ಬಾಲಿವುಡ್ ನಟಿ (Bollywood actress) ಕಂಗನಾ ರಣಾವತ್ (kangana) ರ ಹಳೇಯ ವಿಡಿಯೋ ಒಂದು ಇದೀಗ ವೈರಲ್ (Viral) ಆಗ್ತಿದೆ. ಈ ವಿಡಿಯೋದಲ್ಲಿ ಕಂಗನಾ ಮತ್ತೋವ್ರ ಕಲಾವಿದೆ ಊರ್ಮಿಳ ಮಟೋನ್ಡ್ಕರ್ (urmila Matondkar)ರನ್ನ ಸಾಫ್ಟ್ ಪೋರ್ನ್ ಸ್ಟಾರ್ (soft porn ) ಎಂದು ಜರಿದಿದ್ದಾರೆ. ಈಗ ಈ ವಿಡಿಯೋ ಯಾಕೆ ವೈರಲ್ ಆಗ್ತಿದೆ ಅಂದ್ರೆ ಅದಕ್ಕೆ ಕಾರಣವಿದೆ.
![](https://pratidhvani.com/wp-content/uploads/2024/03/IMG_6315.jpeg)
ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ , ಬಿಜೆಪಿ (congress) (BJP) ನಾರಿಯರ ವಾಕ್ಸಮರ ರಂಗೇರಿದೆ. ನಟಿ ಕಂಗನಾ ರಣಾವತ್ ಗೆ ಚಂಡೀಘರ್ ನ ಮಂಡಿಯಿಂದ ಬಿಜೆಪಿ ಟಿಕೆಟ್ (BJP ticket) ನೀಡಿರುವ ಹಿನ್ನಲೆ, ಕಂಗನಾ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ (Supriya) ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನತೆ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ(Instagram) ಕಂಗನಾ ಅವರ ಈ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)’ ಎಂದು ಬರೆದಿದ್ದು, ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದರು.
![](https://pratidhvani.com/wp-content/uploads/2024/03/IMG_6311-1.jpeg)
ಸುಪ್ರಿಯಾ ಷೇರ್ ಮಾಡಿರುವ ಈ ಫೋಟೋ ವೈರಲ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ ಹಾಗೂ ವ್ಯಾಪಕ ಚರ್ಚೆಗೂ ಕಾರಣವಾಗಿತ್ತು.. ಇದರಿಂದ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದು, ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಒಬ್ಬ ಮಹಿಳೆ , ಕಲಾವಿದೆ ಎಂಬುದನ್ನು ನೋಡದೆ ಇಷ್ಟೊಂದು ಕೆಟ್ಟದಾಗಿ ಕಮೆಂಟ್ (comment) ಮಾಡುವ ಇವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿತ್ತು. ಜೊತೆಗೆ ಇದನ್ನೇ ಸಿಂಪತಿ ಅಸ್ತ್ರ ಮಾಡಿಕೊಂಡು ಬಿಜೆಪಿ ದಾಳ ಉರುಳಿಸೋದಕ್ಕೂ ಸಿದ್ಧವಾಗಿತ್ತು .. ಆದ್ರೆ ಅಷ್ಟರಲ್ಲಿ ಈ ವಿಡಿಯೋ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.
![](https://pratidhvani.com/wp-content/uploads/2024/03/IMG_6316-1024x789.jpeg)
ಸದ್ಯ ತಮ್ಮ ಬಗೆಗಿನ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಕಂಗನಾ ಆತ್ಮೀಯ ಸುಪ್ರಿಯಾ ಜೀ ,ಕಲಾವಿದೆಯಾಗಿ ನನ್ನ ವೃತ್ತಿಜೀವನದ ಹಿಂದಿನ 20 ವರ್ಷಗಳಲ್ಲಿ ನಾನು ಎಲ್ಲಾ ರೀತಿಯ ಮಹಿಳೆಯರನ್ನು ಪ್ರೀತಿಸಿದ್ದೇನೆ . ರಾಣಿಯಲ್ಲಿನ ನಿಷ್ಕಪಟ ಹುಡುಗಿಯಿಂದ ಢಾಕಾಡ್ನಲ್ಲಿ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿ ರಾಕ್ಷಸನವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯ ಕ್ರಾಂತಿಕಾರಿ ನಾಯಕನವರೆಗೆ. ನಾವು ನಮ್ಮ ಹೆಣ್ಣು ಮಕ್ಕಳನ್ನು ಪೂರ್ವಾಗ್ರಹಗಳ ಸಂಕೋಲೆಯಿಂದ ಮುಕ್ತಗೊಳಿಸಬೇಕು, ಅವರ ದೇಹದ ಬಗ್ಗೆ ಮಾತನಾಡಿದನ್ನ ಬಿಡಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾವು ಜೀವನ ಅಥವಾ ಸನ್ನಿವೇಶಗಳಿಗೆ ಸವಾಲು ಹಾಕುವ ಲೈಂಗಿಕ ಕಾರ್ಯಕರ್ತರನ್ನು ಕೆಲವು ರೀತಿಯ ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ತಡೆಯಬೇಕು.. ಎಂದು ಪೋಸ್ಟ್ ಮಾಡಿ ತಿರುಗೇಟು ಕೊಟ್ಟಿದ್ದರು.
ಕಂಗನಾ ಈ ಹೇಳಿಕೆಯನ್ನು ಟೀಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬೆಂಬಲಿಗರು (congress supporters) ಕಂಗನಾರ ಈ ಹಳೆ ವಿಡಿಯೋ ಒಂದನ್ನ ಪೋಸ್ಟ್ ಮಾಡಿ , ನೀವು ಮಹಿಳೆಗೆ, ಕಲಾವಿದೆಗೆ ಮಾಡಿದ್ದು ಅವಹೇಳನ ಅಲ್ಲವೇ ?! ಇದರ ಬಗ್ಗೆ ಏನು ಹೇಳ್ತೀರಾ ಎಂದು ಪ್ರಶ್ನೆ ಮಾಡಿದ್ದು , ಈ ಬಗೆಗಿನ ಚರ್ಚೆ ಇನ್ನೂ ಹೆಚ್ಚಾಗಿದೆ. ಕಂಗನಾ ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ಇದು ಎಲ್ಲಿಗೆ ನಿಲ್ಲೋ ಲಕ್ಷಣವಂತೂ ಕಾಣ್ತಿಲ್ಲ.