ಸೂರ್ಯಗ್ರಹಣದ ದಿನ ಮಂಗಳವಾರ ವಾಟ್ಸಪ್ ಗೆ ಹಿಡಿದಿದ್ದ ಗ್ರಹಣ ಸುಮಾರು 2 ಗಂಟೆ ನಂತರ ಸರಿಹೋಗಿದ್ದು, ಇದು ವಾಟ್ಸಪ್ ಗೆ ಅತೀ ಹೆಚ್ಚು ಅವಧಿ ಕಾಡಿದ ಸಮಸ್ಯೆ ಆಗಿದೆ
ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ದೋಷದಿಂದ ವಾಟ್ಸಪ್ ಸೇವೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ಮಂಗಳವಾರ ಮಧ್ಯಾಹ್ನ 12.07ರಿಂದ ವಾಟ್ಸಪ್ ನಲ್ಲಿ ದೋಷ ಕಂಡು ಬಂದಿದ್ದು, ಮಧ್ಯಾಹ್ನ 2.15ರವರೆಗೆ ವಾಟ್ಸಪ್ ಮೆಸೇಜ್ ರವಾನೆ ಆಗುತ್ತಿಲ್ಲ ಹಾಗೂ ಮೇಸೇಜ್ ಬರುತ್ತಿರಲಿಲ್ಲ.
ಟರ್ಕಿ ಮತ್ತು ಇಟಲಿಯಲ್ಲಿ ಮೆಸೇಜ್ ಸಮಸ್ಯೆ ಕಾಡಿರಲಿಲ್ಲ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ವಾಟ್ಸಪ್ ಸರ್ವರ್ ನಲ್ಲಿ ದೋಷ ಕಂಡು ಬಂದಿದೆ. ಇದರಿಂದ ಮೊಬೈಲ್ ಆಪ್ ಸಂಪರ್ಕ ಕಡಿತಗೊಂಡಿತ್ತು ಎನ್ನಲಾಗಿದೆ.