ಬೆಂಗಳೂರು : ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜು.5 ರಂದು ಮುಂಬೈನಲ್ಲಿರುವ ಅಮೀರ್ ಖಾನ್ ಅವರ ಮನೆಯಲ್ಲೇ ಸರಳವಾಗಿ ವಿವಾಹ ನೋಂದಣಿ ನಡೆಯಲಿದೆ. ಈ ಮದುವೆಯ ವಿಶೇಷವೆಂದರೆ, ಅಮೀರ್ ಖಾನ್ ಮತ್ತು ಗೌರಿ ಅವರ ವಿವಾಹದ ಊಟದ ಮೆನು ಅನ್ನು ಅವರಿಬ್ಬರ ಮಕ್ಕಳೇ ಪ್ಲಾನ್ ಮಾಡಿದ್ದಾರೆ. ಸದ್ಯಕ್ಕೆ ಈ ವಿಷಯ ಸಿನಿಮಾರಂಗದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಸರಳವಾಗಿ ನಡೆಯಲಿರುವ ಈ ಮದ್ವೆಗೆ ಅವರಿಬ್ಬರ ಕುಟುಂಬಸ್ಥರು, ಆಪ್ತರು, ಗೆಳೆಯರು ಮಾತ್ರ ಭಾಗಿಯಾಗಲಿದ್ದಾರೆ.

ಈ ಮದುವೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಊಟದ ವ್ಯವಸ್ಥೆ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಆ ಎಲ್ಲಾ ಜವಾಬ್ದಾರಿಯನ್ನು, ಅಮೀರ್ ಖಾನ್ ಮತ್ತು ಗೌರಿ ಅವರ ಮಕ್ಕಳೇ ಪ್ಲಾನ್ ಮಾಡಿದ್ದಾರೆ. ಆ ಮದ್ವೆ ಸಮಾರಂಭದ ಊಟದ ಮೆನುವನ್ನು ಮಕ್ಕಳು ಆಯ್ಕೆ ಮಾಡಿದ್ದು, ಮದುವೆಯ ಇತರೆ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಇನ್ನು ಅಮೀರ್ ಖಾನ್ ಮಕ್ಕಳಾದ ಜುನೈದ್, ಐರಾ ಹಾಗೂ ಆಜಾದ್ ಮತ್ತು ಗೌರಿ ಸ್ಪ್ರಾಟ್ ಪುತ್ರ, ಇಬ್ಬರ ಮಕ್ಕಳೂ ಈ ಮದುವೆಯನ್ನು ವಿಶೇಷವಾಗಿಸಲು ಸಿದ್ಧತೆ ನಡೆಸಿದ್ದಾರೆ.
ಈ ಹಿಂದೆ ಮದುವೆ ಕುರಿತು ವಿಷಯ ಹಂಚಿಕೊಂಡಿದ್ದ ಅಮೀರ್ ಖಾನ್, ಇದು ಮನೆಯಲ್ಲೇ ನಡೆಯುವ ಸರಳ ವಿವಾಹ ನೋಂದಣಿ. ಎರಡೂ ಕುಟುಂಬದವರು ಮತ್ತು ಕೆಲವು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ನಾವು ಯಾವುದೇ ಅದ್ದೂರಿ ಆಚರಣೆ ಬಯಸುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ : ಪುರುಷರನ್ನು ಕೊಂದು ಪಾರಾಗುವುದು ಹೇಗೆ..? ಯುವತಿ ಓದುತ್ತಿದ್ದ ಪುಸ್ತಕ ನೋಡಿ ಜನ ಫುಲ್ ಶಾಕ್
ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಫ್ಯಾಷನ್ ಕ್ಷೇತ್ರದಲ್ಲಿ ಉದ್ಯಮಿ. ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಅಮೀರ್ ಖಾನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗೌರಿ ಬಗ್ಗೆ ಈ ಹಿಂದೆ ಮಾತನಾಡಿದ್ದ ಅಮೀರ್ ಖಾನ್, ಗೌರಿ ನನ್ನ ಜೀವನಕ್ಕೆ ಬಂದಿರುವುದು ನನ್ನ ಅದೃಷ್ಟ. ಅವರ ಜೊತೆ ಇದ್ದಾಗ ನನ್ನ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈಗ ನನ್ನ ಜೀವನ ಸಂಪೂರ್ಣವಾಗಿದೆ ಎಂಬ ಭಾವನೆ ಮೂಡಿದೆ ಎಂದಿದ್ದರು..
ಅಂದಹಾಗೆ, ಅಮೀರ್ ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಆ ಬಳಿಕ ನಿರ್ದೇಶಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. ಇಬ್ಬರಿಂದಲೂ ಬೇರ್ಪಟ್ಟ ಬಳಿಕ ಈಗ ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗುತ್ತಿದ್ದಾರೆ.






