ತಮಿಳು ಧಾರವಾಹಿ ನಟಿ ಮಹಾಲಕ್ಷ್ಮೀ ಹಾಗೂ ಅವರ ಪತಿ ರವೀಂದರ್ ಚಂದ್ರಶೇಖರ್ ಮದುವೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಜೋಡಿ ಬಹಳ ದಿನಗಳ ಕಾಲ ದಾಂಪತ್ಯ ಜೀವನದಲ್ಲಿ ಇರಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ ಬೆನ್ನಲ್ಲೇ ಇವರಿಬ್ಬರ ನಡುವಿನ ಸಂಬಂಧ ಕೊನೆಯಾಯ್ತಾ ಎಂಬ ವದಂತಿಯೊಂದು ಹರಿದಾಡುತ್ತಿದೆ.
ಹೆಚ್ಚು ಓದಿದ ಸ್ಟೋರಿಗಳು


ಮಹಾಲಕ್ಷ್ಮೀ ಹಾಗೂ ರವೀಂದರ್ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಈ ಜೋಡಿ ಈ ವದಂತಿಗೆ ತೆರೆ ಎಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಮಹಾಲಕ್ಷ್ಮೀ ಎಲ್ಲಾ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ನೀವು ನನ್ನ ಭುಜದ ಮೇಲೆ ಕೈ ಇಟ್ಟರೆ ನಾನು ಈ ಜಗತ್ತಿನಲ್ಲಿ ಏನು ಬೇಕಿದ್ದರೂ ಮಾಡಬಲ್ಲೆ ಎಂದು ಈ ಫೋಟೋಗಳಿಗೆ ಮಹಾಲಕ್ಷ್ಮೀ ಶೀರ್ಷಿಕೆ ನೀಡಿದ್ದು ನಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಸಂದೇಶ ಸಾರಿದ್ದಾರೆ.