ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್(ಕಾಂಗ್ರೆಸ್) , ಬಿಜೆಪಿ (bjp) ನಾರಿಯರ ವಾಕ್ಸಮರ ರಂಗೇರಿದೆ. ನಟಿ ಕಂಗನಾರಣಾವತ್ ಗೆ (Kangana) ಚಂಡೀಘರ್ ನ ಮಂಡಿಯಿಂದ (mandi bjp ticket) ಬಿಜೆಪಿ ಟಿಕೆಟ್ ನೀಡಿರುವ ಹಿನ್ನಲೆ, ಕಂಗನಾ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ (supriya) ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನತೆ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಕಂಗನಾ ಅವರ ಈ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)’ ಎಂದು ಬರೆದಿದ್ದು, ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ (post delete) ಮಾಡಿದ್ದಾರೆ.

ಸುಪ್ರಿಯಾ ಷೇರ್ ಮಾಡಿರುವ ಈ ಫೋಟೋ ವೈರಲ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ(Social media) ತೀವ್ರ ಸಂಚಲನ ಸೃಷ್ಟಿಸಿದೆ ಹಾಗೂ ವ್ಯಾಪಕ ಚರ್ಚೆಗೂ ಕಾರಣವಾಗಿದೆ.. ಇದರಿಂದ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದು, ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ (supriya) ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಕೆಟ್ಟದಾಗಿ ಕಮೆಂಟ್ ಮಾಡುವ ಇವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು, ನಟಿ ಕಂಗನಾ ರಣಾವತ್ ಕೂಡ ಸುಪ್ರಿಯಾಗೆ ತಿರುಗೇಟು ಕೊಟ್ಟಿದ್ದಾರೆ.

ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ (kangana)ಆತ್ಮೀಯ ಸುಪ್ರಿಯಾ ಜೀ ,ಕಲಾವಿದೆಯಾಗಿ ನನ್ನ ವೃತ್ತಿಜೀವನದ ಹಿಂದಿನ 20 ವರ್ಷಗಳಲ್ಲಿ (20 years) ನಾನು ಎಲ್ಲಾ ರೀತಿಯ ಮಹಿಳೆಯರನ್ನು ಪ್ರೀತಿಸಿದ್ದೇನೆ . ರಾಣಿಯಲ್ಲಿನ ನಿಷ್ಕಪಟ ಹುಡುಗಿಯಿಂದ ಢಾಕಾಡ್‌ನಲ್ಲಿ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿ ರಾಕ್ಷಸನವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯ ಕ್ರಾಂತಿಕಾರಿ ನಾಯಕನವರೆಗೆ. ನಾವು ನಮ್ಮ ಹೆಣ್ಣು ಮಕ್ಕಳನ್ನು ಪೂರ್ವಾಗ್ರಹಗಳ ಸಂಕೋಲೆಯಿಂದ ಮುಕ್ತಗೊಳಿಸಬೇಕು, ಅವರ ದೇಹದ ಬಗ್ಗೆ ಮಾತನಾಡಿದನ್ನ ಬಿಡಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾವು ಜೀವನ ಅಥವಾ ಸನ್ನಿವೇಶಗಳಿಗೆ ಸವಾಲು ಹಾಕುವ ಲೈಂಗಿಕ ಕಾರ್ಯಕರ್ತರನ್ನು ಕೆಲವು ರೀತಿಯ ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ತಡೆಯಬೇಕು.. ಎಂದು ಪೋಸ್ಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ.






