ಪ್ರತಿ ಋತುನಲ್ಲಿ ಉಷ್ಣತೆ ಅನ್ನುವುದು ಸಾಮಾನ್ಯ.. ಆದರೆ ಬೇಸಿಗೆಯಲ್ಲಿ ಈ ಸಮಸ್ಯ ಹೆಚ್ಚಾಗಿ ಕಾಡುತ್ತದೆ ಮಾತ್ರವಲ್ಲದೆ ಇದರ ತೀವ್ರತೆ ಕೂಡಾ ಜಾಸ್ತಿಯಿರುತ್ತದೆ..ಬಾಡಿ ಹೀಟ್ ಆದಾಗ ಉರಿಮೂತ್ರದ ಸಮಸ್ಯೆ , ಕಣ್ಣು ನೋವು ಅಥವ ಉರಿ, ಪಾದ ಉರಿ, ಕಲವರಿಗೆ ಮೂಗಿನಲ್ಲಿ ರಕ್ತ ಬರುವಂತದ್ದು ಹೀಗೇ ಸಾಕಷ್ಟು ಸಮಸ್ಯೆಗಳು ಕಾಡತ್ತೆ.. ಈ ಉಷ್ಣೆತೆಯನ್ನ ಕಡಿಮೆ ಮಾಡಲು ಏನೆಲ್ಲಾ ಮಾಡ್ಬಹುದು ಅನ್ನೊದರ ಮಾಹಿತಿ ಇಲ್ಲಿದೆ..

ಎಳನೀರು ಸೇವನೆ
ಬೇಸಿಗೆಗಾಲದಲ್ಲಿ ಬೆಸ್ಟ್ ಡ್ರಿಂಗ್ ಅಂದ್ರೆ ಎಳನೀರು.. ಇನ್ನೂ ತೆಂಗಿನ ನೀರು ನೈಸರ್ಗಿಕವಾಗಿ ತಂಪಾಗಿಸುವ ಗುಣಗಳನ್ನು ಹೊಂದಿದ್ದು ಅದು ಉಷ್ಣತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗೂ ದೇಹವನ್ನ ಹೈಡ್ರೇಟ್ ಆಗಿಡುತ್ತದೆ..ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ದಿನಕ್ಕೊಂದು ಎಳನೀರನ್ನ ಕುಡಿಯಿರಿ, ಇಲ್ಲವಾದರು ಕೂಡಾ ವಾರಕ್ಕೆ ಮೂರು ಬಾರಿ ಎಳನೀರನ್ನ ಕುಡಿಯೊದ್ರಿಂದ ದೇಹ ತಂಪಾಗಿರುತ್ತದೆ, ಹಾಗೂ ಎಳನೀರಿನಲ್ಲಿ ಔಷದಿ ಅಂಶ ಜಾಸ್ತಿ ಇರುತ್ತದೆ ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದು..

ನೀರಿನಾಂಶ ಇರುವ ಹಣ್ಣ-ತರಕಾರಿಗಳು
ಉಷ್ಣತೆ ಹೆಚ್ಚಾದಾಗ ನಾವೂ ನಮ್ಮ ಆಹಾರ ಪದ್ದತಿಯನ್ನ ಕೂಡಾ ಕೊಂಚ ಮಟ್ಟಿಗೆ ಬದಲಿಸಿಕೊಳ್ಳಬೇಕು..ಅದರಲ್ಲೂ ನೀರಿನಂಶ ಹೆಚ್ಚಿರುವ ಆಹಾರ ಸೇವನೆ ಉತ್ತಮ..ಹಾಗಾಗಿ ಕಲ್ಲಂಗಡಿ ಹಣ್ಣು, ಮಾವಿನಹಣ್ಣು, ಕರ್ಬುಜ ಹಣ್ಣು, ಮೂಸಂಬಿ, ಕಿತ್ತಳೆ ಹಣ್ಣುಗಳನ್ನ ಸೇವಿಸಿ.
ಇನ್ನೂ ತರಕಾರಿಗಳಲ್ಲಿ ಸೌತೆಕಾಯಿ ತಿನ್ನಬಹುದು ಹಾಗೂ ಎಲೆಕೋಸು, ಸೋರೆಕಾಯಿ, ಹಸಿ ಸೊಪ್ಪು,ಸಾಂಬರ್ ಸೌತೆ ಇವುಗಳನ್ನ ನಿಮ್ಮ ಆಹಾದರಲ್ಲಿ ಬಳಸಿಕೊಂಡ್ರೆ ನಿಮ್ಮ ದೇಹಕ್ಕೆ ಅಗತ್ಯವಾದ ನೀರಿನಂಶವನ್ನ ಒದಗಿಸುತ್ತದೆ ಹಾಗೂ ಪೋಷಕಾಂಶಗಳನ್ನು ಸೇರುತ್ತದೆ..

