ಮಾಡುವುದು ಅವಶ್ಯ.