• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಗಣೇಶ್ ಜೊತೆಗಿನ ಮದುವೆ ಬಳಿಕ ಏನೆಲ್ಲಾ ನಡೆಯಿತು? ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಶಿಲ್ಪಾ

ಪ್ರತಿಧ್ವನಿ by ಪ್ರತಿಧ್ವನಿ
July 2, 2026
in ಸಿನಿಮಾ
0
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!
Share on WhatsAppShare on FacebookShare on Telegram

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ದಾಂಪತ್ಯ ಜೀವನದ 18ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಹಲವು ವರ್ಷಗಳಿಂದ ಪತಿಯ ಸಿನಿಮಾಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ತೆರೆಮರೆಯಲ್ಲೇ ಸಕ್ರಿಯರಾಗಿದ್ದ ಶಿಲ್ಪಾ ಗಣೇಶ್, ಇದೀಗ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.ಕನ್ನಡ ಹಾಗೂ ತುಳು ದ್ವಿಭಾಷೆಯಲ್ಲಿ ನಿರ್ಮಾಣವಾಗಿರುವ ‘ಪಿಚ್ಚರ್’ ಚಿತ್ರದ ‘ಗೋಕುಲದ ರಾಧೆ…’ ಹಾಡಿನ ಮೂಲಕ ಮೊದಲ ಬಾರಿಗೆ ಹಿನ್ನೆಲೆ ಗಾಯನಕ್ಕೆ ಧ್ವನಿ ನೀಡಿರುವ ಶಿಲ್ಪಾ ಗಣೇಶ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣ, ಮದುವೆ ಬಳಿಕದ ಅನುಭವಗಳು ಹಾಗೂ ಅಭಿಮಾನಿಗಳ ಕ್ರೇಜ್ ಕುರಿತು ಮನಮುಕ್ತವಾಗಿ ಮಾತನಾಡಿದ್ದಾರೆ.

ADVERTISEMENT

2008ರಲ್ಲಿ ಗಣೇಶ್ ಹಾಗೂ ಶಿಲ್ಪಾ ಅವರ ವಿವಾಹ ನಡೆದಾಗ ನಟನಿಗೆ ಅಪಾರ ಮಹಿಳಾ ಅಭಿಮಾನಿಗಳಿದ್ದ ಕಾರಣ ಅದು ಸಾಕಷ್ಟು ಸುದ್ದಿಯಾಗಿತ್ತು. ಆ ದಿನಗಳನ್ನು ನೆನಪಿಸಿಕೊಂಡ ಶಿಲ್ಪಾ, “ಸಿನಿಮಾ ಸ್ಟಾರ್‌ಗಳಿಗೆ ಅಭಿಮಾನಿಗಳು ಇರುವುದು ಸಹಜ ಎಂದು ತಿಳಿದಿತ್ತು. ಆದರೆ ಮದುವೆಯಾದ ಬಳಿಕ ಅಭಿಮಾನಿಗಳ ಪ್ರೀತಿ ಎಷ್ಟೊಂದು ತೀವ್ರವಾಗಿರುತ್ತದೆ ಎಂಬುದು ಅರಿವಾಯಿತು. ರಾತ್ರಿ-ಹಗಲು ಎನ್ನದೆ ಮನೆ ಬಾಗಿಲು ತಟ್ಟುತ್ತಿದ್ದರು. ಕೆಲವು ಘಟನೆಗಳು ಇಂದಿಗೂ ನೆನಪಾದರೆ ಅಚ್ಚರಿ ಆಗುತ್ತದೆ. ಹೇಳಿಕೊಳ್ಳಲು ಸಾಧ್ಯವಾಗದಷ್ಟು ವಿಭಿನ್ನ ಫ್ಯಾನ್ ಕ್ಷಣಗಳೂ ಇದ್ದವು” ಎಂದು ತಿಳಿಸಿದ್ದಾರೆ.

ಗಾಯಕಿಯಾಗಿ ಮೊದಲ ಹೆಜ್ಜೆ ಇಟ್ಟಿರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, “ಹಾಡುವ ಆಸೆ ಮೊದಲಿನಿಂದಲೂ ಇತ್ತು. ನಾವು ನಿರ್ಮಿಸಿರುವ ಸಿನಿಮಾದಲ್ಲೇ ಒಂದು ದಿನ ಹಾಡಬೇಕು ಎಂಬ ಕನಸು ಇತ್ತು. ಈಗ ಅದು ನನಸಾಗಿದೆ. ನಾನು ಹಾಡಬಲ್ಲೆ ಎಂಬುದು ಗಣೇಶ್ ಅವರಿಗೆ ಗೊತ್ತಿತ್ತು. ‘ಇದು ನಮ್ಮ ಸಿನಿಮಾ, ನೀನೇ ಹಾಡು’ ಎಂದು ಅವರು ಪ್ರೋತ್ಸಾಹಿಸಿದರು” ಎಂದು ಹೇಳಿದ್ದಾರೆ.ತಮ್ಮ ಸಿನಿಮಾ ನಿರ್ಮಾಣದ ಪಯಣದ ಬಗ್ಗೆ ಮಾತನಾಡಿದ ಶಿಲ್ಪಾ, ಬಾಲ್ಯದಿಂದಲೇ ಸಿನಿಮಾಗಳ ಮೇಲೆ ಆಸಕ್ತಿ ಇತ್ತು. ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಹಿಂದಿ ಸಿನಿಮಾಗಳ ಪ್ರಭಾವ ಹೆಚ್ಚಾಗಿತ್ತು.

