ವೈಟ್ ಪ್ಯಾಚಸ್ ಸಮಸ್ಯೆ ಹೆಚ್ಚು ಜನಕ್ಕೆ ಇರುತ್ತೆ. ವೈಟ್ ಪ್ಯಾಚಸ್ ಆದಾಗ ಒಂದಿಷ್ಟು ಜನ ತಲೆಕೆಡಿಸಿಕೊಂಡರೆ, ಇನ್ನೊಂದಿಷ್ಟು ಜನ ಕೇರ್ ಮಾಡುವುದಿಲ್ಲ. ವೈಟ್ ಪ್ಯಾಚಸ್ ಇಂದ ಮುಖದ ಸೌಂದರ್ಯ ಕೊಂಚ ಕಡಿಮೆ ಆಗಬಹುದು ಆದ್ರೆ ಯಾವುದೇ ರೀತಿಯ ಅಪಾಯವಿಲ್ಲ .ಆದ್ರೆಕೆಲವೊಬ್ಬರಿಗೆ ಇದರಿಂದಾಗಿ ತುರಿಕೆ ಶುರುವಾಗುತ್ತದೆ..

ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ವಿಟಲಿಗೋ ಉಂಟಾಗುತ್ತದೆ. ಮೆಲನಿನ್ ಅನ್ನು ಮೆಲನೋಸೈಟ್ಸ್ ಎಂಬ ಚರ್ಮದ ಕೋಶಗಳಿಂದ ಉತ್ಪಾದಿಸಲಾಗುತ್ತದೆ ಮತ್ತು ಅದು ನಿಮ್ಮ ಚರ್ಮಕ್ಕೆ ಅದರ ಬಣ್ಣವನ್ನು ನೀಡುತ್ತದೆ. ವಿಟಲಿಗೋದಲ್ಲಿ, ನಿಮ್ಮ ಚರ್ಮದಲ್ಲಿ ಮೆಲನಿನ್ ಅನ್ನು ಉತ್ಪಾದಿಸಲು ಸಾಕಷ್ಟು ಕೆಲಸ ಮಾಡುವ ಮೆಲನೋಸೈಟ್‌ಗಳು ಇರುವುದಿಲ್ಲ. ಇದು ನಿಮ್ಮ ಚರ್ಮ ಅಥವಾ ಕೂದಲಿನ ಮೇಲೆ ಬಿಳಿ ತೇಪೆಗಳನ್ನು ಉಂಟುಮಾಡುತ್ತದೆ.

ಇನ್ನು ಕೆಲವರಿಗೆ ಕಿವಿಯ ಭಾಗದಲ್ಲಿ ವೈಟ್ ಪ್ಯಾಚ್ ಆಗಿರುತ್ತದೆ.. ಕಿವಿಯಲ್ಲಿ ಬಿಳಿ ತೇಪೆಗಳು ಶಿಲೀಂಧ್ರಗಳ ಸೋಂಕುಗಳು, ಎಸ್ಜಿಮಾ ಅಥವಾ ವಿಟಲಿಗೋ ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗಬಹುದು.ಈ ಕಿವಿಯ ಭಾಗದಲ್ಲಿ ಆಗಿರುವಂತ ವೈಟ್ ಪ್ಯಾಚ್ ನ ನಿವಾರಣೆ ಮಾಡುವಂತಹ ಮನೆ ಮದ್ದು ಇಲ್ಲಿದೆ.
ಅಲೋವೆರ
ಅಲೋವೆರದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುವುದರಿಂದ ವೈಟ್ ಪ್ಯಾಚ್ ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ನೀವು ಅಲೋವೆರ ಜೆಲ್ ಅನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬಿಡಬೇಕು ನಂತರ ಒಂದು ಕಾಟನ್ ಬಟ್ಟೆ ಇಂದ ಅದನ್ನ ಒರೆಸುವುದರಿಂದ ವೈಟ್ ಪ್ಯಾಚ್ ನಿವಾರಣೆಯಾಗುತ್ತದೆ..

ಟೀ ಟ್ರೀ ಆಯಿಲ್
ಅರ್ಧ ಟೇಬಲ್ ಸ್ಪೂನ್ ಅಷ್ಟು ಟೀ ಟ್ರೀ ಆಯಿಲ್ ಅರ್ಧ ಟೇಬಲ್ ಸ್ಪೂನಷ್ಟು ಆಲಿವ್ ಆಯಿಲ್ ಅನ್ನು ಹಾಕಿ ಸ್ವಲ್ಪ ಬಿಸಿ ಮಾಡಿ, ವೈಟ್ ಪ್ಯಾಚ್ ಆಗಿರುವ ಜಾಗದಲ್ಲಿ ಈ ಮಿಶ್ರಣದ ಎಣ್ಣೆಯನ್ನು ಹಚ್ಚಿ ,ಪ್ರತಿದಿನ ಹೀಗೆ ಮಾಡುವುದರಿಂದ ಬೇಗ ನಿವಾರಣೆಯಾಗುತ್ತೆ.

ಅರಿಶಿಣ
ವೈಟ್ ಪ್ಯಾಚಸ್ ಆದ ಜಾಗಕ್ಕೆ ಅರಿಶಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ, ಆ ಪೇಸ್ಟನ್ನು ಹಚ್ಚಿರಿ ಅದು ಒಣಗುವವರೆಗೂ ಹಾಗೆ ಬಿಟ್ಟು. ನಂತರ ಒಂದು ಒಣಗಿದ ಬಟ್ಟೆಯಿಂದ ಒರೆಸಿ .ಪ್ರತಿದಿನ ಹೀಗೆ ಮಾಡುವುದರಿಂದ ವೈಟ್ ಪ್ಯಾಚಸ್ ಶಮನವಾಗುತ್ತದೇ. ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶ ಹೆಚ್ಚಿರುವುದರಿಂದ ಚರ್ಮಕ್ಕೆ ಬೆಸ್ಟ್ ಮನೆಮದ್ದಾಗಿದೆ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯನ್ನು ಪ್ರತಿದಿನ ಪ್ಯಾಚ್ ಮೇಲೆ ಹಚ್ಚುವುದರಿಂದ ತಕ್ಷಣಕ್ಕೆ ನಿವಾರಣೆಯಾಗುತ್ತದೆ ತೆಂಗಿನ ಎಣ್ಣೆಯನ್ನು ನೇರವಾಗಿ ಬಿಳಿ ತೇಪೆಗಳಿಗೆ ಅನ್ವಯಿಸಿ ಚರ್ಮವನ್ನು ತೇವಗೊಳಿಸಲು ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ.