
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ಗೆ ಬೆನ್ನುನೋವು ಆಸ್ಪತ್ರೆ ಸೇರುವಂತೆ ಮಾಡಿದೆ. ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬುಧವಾರ ರಿಲೀಸ್ ಆಗಿದ್ದ ದರ್ಶನ್, ಶುಕ್ರವಾರ ಕೆಂಗೇರಿ ಬಳಿ ಇರುವ BGS ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಲೆನ್ ಈಗಲ್ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಅಡ್ಮಿಟ್ ಆಗಿದ್ದು, ಖ್ಯಾತ ನರರೋಗ ತಜ್ಞ ಡಾ. ನವೀನ್ ಅಪ್ಪಾಜಿಗೌಡ ಚಿಕಿತ್ಸೆ ನೀಡುತ್ತಿದ್ದಾರೆ.

ಡಾ. ನವೀನ್ ಎಂ ಅಪ್ಪಾಜಿಗೌಡ.. ಬಿಜಿಎಸ್ ಆಸ್ಪತ್ರೆಯ ಖ್ಯಾತ ವೈದ್ಯರಾಗಿದ್ದು, ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತಿ ಪಡೆದಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪೂರೈಸಿ ಬಂದಿರುವ ಡಾ. ನವೀನ್ ಎಂ ಅಪ್ಪಾಜಿಗೌಡ ತಪಾಸಣೆ ನಡೆಸಿದ್ದು, BP, ಶುಗರ್, ECG ಸೇರಿದಂತೆ ಸಾಕ್ಷು ರಕ್ತದ ಪರೀಕ್ಷೆ ನಡೆಸಲಾಗಿದೆ. MRI ಸ್ಕ್ಯಾನಿಂಗ್, ಲಿವರ್ ಫಂಕ್ಷನ್ ಟೆಸ್ಟ್ (LFT) ಟೆಸ್ಟ್ ಕೂಡ ಮಾಡಲಾಗಿದೆ. ಈ ಎಲ್ಲಾ ರಿಪೋರ್ಟ್‌ಗಳು ಬರುವುದು 48 ಗಂಟೆಗಳ ಸಮಯ ಬೇಕಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸರ್ಜರಿ ಬೇಕಾಗಿದ್ಯೋ ಬೇಡ್ವೋ ಅನ್ನೋ ಬಗ್ಗೆಯೂ ವೈದ್ಯರು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ 48 ಗಂಟೆಯಲ್ಲಿ ಎಲ್ಲಾ ವಿಧವಾದ ಪರೀಕ್ಷೆಯ ವರದಿ ಬರಲಿದ್ದು, ವರದಿ ಬಂದ ಬಳಿಕ ಅಷ್ಟೇ ಆಪರೇಷನ್ ಮಾಡಬೇಕೋ ಬೇಡ್ವೋ ಅನ್ನೋ ಬಗ್ಗೆ ನಿರ್ಧಾರ ಮಾಡಲಿದ್ದಾರೆ.ಆದರೆ ಆಪರೇಷನ್ ಇಲ್ಲದೆ ಗುಣಪಡಿಸಲು ಸಾಧ್ಯವಾ..? ಎಂದು ವಿಜಯಲಕ್ಷ್ಮೀ ಕೇಳಿದ್ದಾರೆ ಎನ್ನಲಾಗ್ತಿದೆ.
ಬಾಲಗಂಗಾಧರ ನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಅಂಬರೀಶ್ ಸೇರಿದಂತೆ ಸಾಕಷ್ಟು VIP ನಾಯಕರು ಟ್ರೀಟ್‌ಮೆಂಟ್ ಪಡೆದುಕೊಂಡಿದ್ದ ಸೂಟ್‌ನಲ್ಲೇ ದರ್ಶನ್ ಕೂಡ ವಾಸ್ತವ್ಯ ಹೂಡಿದ್ದಾರೆ. ಬಿಜಿಎಸ್ ಆಸ್ಪತ್ರೆಯ 4ನೇ ಮಹಡಿಯಲ್ಲಿ ಗಣ್ಯಾತಿಗಣ್ಯರು ಉಳಿಯೋ ಕೊಠಡಿಯನ್ನು ಕೊಡಲಾಗಿದೆ. ಆಸ್ಪತ್ರೆ ಬಳಿ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ದರ್ಶನ್ ಫ್ಯಾನ್ಸ್‌ಗಳಿಂದ ಬೇರೆ ರೋಗಿಗಳಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿಯನ್ನ ಹಾಕಿ ಬ್ಯಾರಿಕೇಡ್‌ಗಳಿಂದ ಭದ್ರತೆ ಮಾಡಿದ್ದಾರೆ. ಸೋಮವಾರದ ಒಳಗೆ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಬೇಕೋ ಬೇಡ್ವೋ ಅನ್ನೋದನ್ನ ವೈದ್ಯರು ನಿರ್ಧಾರ ಮಾಡಲಿದ್ದು, ಅಲ್ಲಿವರೆಗೂ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲೇ ಇರಬೇಕಿದೆ. ಆಪರೇಷನ್ ಆಗಲಿ ಬಿಡಲಿ ಕೋರ್ಟ್‌ಗೆ ಕಂಪ್ಲೀಟ್ ಮಾಹಿತಿ ಕೊಡಬೇಕಿದೆ.










