ಸೂರ್ಯಗ್ರಹಣದ ದಿನವೇ ವಾಟ್ಸಪ್ ಗೆ ಗ್ರಹಣ ಹಿಡಿದಿದ್ದು, ಗ್ರಾಹಕರು ಸಂದೇಶಗಳನ್ನು ಹಂಚಿಕೊಳ್ಳಲು ಆಗದೇ ಪರದಾಡುವಂತಾಗಿದೆ.
ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ತಾಂತ್ರಿಕ ದೋಷದಿಂದ ವಾಟ್ಸಪ್ ಸೇವೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.

ಮಂಗಳವಾರ ಮಧ್ಯಾಹ್ನ 12.07ರಿಂದ ವಾಟ್ಸಪ್ ನಲ್ಲಿ ದೋಷ ಕಂಡು ಬಂದಿದ್ದು, ವಾಟ್ಸಪ್ ಮೆಸೇಜ್ ರವಾನೆ ಆಗುತ್ತಿಲ್ಲ. ಟರ್ಕಿ ಮತ್ತು ಇಟಲಿಯಲ್ಲಿ ಮೆಸೇಜ್ ಕಳುಹಿಸಬಹುದಾಗಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ವಾಟ್ಸಪ್ ಸರ್ವರ್ ನಲ್ಲಿ ದೋಷ ಕಂಡು ಬಂದಿದೆ. ಇದರಿಂದ ಮೊಬೈಲ್ ಆಪ್ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.






