• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Epstein Files: ಎಪ್‌ಸ್ಟೀನ್ ಫೈಲ್ಸ್ ಎಂದರೇನು..? ಜಾಗತಿಕ ಮಟ್ಟದಲ್ಲಿ ಬಿರುಗಾಳಿ ಎದ್ದಿದ್ದೇಕೆ..?

ಪ್ರತಿಧ್ವನಿ by ಪ್ರತಿಧ್ವನಿ
February 12, 2026
in Top Story, ಕರ್ನಾಟಕ, ದೇಶ, ರಾಜಕೀಯ, ವಿದೇಶ
0
Epstein Files: ಎಪ್‌ಸ್ಟೀನ್ ಫೈಲ್ಸ್ ಎಂದರೇನು..? ಜಾಗತಿಕ ಮಟ್ಟದಲ್ಲಿ ಬಿರುಗಾಳಿ ಎದ್ದಿದ್ದೇಕೆ..?
Share on WhatsAppShare on FacebookShare on Telegram
ADVERTISEMENT

ಅಮೆರಿಕದ ಅತಿದೊಡ್ಡ ಲೈಂಗಿಕ ಜಾಲ ಪ್ರಕರಣದ  ಅಪರಾಧಿ ಜೆಫ್ರಿ ಎಡ್‌ವರ್ಡ್ ಎಪ್‌ಸ್ಟೀನ್‌(Jeffrey Edward Epstein) ಕುರಿತ ಎಪ್‌ಸ್ಟೀನ್ ಫೈಲ್ಸ್ ಬಹಿರಂಗಗೊಂಡಿದ್ದು, ಅಮೆರಿಕದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ.

Parliament : 92ರ ಇಳಿ ವಯಸ್ಸಲ್ಲೂ ರಾಜ್ಯಸಭೆಯಲ್ಲಿ ಗುಡುಗಿದ HD Devegowda  #pratidhvani

ಈ ಫೈಲ್ಸ್‌ನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಮನರಂಜನೆ ಕ್ಷೇತ್ರದ ವ್ಯಕ್ತಿಗಳು ಹಾಗೂ ಸಾರ್ವಜನಿಕ ಚಿಂತಕರು ಸೇರಿದಂತೆ 200ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಹೆಸರುಗಳು ಉಲ್ಲೇಖಗೊಂಡಿವೆ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಈ ದಾಖಲೆಗಳಲ್ಲಿ ಸಂಭಾಷಣೆ, ಭೇಟಿಗಳು ಮತ್ತು ಫೋಟೋಗಳ ಮೂಲಕ ಕಾಣಿಸಿಕೊಂಡಿದ್ದಾರೆ.

ಹೆಚ್ಚು ಗಮನ ಸೆಳೆಯುತ್ತಿರುವ ವಿಚಾರವೆಂದರೆ, ಈ ದಾಖಲೆಗಳಲ್ಲಿ ಯಾರಾದರೂ ನೇರವಾಗಿ ಅಪರಾಧಿಗಳಾಗಿದ್ದಾರೆಂದು ಹೇಳಲು ಸಾಕ್ಷ್ಯವಿಲ್ಲ. ಎಪ್‌ಸ್ಟೀನ್ 2008ರಲ್ಲಿ ಶಿಕ್ಷೆ ಪಡೆದ ನಂತರವೂ ಕೆಲವು ಗಣ್ಯರೊಂದಿಗೆ ಆತ ಸಂಪರ್ಕ ಇರುವ ಬಗ್ಗೆ ದಾಖಲೆಗಳು ತಿಳಿಸುತ್ತಿವೆ.