HD Kumaraswamy : ಹಾಸನದ ರೈತರಿಗೆ 1ಎಕರೆಗೆ 25ಲಕ್ಷ ಕೊಟ್ಟಿದ್ದೇವೆ.! #pratidhvani

ಮದುವೆಯಾದ ಒಂದು ವರ್ಷದೊಳಗೆ ನಿರ್ಮಾಣ ಸಂಸ್ಥೆ ಆರಂಭಿಸಿ ‘ಮಳೆಯಲಿ ಜೊತೆಯಲಿ’ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹೆಜ್ಜೆ ಇಟ್ಟೆವು. ಚಿತ್ರದ ಯಶಸ್ಸು ಮತ್ತು ಹಾಡುಗಳ ಜನಪ್ರಿಯತೆಯೇ ಸಿನಿಮಾ ನಿರ್ಮಾಣದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ವಿವರಿಸಿದರು.ತುಳು ಸಿನಿಮಾಗಳ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, “ನಮ್ಮ ಮಾತೃಭಾಷೆಯಾದ ತುಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದು ನಮ್ಮ ಕನಸು. ಇತ್ತೀಚಿನ ವರ್ಷಗಳಲ್ಲಿ ತುಳು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತುಳು ಚಿತ್ರಗಳಲ್ಲಿ ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರೇಕ್ಷಕರು ಎರಡು ಗಂಟೆಗಳ ಕಾಲ ಎಲ್ಲಾ ಒತ್ತಡ ಮರೆತು ನಗುತ್ತಾ ಚಿತ್ರವನ್ನು ಆಸ್ವಾದಿಸಬೇಕು ಎಂಬ ಉದ್ದೇಶದಿಂದಲೇ ‘ಪಿಚ್ಚರ್’ ಚಿತ್ರವನ್ನು ನಿರ್ಮಿಸಿದ್ದೇವೆ” ಎಂದು ಹೇಳಿದರು.

Tags: #CelebrityInterview#GoldenStarGanesh#MovieUpdate#PictureMovie#sandalwood#ShilpaGanesh#TuluCinemaCinemaNewsEntertainmentNewsfilmnewsganeshKannadaactresskannadacinemakannadamoviePlaybackSinger
Previous Post

ಪಾನ್ ಮಸಾಲಾ-ಗುಟ್ಕಾ ಸ್ಯಾಂಪಲ್‌ಗಳ ತುರ್ತು ಪರೀಕ್ಷೆ: ರಾಜ್ಯ ಸರ್ಕಾರದಿಂದ ಬಿಗಿ ಕ್ರಮ

Next Post

ರಾಮಭಕ್ತರ ಹಣ ಎಲ್ಲಿ ಹೋಯಿತು? ತಳಸಮುದಾಯಗಳಿಗೆ ಉತ್ತರ ಯಾರು?

Related Posts

ಹೀರೋಗಳ ಎತ್ತರ ಹೆಚ್ಚಿಸುವ ‘ಮ್ಯಾಜಿಕ್ ಬಾಕ್ಸ್’ ರಹಸ್ಯ! ಪ್ರಭಾಸ್‌ಗೂ ಬಳಸಿದ ಈ Apple Box ಏನು ಗೊತ್ತಾ?
ಸಿನಿಮಾ

ಹೀರೋಗಳ ಎತ್ತರ ಹೆಚ್ಚಿಸುವ ‘ಮ್ಯಾಜಿಕ್ ಬಾಕ್ಸ್’ ರಹಸ್ಯ! ಪ್ರಭಾಸ್‌ಗೂ ಬಳಸಿದ ಈ Apple Box ಏನು ಗೊತ್ತಾ?

by ಪ್ರತಿಧ್ವನಿ
July 17, 2026
0

ಸಿನಿಮಾದಲ್ಲಿ ನಾವು ನೋಡುವ ಹೀರೋಗಳು ಪರದೆಯ ಮೇಲೆ ಎತ್ತರವಾಗಿ, ಆಕರ್ಷಕವಾಗಿ ಕಾಣುತ್ತಾರೆ. ಆದರೆ, ಈ ಪರ್ಫೆಕ್ಟ್ ಲುಕ್‌ ಹಿಂದೆ ಕ್ಯಾಮೆರಾ ತಂತ್ರಜ್ಞಾನ ಮಾತ್ರವಲ್ಲ, ಒಂದು ಸರಳ ಮರದ...

Read moreDetails
ನಿರ್ಮಾಪಕನಾಗಿ ಸಾಕಾಯಿತು! ನನ್ನ ಬ್ಯಾನರ್‌ನ ಕೊನೆಯ ಸಿನಿಮಾ ಆಗಬಹುದು ಎಂದ ಡಾಲಿ ಧನಂಜಯ! ಏಕೆ?

ನಿರ್ಮಾಪಕನಾಗಿ ಸಾಕಾಯಿತು! ನನ್ನ ಬ್ಯಾನರ್‌ನ ಕೊನೆಯ ಸಿನಿಮಾ ಆಗಬಹುದು ಎಂದ ಡಾಲಿ ಧನಂಜಯ! ಏಕೆ?

July 16, 2026
ಡಿ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಒಟಿಟಿಗೆ ಬರ್ತಿದೆ ʼದಿ ಡೆವಿಲ್ʼ..ಯಾವಾಗ..?

ಡಿ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಒಟಿಟಿಗೆ ಬರ್ತಿದೆ ʼದಿ ಡೆವಿಲ್ʼ..ಯಾವಾಗ..?

July 14, 2026
‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

July 13, 2026
Shreyas Manju: ದಿಲ್‌ದಾರ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!

Shreyas Manju: ದಿಲ್‌ದಾರ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!

July 13, 2026
Next Post
Ram Mandir Theft Part 2

ರಾಮಭಕ್ತರ ಹಣ ಎಲ್ಲಿ ಹೋಯಿತು? ತಳಸಮುದಾಯಗಳಿಗೆ ಉತ್ತರ ಯಾರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada