2024ರ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಸಾಕಷ್ಟು ಕುತೂಹಲಕಾರಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುತ್ತಿದೆ. ಆ ಪೈಕಿ ಹಳೆಯ ಗುರು-ಶಿಷ್ಯ ಆಧುನಿಕ ರಾಜಕೀಯ ಬದ್ಧ ವೈರಿಗಳು ಹೆಚ್.ಡಿ ದೇವೇಗೌಡರು ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ರಾಜಕೀಯ ಕಾಳಗ ಜೋರಾಗಿದೆ.

ಇಂದು ರಾಜ್ಯದಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳಿಗೆ ಖುಷಿದು ಶೇಕಡವಾರು ಮತ ಪ್ರಮಾಣವೂ ಕೂಡ ಈ ಹಂತಕ್ಕೆ ಖುಷಿ ಇರೋದಕ್ಕೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ನೇರ ಕಾರಣ ಎಂದು ಗುಡುಗಿರುವ ದೇವೇಗೌಡರು ಸಿದ್ದರಾಮಯ್ಯ ಗರ್ವಭಂಗ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಇದು ಸಿಎಂ ಸಿದ್ದರಾಮಯ್ಯರನ್ನ ಕೆರಳಿಸಿದ್ದು ಇದೀಗ ಹಾಸನದಲ್ಲೇ ದೇವೇಗೌಡರನ್ನ ಕಟ್ಟಿಹಾಕಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಮೈಸೂರು-ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸುವುದರ ಮೂಲಕ ಸಿದ್ದರಾಮಯ್ಯ ಗರ್ವಭಂಗ ಮಾಡಬೇಕು ,ಅಧಿಕಾರದ ಅಹಂ ಇಳಿಸಬೇಕು ಎಂಬ ಹೇಳಿಕೆ ಕೊಟ್ಟಿದ್ದ ದೇವೇಗೌಡರಿಗೆ ಕೌಂಟರ್ ನೀಡಲು ಹಾಸನದಲ್ಲಿ ಸಮಾವೇಶ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ . ಭರ್ಜರಿ ಪ್ರಚಾರ ಮಾಡೋದರ ಮೂಲಕ ಹಾಸನದಲ್ಲೇ ದೇವೇಗೌಡರನ್ನ ಕಟ್ಟಿ ಹಾಕುವ ಸಂದೇಶ ರವಾನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಈ ಎಲ್ಲಾ ಕಾರಣಗಳಿಗಾಗಿ ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ವರ್ಸಸ್ ಎಚ್ ಡಿ ದೇವೇಗೌಡ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾರು ಯಾರವ ಭಂಗ ಮಾಡಲಿದ್ದಾರೆ ಅನ್ನೋದನ್ನ ಫಲಿತಾಂಶದಿಂದಲೇ ತಿಳಿಯಬೇಕಿದೆ ರಾಜ್ಯದ ಜನ ಅದನ್ನ ನಿರ್ಧರಿಸಬೇಕಿದೆ.












