ಅಮೆರಿಕಾ ಅಮೆರಿಕಾ ಕನ್ನಡ ಚಿತ್ರರಂಗದ ಯಶಸ್ವೀ ಚಿತ್ರ. ಈ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ಕನ್ನಡಕ್ಕೊಂದು ಚೆಂದದ ಸಿನಿಮಾ ಕೊಟ್ಟು ಬೀಗಿದರು. ಈಗ ಮತ್ತೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಅಮೆರಿಕಾ ಅಮೆರಿಕಾ2 ಸಿನಿಮಾಗೆ ಕೈ ಹಾಕಿದ್ದಾರೆ. ಹೌದು, ಸದ್ಯ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ನಿರೂಪ್, ಪೃಥ್ವಿ ಅಂಬರ್ ಮತ್ತು ಸಾನ್ವಿ ಸಿನಿಮಾದ ಹೈಲೆಟ್. ಅಂದಹಾಗೆ, ಇದು ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿ ಆಧಾರಿತ ಸಿನಿಮಾ. ಇನ್ನು, ಕೆವಿಎನ್ ಪ್ರೊಡಕ್ಷನ್ಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕಾ ಅಮೆರಿಕಾ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಮೂರು ದಶಕಗಳಾದರೂ ಈ ಸಿನಿಮಾ ಎಬ್ಬಿಸಿದ ಹವಾ ತುಂಬಾನೆ ದೊಡ್ಡದು. ಆ ದಿನಗಳಲ್ಲೇ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಈಗಲೂ ಸಿನಿಮಾದ ಹಾಡು ಕಾಡುತ್ತಲೇ ಇವೆ. ಈಗ ‘ಅಮೆರಿಕಾ ಅಮೆರಿಕಾ’2 ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಅಂದಹಾಗೆ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾದ ಶೀರ್ಷಿಕೆ ಏನಿರಬಹುದು ಊಹಿಸಿ ಅಂತ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದ್ದರು. ‘ಅಮೆರಿಕಾ ಅಮೆರಿಕಾ’, ‘ಅಮೃತಧಾರೆ’, ‘ನನ್ನ ಪ್ರೀತಿಯ ರಾಮು’, ‘ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರ ತಂಡದಿಂದ ಜುಲೈ 1 ರಂದು ಹೊಸ ಶೀರ್ಷಿಕೆ ರಿವೀಲ್ ಮಾಡುವುದಾಗಿ ಹೇಳಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಅ ಸಿನಿಮಾಗೆ ‘ಅಮೆರಿಕಾ ಅಮೆರಿಕಾ’2 ಶೀರ್ಷಿಕೆ ಇಡಲಾಗಿದೆ.

ಇನ್ನು, ಇದೊಂದು ರೋಮ್ಯಾಂಟಿಕ್ ಜೊತೆಗೆ ಎಮೋಷನಲ್ ಕಥೆ ಹೊಂದಿರುವ ಸಿನಿಮಾ. ನಿರೂಪ್ ಇಲ್ಲಿ ಹೀರೋ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಆಕರ್ಷಣೆ. ಸಾನ್ವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಲೇಖಕಿ ಸಹನಾ ವಿಜಯಕುಮಾರ್ ಅವರ ಜನಪ್ರಿಯ ಕಾದಂಬರಿ ‘ಕ್ಷಮೆ’ ಆಧರಿಸಿ ತಯಾರಾಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾದಂಬರಿ ಕಥೆಯನ್ನು ಈಗಿನ ಟ್ರೆಂಡ್‌ಗೆ ಸರಿಯಾಗಿ ತೆರೆ ಮೇಲೆ ತೋರಿಸಲು ಸಜ್ಜಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ.







