• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ವಿಜಯ್​ ರಾಘವೇಂದ್ರ ಪತ್ನಿ ಸಾವಿಗೆ ಕಾರಣವಾದ ಅಂಶಗಳು ಏನೇನು..?

ಕೃಷ್ಣ ಮಣಿ by ಕೃಷ್ಣ ಮಣಿ
August 8, 2023
in ಅಂಕಣ, ಅಭಿಮತ
0
ವಿಜಯ್​ ರಾಘವೇಂದ್ರ ಪತ್ನಿ ಸಾವಿಗೆ ಕಾರಣವಾದ ಅಂಶಗಳು ಏನೇನು..?
Share on WhatsAppShare on FacebookShare on Telegram

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಥಾಯ್​ಲ್ಯಾಂಡ್​ನಲ್ಲಿ ನಿಧನರಾಗಿದ್ದಾರೆ. ಸ್ನೇಹಿತರ ಜೊತೆಗೆ ಥಾಯ್​ಲ್ಯಾಂಡ್​ಗೆ ಹೋಗಿದ್ದರು ಎನ್ನಲಾಗಿದ್ದು, ಒಂದು ದಿನದ ಹಿಂದೆ ಅಷ್ಟೇ ನಟ ವಿಜಯ್​ ರಾಘವೇಂದ್ರ ಕೂಡ ಪತ್ನಿಯನ್ನು ಸೇರಿಕೊಂಡಿದ್ದರು. ಆ ಬಳಿಕ ರಾತ್ರಿ ಮಲಗಿದ್ದ ಸ್ಪಂದನಾ, ಬೆಳಗ್ಗೆ ಮೇಲಕ್ಕೆ ಏಳಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದ್ಯಾವುದೂ ಸತ್ಯವಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ಕಾಂಗ್ರೆಸ್​ ನಾಯಕ ಹಾಗು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್​, ಯಾವುದೇ ಗಾಸಿಪ್​ಗಳಿಗೆ ಕಿವಿಕೊಡಬೇಡಿ, ಅಲ್ಲಿ ಏನಾಗಿದೆ ಎನ್ನುವುದು ನಮಗೆ ನಿಖರವಾಗಿ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅದನ್ನು ನಾವೇ ಬಹಿರಂಗ ಮಾಡ್ತೇವೆ. ಹೃದಯಾಘಾತ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

ADVERTISEMENT

ಡಯೆಟ್​ ಮಾಡಿದ್ದೇ ಸ್ಪಂದನಾ ಸಾವಿಗೆ ಕಾರಣ ಆಗೋಯ್ತಾ..?

ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ನಿಖರ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಸದ್ಯಕ್ಕೆ ಸಿಗುತ್ತಿರುವ ಮಾಹಿತಿ ಪ್ರಕಾರ ಅತಿಯಾದ ಡಯೆಟ್​ ಸ್ಪಂದನಾ ಸಾವಿಗೆ ಮುಳುವಾಯ್ತಾ..? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದ ಸ್ಪಂದನಾ, ತೂಕ ಕಡಿಮೆ ಮಾಡಿಕೊಳ್ಳಲು ಡಯೆಟ್​ ಮಾಡ್ತಿದ್ದರು ಎನ್ನುವ ವಿಚಾರ ಬಯಲಾಗಿದೆ. ಸಂಪೂರ್ಣವಾಗಿ ಊಟದ ಬದಲಿಗೆ ಕೇವಲ ಹಣ್ಣು, ತರಕಾರಿ ತಿನ್ನುತ್ತ ಜೀವನ ನಡೆಸುತ್ತಿದ್ರು. ಇದರ ಜೊತೆಗೆ ಕಠಿಣ ವ್ಯಾಯಾಮ ಕೂಡ ಮಾಡುತ್ತಿದ್ದರು ಎನ್ನಲಾಗಿದೆ. ಡಯೆಟ್​ನಿಂದಾಗಿ ದೇಹದ ತೂಕ ಕೂಡ ಕಡಿಮೆ ಆಗಿತ್ತು. ದೇಹ ಸಣ್ಣಗಾದ ಬಳಿಕವೂ ಡಯೇಟ್ ಮುಂದುವರಿಸಿದ್ದ ಸ್ಪಂದನಾಗೆ ಬ್ಲಡ್​ ಪ್ರೆಶರ್ ಕಡಿಮೆ ಆಗಿತ್ತು. ಇದಕ್ಕಾಗಿ ವೈದ್ಯರ ಮಾರ್ಗದರ್ಶನ ಕೂಡ ಪಡೆದಿದ್ರು ಅನ್ನೋ ಆರೋಗ್ಯ ಮಾಹಿತಿ ಹೊರ ಬಿದ್ದಿದೆ.

ಇಂದು ಮಧ್ಯಾಹ್ನ ಕರುನಾಡಿಗೆ ಸ್ಪಂದನಾ ಪಾರ್ಥಿವ ಶರೀರ..!

