ಕೇಂದ್ರ ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪ್ರಧಾನಮಂತ್ರಿ ಭಿಮಾ ಸುರಕ್ಷಾ ಯೋಜನೆ ಕೂಡ ಒಂದಾಗಿದೆ. ಅಪಘಾತದಿಂದ ಮರಣ, ಅಂಗವೈಕಲ್ಯಗಳಿಗೆ ಈ ಯೋಜನೆಯು ವಿಮೆ ಸೌಲಭ್ಯವನ್ನು ನೀಡುತ್ತದೆ. 2015-16ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಈ ಮಹತ್ವದ ಯೋಜನೆಯನ್ನು ಜಾರಿಗೆ ತರಲಾಯ್ತು. ಭಾರತದ ಪ್ರತಿಯೊಬ್ಬ ನಾಗರಿಕನೂ ಅಪಘಾತ ವಿಮೆ ಹೊಂದಬೇಕು ಎಂಬ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಅಸಂಘಟಿಕ ಕಾರ್ಮಿಕ ವಲಯವನ್ನು ಆದ್ಯತೆಯಾಗಿಟ್ಟುಕೊಂಡು ಈ ವಿಮಾ ಯೋಜನೆ ಜಾರಿಗೆ ತರಲಾಗಿದೆ.


ಈ ವಿಮಾ ಸೌಲಭ್ಯದ ಮೂಲಕ 2 ಲಕ್ಷಗಳವರೆಗೆ ಅಪಘಾತ ವಿಮೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. 18 ರಿಂದ 70 ವರ್ಷದೊಳಗಿನವರು ಈ ಯೋಜನೆಗೆ ಸೇರಿಕೊಳ್ಳಬಹುದಾಗಿದೆ. ಒಂದು ಆಧಾರ್ ಸಂಖ್ಯೆಯಿಂದ ಒಂದು ವಿಮಾ ಮೊತ್ತವನ್ನು ಪಡೆಯಬಹುದಾಗಿದೆ. ಜೂನ್ 1ರಿಂದ ಮೇ 31ರವರೆಗೂ ಈ ಯೋಜನೆ ಜಾರಿಯಲ್ಲಿರುತ್ತದೆ. ಯೋಜನೆಯನ್ನು ಆರಂಭಿಸಿದ ಫಲಾನುಭವಿಯು ಅಪಘಾತದ ಬಳಿಕ ಇದರ ಮೊತ್ತವನ್ನು ಪಡೆಯಬಹುದಾಗಿದೆ.ಕೊಲೆ, ಭೂಕಂಪ. ವಿಷ ಪ್ರಾಣಿ ಕಡಿದು ಸಾವು, ನೈಸರ್ಗಿಕ ವಿಕೋಪದಿಂದ ಸಾವು, ಆತ್ಮಹತ್ಯೆ, ವಾಹನ ಅಪಘಾತಗಳಲ್ಲಿ ಈ ಯೋಜನೆಯಿಂದ ಪರಿಹಾರ ಸಿಗುವುದಿಲ್ಲ.ಒಂದು ವೇಳೆ 70 ವರ್ಷ ತಲುಪಿದ ಸಂದರ್ಭದಲ್ಲಿ ಅಥವಾ ಖಾತೆಯಲ್ಲಿ ಬೇಕಾದ ಹಣವು ಇಲ್ಲದೇ ಇದ್ದಾಗ ಈ ಯೋಜನೆಯು ಸಮಾಪ್ತಿಯಾಗುತ್ತದೆ.