ಈ ದಾಖಲೆಗಳಲ್ಲಿ ಛಾಯಾಚಿತ್ರಗಳು, ಇ-ಮೇಲ್‌ಗಳು, ಆಡಿಯೋ ರೆಕಾರ್ಡಿಂಗ್‌ಗಳು ಮತ್ತು ಹಲವು ವರ್ಷಗಳ ತನಿಖೆಯ ವಿವರಗಳಿವೆ. ಈ ದಾಖಲೆಗಳು ಬಹಿರಂಗಗೊಂಡ ಕೇವಲ ಒಂದು ದಿನದಲ್ಲಿ, 16ಕ್ಕೂ ಹೆಚ್ಚು ಪ್ರಮುಖ ದಾಖಲೆಗಳು ನ್ಯಾಯಾಂಗ ಇಲಾಖೆಯ ವೆಬ್‌ಸೈಟ್‌ನಿಂದ ಯಾವುದೇ ವಿವರಣೆ ನೀಡದೆ ಮಾಯವಾಗಿವೆ. ಇದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಮತ್ತು ಎಪ್‌ಸ್ಟೀನ್‌ನ ಆಪ್ತ ಸಹಾಯಕ ಮ್ಯಾಕ್ಸ್‌ವೆಲ್ ಅವರೊಂದಿಗೆ ಎಪ್‌ಸ್ಟೀನ್ ಕಾಣಿಸಿಕೊಂಡಿರುವ ಛಾಯಾಚಿತ್ರವೂ ಸೇರಿದೆ ಎನ್ನಲಾಗಿದೆ.

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್ ಕೇವಲ ಒಂದೇ ದಾಖಲೆಯಲ್ಲ, ಬದಲಾಗಿ ದಶಕಗಳ ಕಾಲ ನಡೆದ ಲೈಂಗಿಕ ಶೋಷಣೆ, ಅಧಿಕಾರದ ದುರ್ಬಳಕೆಯ ಜಾಗತೀಕ ಮಟ್ಟದ ಅತ್ಯಮೂಲ್ಯ ಸಂಕೀರ್ಣ ದಾಖಲೆಯಾಗಿದೆ. ಈ ಫೈಲ್‌ಗಳ ಬಿಡುಗಡೆಯು ಅಮೆರಿಕದ ಶ್ರೀಮಂತರು, ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಕರಾಳ ಲೈಂಗಿಕ ಜಾಲವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಎಪ್‌ಸ್ಟೀನ್‌ ಫೈಲ್ಸ್ ಬಹಿರಂಗಗೊಳ್ಳಲು ಅಮೆರಿಕದ ನ್ಯಾಯಾಲಯ ಮತ್ತು ಕಾಂಗ್ರೆಸ್ ಒತ್ತಡ ಕಾರಣವಾಯಿತು. ಬಹಿರಂಗಗೊಂಡ ದಾಖಲೆಗಳಲ್ಲಿ ಇ-ಮೇಲ್, ಛಾಯಾಚಿತ್ರಗಳು, ಆಡಿಯೋ ರೆಕಾರ್ಡಿಂಗ್‌ಗಳು ಮತ್ತು ದಶಕಗಳ ತನಿಖೆಯ ವಿವರಗಳಿವೆ.

Yatnal : ಸಿದ್ದರಾಮಯ್ಯ ಇಲ್ಲ ಅಂದ್ರೆ  ಕಾಂಗ್ರೆಸ್ ಸರ್ಕಾರ ಇಲ್ಲ #pratidhvani #siddaramaiah #yatnal

ಅಮೇರಿಕಾದ ಪ್ರಭಾವಿಗಳಾದ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಲಾರಿ ಸಮ್ಮರ್ಸ್, ರಾಬರ್ಟ್ ಎಫ್. ಕೆನೆಡಿ ಜೂನಿಯರ್, ಪೀಟರ್ ಮ್ಯಾಂಡೆಲ್ಸನ್, ಎಹುದ್ ಬರಾಕ್, ಬಿಲ್ ರಿಚರ್ಡ್ಸನ್, ಜಾರ್ಜ್ ಮಿಚೆಲ್, ಎಲಾನ್ ಮಸ್ಕ್, ಬಿಲ್ ಗೇಟ್ಸ್, ರೀಡ್ ಹಾಫ್‌ಮನ್, ಪೀಟರ್ ಥಿಯಲ್, ವೋಮಿ ಕ್ಯಾಂಪ್‌ಬೆಲ್, ಕಾರ್ಟ್ನಿ ಲವ್, ಕ್ರಿಸ್ ಟಕ್ಕರ್, ಡೇವಿಡ್ ಕಾಪರ್‌ಫೀಲ್ಡ್, ಪೆಗ್ಗಿ ಸೀಗಲ್, ನೋಮ್ ಚೋಮ್ಸ್ಕಿ ಸೇರಿದಂತೆ ಅನೇಕರ ಹೆಸರು ಈ ದಾಖಲೆಯಲ್ಲಿ ಉಲ್ಲೇಖವಾಗಿದೆ.