ಥಾಯ್​ಲ್ಯಾಂಡ್​ನ ಬ್ಯಾಂಕಾಕ್​ನಲ್ಲಿರುವ ಸ್ಪಂದನಾ ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಬುಧವಾರ ಬೆಳಗ್ಗೆ ಸುಮಾರು 9 ಗಂಟೆ ವಿಮಾನದಲ್ಲಿ ಪಾರ್ಥಿವ ಶರೀರ ತರುವುದಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಿದ್ದಾರೆ. ಆ ಬಳಿಕ ಬೆಂಗಳೂರಿನ ನಿವಾಸಕ್ಕೆ ತರಲಿದ್ದು, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಆ ಬಳಿಕ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ಮಾಡಬೇಕಾ..? ಅಥವಾ ಮಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಬೇಕಾ ಅನ್ನೋ ಬಗ್ಗೆ ಇನ್ನು ಅಂತಿಮ ನಿರ್ಧಾರ ಆಗಿಲ್ಲ. ಬಹುತೇಕ ಬೆಳ್ತಂಗಡಿಗೆ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

ಕೊರೊನಾ ಬಳಿಕ ಜಗತ್ತಿನಲ್ಲಿ ಹೆಚ್ಚಾಗಿದ್ಯಾ ಹೃದಯಾಘಾತ..?

ದೇಶದಲ್ಲಿ 32 ಸಾವಿರ ಜನರ ಮೇಲೆ ಸರ್ವೇ ಮಾಡಲಾಗಿದ್ದು, ದೇಶದ 357 ಜಿಲ್ಲೆಗಳಲ್ಲಿ ಜನರನ್ನು ಆಯ್ಕೆ ಮಾಡಿಕೊಂಡು ಸರ್ವೆ ಮಾಡಲಾಗಿದೆ. ಕೊರೊನಾಗೂ ಮೊದಲು ಹಾಗು ಕೊರೊನಾ ನಂತರ ಹೃದಯಾಘಾತಗಳು ಹೆಚ್ಚಾಗಿದ್ಯಾ..? ಅನ್ನೋ ಬಗ್ಗೆ ಸರ್ವೇ ಮಾಡಲಾಗಿದೆ. ಶೇಕಡ 62ರಷ್ಟು ಮಂದಿ 2 ಡೋಸ್​ ವ್ಯಾಕ್ಸಿನ್ ಪಡೆದವರು ಹೃದಯಾಘಾತ ಸಂಭವಿಸಿದೆ. ಇನ್ನು ಶೇಕಡ 11ರಷ್ಟು ಮಂದಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದವರಿಗೆ ಹೃದಯಾಘಾತ ಆಗಿದ್ದು, ಶೇಕಡ 8ರಷ್ಟು ಮಂದಿ ವ್ಯಾಕ್ಸಿನ್​ ಪಡೆಯದವರು ಕೂಡ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಶೇಕಡ 61ರಷ್ಟು ಜನ ಒಮ್ಮೆ ಕೋವಿಡ್​ ಸೋಂಕು ಕಂಡವರು ಹೃದಯ ಸಮಸ್ಯೆಗೆ ತುತ್ತಾಗಿದ್ದಾರೆ ಅನ್ನೋದು ಸರ್ವೇ ರಿಪೋರ್ಟ್​ನಲ್ಲಿ ಬಯಲಾಗಿದೆ. ಆದರೆ ಕೊರೊನಾ ಬಳಿಕ ಹೃದಯದ ಬಗ್ಗೆ ಗಮನಹರಿಸುವುದು ಸೂಕ್ತ ಎನ್ನುತ್ತಾರೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್​ ಮಂಜುನಾಥ್​.

ಕೃಷ್ಣಮಣಿ

Tags: heart attackKFIsandalwoodSpandanaVijay Raghavendra
Previous Post

ಸರ್ಕಾರಕ್ಕೆ ಸಂಕಷ್ಟ ತಂದಿಟ್ಟ ಕೃಷಿ ಅಧಿಕಾರಿಗಳ ಪತ್ರ.. ಚಲುವರಾಯಸ್ವಾಮಿ ನಿರಾಕರಣೆ..

Next Post

ದೆಹಲಿ ಸೇವಾ ಮಸೂದೆ | ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೇ ಹೆಸರು ಸೇರ್ಪಡೆ ; ಎಎಪಿ ವಿರುದ್ಧ ಆರೋಪ

Related Posts

ಭ್ರಮೆ ವಾಸ್ತವಗಳ ನಡುವೆ ಸಾಂಕೇತಿಕ ಹೋರಾಟಗಳು
ಅಂಕಣ

ಭ್ರಮೆ ವಾಸ್ತವಗಳ ನಡುವೆ ಸಾಂಕೇತಿಕ ಹೋರಾಟಗಳು

by ಪ್ರತಿಧ್ವನಿ
May 29, 2026
0

ನಾ ದಿವಾಕರ ಭಾರತವನ್ನೂ ಒಳಗೊಂಡಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಮಾನಾಂತರವಾಗಿ ಎರಡು ಬೆಳವಣಿಗೆಗಳನ್ನು ಗಮನಿಸಬಹುದು. ಒಂದು ಕಡೆ ಮತೀಯವಾದಿಗಳ, ಧಾರ್ಮಿಕ ಶಕ್ತಿಗಳ ಹಿಡಿತದಲ್ಲಿರುವ ಬಲಪಂಥೀಯ ರಾಜಕಾರಣ ಕಾರ್ಪೋರೇಟ್‌...

Read moreDetails
ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

May 27, 2026
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

May 26, 2026
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
Next Post
ದೆಹಲಿ ಸೇವಾ ಮಸೂದೆ

ದೆಹಲಿ ಸೇವಾ ಮಸೂದೆ | ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೇ ಹೆಸರು ಸೇರ್ಪಡೆ ; ಎಎಪಿ ವಿರುದ್ಧ ಆರೋಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada