ಗರ್ಭವಸ್ಥೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯ ಮಾತ್ರವಲ್ಲದೆ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿಯನ್ನು ವಹಿಸುವುದು ಉತ್ತಮ. ಅದರಲ್ಲೂ ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ಸಿಕ್ಕರೆ ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದರ ಜೊತೆಗೆ ಹಣ್ಣು ಹಂಪಲುಗಳನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಬೇಕು. ಮುಖ್ಯವಾಗಿ ಏನೇ ಬ್ಯುಸಿ ಇದ್ರು ಕೂಡ ಊಟ ತಿಂಡಿಯನ್ನು ಮಿಸ್ ಮಾಡ್ಬಾರ್ದು..ಸರಿಯಾದ ಸಮಯಕ್ಕೆ ,ಲೇಟ್ ಮಾಡದೆ ತಿನ್ನಬೇಕು..ಹಾಗಿದ್ರೆ ಬೆಳಗ್ಗಿನ ತಿಂಡಿ, ಮಧ್ಯಾನದ ಊಟ ಮತ್ತು ರಾತ್ರಿ ಊಟ..ಎಷ್ಟು ಟೈಮ್ ಒಳಗೆ ಮಾಡ್ಬೇಕು ಹಾಗೂ ಏನನ್ನು ಸೇವಿಸುವುದು ಉತ್ತಮ ಅನ್ನುವ ಮಾಹಿತಿ ಹೀಗಿದೆ..

ಬೆಳಗಿನ ತಿಂಡಿ
ನೀವು ಬೆಳಗ್ಗೆ ಎದ್ದು ಒಂದು ಗಂಟೆಯೊಳಗೆ ಪೌಷ್ಟಿಕ ಉಪಾಹಾರ ಸೇವಿಸಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.ಅದ್ರಲ್ಲೂ ೯:೩೦ ಒಳಗೆ ಸೇವಿಸುವುದು ಉತ್ತಮ.
ಮಧ್ಯಾಹ್ನ ಊಟ
ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಂತೆ ಮಧ್ಯಾಹ್ನ ಊಟವನ್ನು ಮಾಡುವುದು ಅವಶ್ಯ ..ಇನ್ನು ಮದ್ಯನ ೧ ಗಂಟೆಯಿಂದ ೨ ಗಂಟೆಯ ಒಳಗೆ ಊಟವನ್ನು ತಪ್ಪದೇ ಸೇವಿಸಬೇಕು..

ರಾತ್ರಿ ಊಟ
7 – 8 ಗಂಟೆಯ ನಡುವೆ ರಾತ್ರಿ ಊಟ ಮಾಡಬೇಕು..ಪ್ರೋಟೀನ್ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬಿನ ಇವೆಲ್ಲನ್ನು ಬ್ಯಾಲೆನ್ಸ್ ಆಗಿ ಸೇವಿಸಬೇಕು..
ಇದರ ಮಧ್ಯ ಮಧ್ಯ ಆಗಾಗ ಹಣ್ಣು ಹಂಪಲು, ಹಾಲು ,ಡ್ರೈ ಫ್ರೂಟ್ಸ್ ಹೀಗೆ ಹೊಟ್ಟೆಯನ್ನು ಕಾಲಿಬಿಡದೆ ಮತ್ತು ಅತಿಯಾಗದಂತೆ ಸೇವಿಸುವುದು ಉತ್ತಮ