Rahul Gandhi On epstein files : ರಾಹುಲ್‌ ಗಾಂಧಿ ಮಾತಿಗೆ ಥಂಡಾ ಹೊಡೆದ ಬಿಜೆಪಿ ನಾಯಕರು.. #pratidhvani

ಯಾರು ಜೆಫ್ರಿ ಎಪ್‌ಸ್ಟೀನ್?‌

ಜೆಫ್ರಿ ಎಡ್ವರ್ಡ್ ಎಪ್‌ಸ್ಟೀನ್‌ ಓರ್ವ ಅಮೆರಿಕನ್ ಹಣಕಾಸುದಾರ ಮತ್ತು ಲೈಂಗಿಕ ಪ್ರಕರಣದಲ್ಲಿ  ಶಿಕ್ಷೆಗೊಳಗಾದ ಅಪರಾಧಿ. ದಶಕಗಳ ಕಾಲ ಆತ ತನ್ನ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು, ಹಲವಾರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವೇಳೆ, 2019ರಲ್ಲಿ ತನ್ನ ಜೈಲು ಕೊಠಡಿಯಲ್ಲಿ ಜೆಫ್ರಿ ಎಪ್‌ಸ್ಟೀನ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ವರದಿಯಾಗಿದೆ.

ಇನ್ನು ಸದ್ಯದ ದಿನಗಳಲ್ಲಿ ಜೆಫ್ರಿ ಎಪ್‌ಸ್ಟೀನ್ ಫೈಲ್ಸ್ ಬಹಿರಂಗಗೊಂಡು, ಅಧಿಕಾರ, ಹಣ ಮತ್ತು ಪ್ರಭಾವದ ಬಳಕೆಯಿಂದ ದಶಕಗಳ ಕಾಲ ನಡೆಯುತ್ತಿದ್ದ ಲೈಂಗಿಕ ಅಪರಾಧ ಜಾಲದ ಕರಾಳ ಮುಖವನ್ನು ಜಗತ್ತಿಗೆ ತೋರಿಸಿದೆ. ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಇನ್ನೂ ಮುಂದುವರೆದಿದೆ.

MLAs Foreign tour: ಶಾಸಕರ ವಿದೇಶ ಪ್ರವಾಸದ ಹಿಂದೆ ಕುರ್ಚಿ ಗೇಮ್? DK Suresh ಹೇಳಿದ್ದೇನು? #pratidhvani
Tags: AmericaDonald TrumpEpstein FilesIndiainternationalJeffrey Edward EpsteinNarendra ModiPoliticssexual assault
Previous Post

ನಾನು ಇಲ್ಲಿಗೆ ಬಂದಿದ್ದೆ ರಾಜಕಾರಣ ಮಾಡಲು: ದೆಹಲಿಯಿಂದ ಡಿಕೆಶಿ ಖಡಕ್‌ ಸಂದೇಶ

Next Post

Rahul Gandhi: ರಾಹುಲ್ ಗಾಂಧಿ ಸಂಸತ್‌ ಸದಸ್ಯತ್ವ ವಜಾಗೊಳಿಸಲು ಬಿಜೆಪಿ ಬೇಡಿಕೆ

Related Posts

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ
ಕರ್ನಾಟಕ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಸಚಿವರಿಗಾಗಿ ವಿಶೇಷ ಉಪಹಾರ ಕೂಟ ಏರ್ಪಡಿಸಿದ್ದು, ರಾಜಕೀಯ ವಲಯದಲ್ಲಿ ಹೊಸ...

Read moreDetails
ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

May 28, 2026
ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

May 28, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
Next Post
Rahul Gandhi: ರಾಹುಲ್ ಗಾಂಧಿ ಸಂಸತ್‌ ಸದಸ್ಯತ್ವ ವಜಾಗೊಳಿಸಲು ಬಿಜೆಪಿ ಬೇಡಿಕೆ

Rahul Gandhi: ರಾಹುಲ್ ಗಾಂಧಿ ಸಂಸತ್‌ ಸದಸ್ಯತ್ವ ವಜಾಗೊಳಿಸಲು ಬಿಜೆಪಿ ಬೇಡಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada