ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಾಡ್ತ ಇರುವಂತಹ ಒಂದು ಸಮಸ್ಯೆ ಅಂತ ಹೇಳಿದ್ರೆ ಅದು ಡಾರ್ಕ್ ಸರ್ಕಲ್. ಡಾರ್ಕ್ ಸರ್ಕಲ್ ಯಾಕ್ ಬರುತ್ತೆ ಅಂತ ಹೇಳಿದ್ರೆ ಸ್ಟ್ರೆಸ್ ಜಾಸ್ತಿಯಾದಾಗ, ನೈಟ್ ನಿದ್ದೆ ಸರಿ ಆಗದೆ ಇದ್ದಾಗ, ಜೊತೆಗೆ ನಮ್ಮ ಹೆಲ್ತ್ ಸರಿ ಇಲ್ದೆ ಇದ್ದಾಗ ಹಾಗೂ ಫೋನ್ ಬಳಕೆ ಅಥವಾ ಲ್ಯಾಪ್ಟಾಪ್ ಬಳಕೆ ಹೆಚ್ಚಾದಾಗ.. ಕೆಲಸದ ಒತ್ತಡ ಇದೆಲ್ಲವೂ ಕೂಡ ಕಾರಣ ಆಗುತ್ತೆ .. ಒಂದಿಷ್ಟು ಜನಕ್ಕೆ ಡಾಗ್ ಸರ್ಕಲ್ಸ್ ತುಂಬಾನೇ ಇರುತ್ತೆ ಅದಕ್ಕೆ ಕಾರಣ ವಿಟಮಿನ್ b12 ಅಂಶ ಕಡಿಮೆಯಾದಾಗ.
ಏನೇ ಮಾಡಿದರು ಡಾರ್ಕ್ ಸರ್ಕಲ್ ಕಡಿಮೆ ಆಗಿಲ್ಲಾ ಅಂದ್ರೆ ಈ ಸಿಂಪಲ್ ಹೋಮ್ ರೆಮಿಡೀಸ್ ನ ಫಾಲೋ ಮಾಡಿ ಸರ್ಕಲ್ಸ್ ಇಮ್ಮಿಡಿಯೇಟ್ ಆಗಿ ಡಾರ್ಕ್ ಸರ್ಕಲ್ ಕಡಿಮೆಯಾಗತ್ತೆ..

ಕೋಲ್ಡ್ ಮಿಲ್ಕ್
ತಣ್ಣನೆಯ ಹಾಲು ಕಣ್ಣುಗಳಿಗೆ ನ್ಯಾಚುರಲ್ ಕ್ಲೆನ್ಸರ್ ಆಗಿದೆ ಮತ್ತು ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಶಮನಗೊಳಿಸಲು ಹಾಗೂ ಕಣ್ಣುಗಳ ಕೆಳಗಿನ ಕಪ್ಪು ವಲಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ .
ತಣ್ಣನೆಯ ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಅಂಶ ಹೆಚ್ಚಿರುತ್ತೆ ಇದು ಕಣ್ಣಿನ ಕೆಳಗಿರುವ ಊತವನ್ನು ಕಡಿಮೆ ಮಾಡುವುದರ ಜೊತೆಗೆ ಡಾರ್ಕ್ ಸರ್ಕಲ್ಸ್ ಅನ್ನ ಕಡಿಮೆ ಮಾಡಿ ನಿಮಗೆ ಬ್ರೈಟ್ ಸ್ಕಿನ್ ನೀಡುತ್ತದೆ.. ತಣ್ಣನೆಯ ಹಾಲನ್ನ ದಿನಕ್ಕೆ ಎರಡರಿಂದ ಮೂರು ಬಾರಿ ಕಣ್ಣಿನ ಕೆಳಗೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ಸ್ ಬೇಗನೆ ನಿವಾರಣೆ ಆಗುತ್ತೆ.

ಅಲೋವೆರಾ
ಇದು ಎಫೆಕ್ಟಿವ್ ಮಾಯಿಶ್ಚರೈಸರ್ ಅಂತ ಹೇಳಿದ್ರೆ ತಪ್ಪಾಗಲ್ಲ ಇದು ಕಣ್ಣಿನ ಕೆಳಗಿರುವಂತಹ ಡಾಗ್ ಸರ್ಕಲ್ಸ್ ಅನ್ನ ಕಡಿಮೆ ಮಾಡುವುದರ ಜೊತೆಗೆ ದೀರ್ಘಕಾಲದವರೆಗೂ ಆರೋಗ್ಯಕರವಾಗಿ ಇರಿಸುವುದಕ್ಕು ಹೆಲ್ಪ್ ಮಾಡುತ್ತೆ. ಇನ್ನು ಅಲೋವೆರಾ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ ಹಾಗೂ ಏಜಿಂಗ್ ಪ್ರಾಬ್ಲಮ್ ಕೂಡ ಕಡಿಮೆ ಮಾಡುತ್ತದೆ. ಅಲೋವೆರವನ್ನು ಪ್ರತಿದಿನ ಮುಖಕ್ಕೆ ಹಚ್ಚೊದ್ರಿಂದ ಗ್ಲೋಯಿಂಗ್ ಸ್ಕಿನ್ ಕೂಡ ನಿಮ್ಮದಾಗುತ್ತೆ..

ಬಾದಾಮಿ ಎಣ್ಣೆ ಮತ್ತು ನಿಂಬೆರಸ
ಇವೆರಡನ್ನು ಮಿಶ್ರಣ ಮಾಡಿ ಪ್ರತಿದಿನ ಕಣ್ಣಿನ ಕೆಳಗೆ ಹಚ್ಚುವುದರಿಂದ ಬೇಗನೆ ಕಣ್ಣುಗಳ ಕೆಳಗಿನ ಕಪ್ಪನ್ನ ಶ್ರಮನಗೊಳಿಸಬಹುದು ಮಾತ್ರವಲ್ಲದೆ ನಿಮ್ಮ ಮುಖದಲ್ಲಿ ಇರುವಂತಹ ಪಿಂಪಲ್ಸ್ ಕಲೆಗಳು ಹಾಗು ಯಾವುದಾದರೂ ಕಪ್ಪು ಕಲೆಗಳನ್ನ ತೆಗೆದುಹಾಕಲು ಸಹಾಯ ಮಾಡುತ್ತದೆ..

ಇದೆಲ್ಲದರ ಜೊತೆಗೆ ರಾತ್ರಿ ಹೊತ್ತು ಸರಿಯಾದ ಸಮಯಕ್ಕೆ ಮಲಗುವುದು ಫೋನ್ ಹಾಗೂ ಲ್ಯಾಪ್ಟಾಪ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆಹೆಚ್ಚಿನ ಮಟ್ಟದಲ್ಲಿ ನೀರನ್ನ ಕುಡಿಬೇಕು ಇದೆಲ್ಲಾ ನಿಮ್ಮ ಡಾರ್ಕ್ ಸರ್ಕಲ್ಗೇ ಉತ್ತಮ ಪರಿಹಾರ.