ಪುದಿನ
ನಮ್ಮ ದೇಹವನ್ನು ನೈಸರ್ಗಿಕವಾಗಿ ತಂಪಾಗಿಡುಸುತ್ತದೆ. ಆಂತರಿಕವಾಗಿ ಮತ್ತು ಬಾಹ್ಯವಾಗಿ ದೇಹದ ಉಷ್ಣತೆಯ ಮೇಲೆ ಪರಿಣಾಮ ಬೀರುತ್ತದೆ..ಪುದಿನ ಎಲೆಗಳನ್ನ ತಿನ್ನಬಹುದು, ಇದು ಕಷ್ಟವಾದಲ್ಲಿ ನಿಂಬೆ ಹಣ್ಣಿನ ರಸ ಹಾಗೂ ಪುದಿನ ಬಳಸಿ ಜ್ಯೂಸ್ ಮಾಡಿಕೊಳ್ಳಬಹುದು.. ಇನ್ನು ಪುದಿನವನ್ನ ರುಬ್ಬಿ ಅದನ್ನ ನಿಮ್ಮ ಮುಖದ ಮೇಲೇ, ಹಿಮ್ಮಡಿ ಅಥವ ಚರ್ಮಕ್ಕೆ ಲೇಪನೆ ಮಾಡೋದ್ರಿಂದ ಬಾಡಿ ಕೂಲ್ ಆಗಿರುತ್ತದೆ..

ಮಜ್ಜಿಗೆ
ಬಾಯಿಗೆ ರುಚಿ ಹಾಗೂ ಬೇಸಿಗೆಯಲ್ಲಿ ಆರೋಗ್ಯವನ್ನು ಸುಧಾರಿಸಲು ಮಜ್ಜಿಗೆ ಸಹಾಯ ಮಾಡುತ್ತದೆ..ಮಜ್ಜಿಗೆ , ಅಗತ್ಯವಾದ ಪ್ರೋಬಯಾಟಿಕ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿದೆ..ತೀವ್ರವಾದ ಬಿಸಿಲಿನ ಶಾಕದಿಂದ ತಂಪಾಗಿಡಿಸಲು ಬಜ್ಜಿಗೆ ಸಹಕಾರಿ.
ಒಟ್ಟಿನಲ್ಲಿ ಬೇಸಿಗೆಯಲ್ಲಿ ನಮ್ಮ ದೇಹವನ್ನ ಆದಾಷ್ಟು ತಂಪಾಗಿಡುವುದು ಅತ್ಯಗತ್ಯ.. ಇಲ್ಲವಾದಲ್ಲಿ ನಾನಾ ಅನಾರೋಗ್ಯಕ್ಕೆ ಇದು ದಾರಿ ಮಾಡಿಕೊಡುತ್ತದೆ.. ಸ್ಟೇ ಸೇಫ್ ಅಂಡ್ ಸ್ಟೇ ಹೆಲ್ತಿ..







