ಇಡೀ ವಾರ ಬಿಗ್ ಬಾಸ್ ನೋಡಿದ್ರು ನೋಡದಿದ್ದರೂ ಕಾಯುವುದು ಮಾತ್ರ ವೀಕೆಂಡ್ ಎಪಿಸೋಡ್ ಗೋಸ್ಕರ ಯಾಕಂದ್ರೆ ಕಿಚ್ಚ ಬಂದು ಎಪಿಸೋಡ್ ಹೋಸ್ಟ್ ಮಾಡ್ತಾರೆ .ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಗೆ ಅಭಿಮಾನಿಗಳಿಗೆ ಹಾಗೂ ಬಿಗ್ ಬಾಸ್ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇರ್ತಾರೆ.
ಇಡೀ ವಾರ ಮನೆಯಲ್ಲಿ ಏನೆಲ್ಲಾ ಆಗುತ್ತೆ , ಯಾರು ತಪ್ಪು ಮಾಡ್ತಾರೆ ಅನ್ನೋದನ್ನ ನೋಡಿ ಅವರಿಗೆ ಬುದ್ಧಿಯನ್ನು ಹೇಳುತ್ತಾರೆ, ಹಾಗೂ ಒಳ್ಳೆ ಕೆಲಸ ಮಾಡಿದವರನ್ನು ಅಪ್ರಿಷಿಯೇಟ್ ಮಾಡ್ತಾರೆ. ಹಾಗೂ ಕಿಚ್ಚನ ಮಾತು,ಆ ಗತ್ತು, ನಡವಳಿಕೆ ಅಬ್ಬಬ್ಬಾ ಎಲ್ಲವೂ ಕೂಡ ಸೂಪರ್ .ಹಾಗಾಗಿ ವೀಕೆಂಡ್ ಎಪಿಸೋಡ್ ಗೆ ಟಿ ಆರ್ ಪಿ ಕೂಡ ಜಾಸ್ತಿ.

ಆದರೆ ಕಳೆದ ವಾರ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡನ್ನು ನಡೆಸಿಕೊಡ್ಲಿಲ್ಲ, ಕಾರಣ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸುದೀಪ್ ಸರ್ ತಮ್ಮ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ರು. ಕಿಚ್ಚ ನಿಲ್ಲದ ಕಾರಣ ಮನೆಯೊಳಗಿನ ಕಂಟೆಸ್ಟೆಂಟ್ ಎಷ್ಟು ಬೇಸರದಿಂದರೋ ಅದೇ ರೀತಿ ಹೊರಗಡೆ ಬಿಗ್ ಬಾಸ್ ಫ್ಯಾನ್ಸ್ ಕೊಡ ಬೇಜಾರಾಗಿದ್ರು..

ಆದರೆ ಈ ವಾರ ಕಿಚ್ಚ ಸುದೀಪ್ ಅವರು ಬರ್ತಾರಾ ಇಲ್ವಾ ಅನ್ನುವ ಕನ್ಫ್ಯೂಷನ್ ಕೂಡ ಜನರಲ್ಲಿ ಇತ್ತು . ಇದೀಗ ಆ ಕನ್ಫ್ಯೂಷನ್ ಗೆ ಬ್ರೇಕ್ ಬಿದ್ದಿದೇ. ಸದ್ಯ ಬಿಗ್ ಬಾಸ್ ನ ಪ್ರೊಮೊ ರಿಲೀಸ್ ಆಗಿದ್ದು ಆ ಪ್ರೋಮೋದಲ್ಲಿ ಕಿಚ್ಚ ಬರೋದು ಖಚಿತವಾಗಿದೆ.

ಇನ್ನು ಈ ವಾರ ಮನೆಯಲ್ಲಿರುವ ೧೪ ಕಂಟೆಸ್ಟೆಂಟ್ ಗಳಲ್ಲಿ ೧೨ ಕಂಟೆಸ್ಟೆಂಟ್ ಗಳು ನಾಮಿನೇಟ್ ಆಗಿದ್ದಾರೆ.ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವವರು ಯಾರು ಎಂಬ ಕುತೂಹಲ ಜಾಸ್ತಿ ಇದೆ.