ಸಣ್ಣ ಆಗಲು ಹೆಚ್ಚು ಜನರ ಹರ ಸಾಹಸವನ್ನು ಪಡುತ್ತಾರೆ. ಅದರಲ್ಲು ಕೆಲವರಂತೂ ವಾಕಿಂಗ್ ಎಕ್ಸರ್ಸೈಜ್ ಎಲ್ಲವನ್ನು ಮಾಡ್ತಾರೆ. ಇನ್ನು ಕೆಲವರು ಸಣ್ಣ ಆಗೋದಿಕ್ಕೋಸ್ಕರ ಬೆಳಗಿನ ತಿಂಡಿಯನ್ನೇ ಸ್ಕಿಪ್ ಮಾಡ್ತಾರೆ. ಆದ್ರೆ ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿನ ಸ್ಕಿಪ್ ಮಾಡಬೇಡಿ ಇದರಿಂದ ದೇಹದಲ್ಲಿ ಹಾಗೂ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ತಿಂಡಿ ಸಮಯದಲ್ಲಿ ಈ ಪದಾರ್ಥಗಳನ್ನ ಸೇವಿಸುವುದರಿಂದ ಖಂಡಿತವಾಗಿಯೂ ನೀವು ಸಣ್ಣ ಆಗ್ತೀರಾ ಟ್ರೈ ಮಾಡಿ ನೋಡಿ.
ಮೊಟ್ಟೆ
ಬೆಳಗಿನ ತಿಂಡಿ ಸಮಯದಲ್ಲಿ ನೀವು ಮೊಟ್ಟೆಯನ್ನು ಸೇವಿಸುವುದರಿಂದ ಸಣ್ಣ ಆಗೋದಕ್ಕೆ ತುಂಬಾನೇ ಸಹಾಯಕಾರಿ, ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಹೆಚ್ಚಿರುತ್ತದೆ ಮಜಲ್ಸ್ ಬಿಲ್ಡ್ ಮಾಡೋದಕ್ಕೆ ಸಹಾಯಕಾರಿ ಹಾಗೂ ಮೆಟಾಬಾಲಿಸಂ ಜಾಸ್ತಿ ಇರೋದ್ರಿಂದ ನಿಮಗೆ ಸುಸ್ತಾಗುವುದಿಲ್ಲ ಬದಲಿಗೆ ಶಕ್ತಿ ನೀಡುವುದರ ಜೊತೆಗೆ ಸಣ್ಣ ಕೂಡ ಆಗ್ತೀರಾ. ಹಾಗಂತ ಮೊಟ್ಟೆಯ ಕೌಂಟ್ ಅತಿ ಆದರೂ ಕೂಡ ದಪ್ಪ ಆಗಬಹುದು ಮೊಟ್ಟೆಯನ್ನು ಲಿಮಿಟ್ ಆಗಿ ತಿನ್ನಿ.
ಆವಕಾಡೊ
ಅವಕಾಡದಲ್ಲಿ ಫ್ಯಾಟಿ ಅಂಶ ಹೆಚ್ಚಿರುತ್ತದೆ ಹಾಗೂ ಫೈಬರ್ ಕಂಟೆಂಟ್ ಕೂಡ ಇರೋದ್ರಿಂದ ನಿಮಗೆ ಹೊಟ್ಟೆ ತುಂಬಿಸುತ್ತದೆ ಹಾಗೂ ಸುಸ್ತು ಮಾಡೋದಿಲ್ಲ. ಹಾಗೂ ಆಗಾಗ ಹಸಿವು ಕೂಡ ನಿಯಂತ್ರಣವಾಗುತ್ತದೆ ಇದರಿಂದ ಸಣ್ಣ ಆಗೋದಿಕ್ಕೆ ಸಹಾಯಕಾರಿ.
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ,ಕ್ಯಾಲೋರಿಸ್ ಅಂಶ ಕಡಿಮೆ ಇರುತ್ತದೆ. ಆದರೆ ಫೈಬರ್ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ ಈ ಹಣ್ಣುಗಳು ವೈಟ್ ಲಾಸ್ ಗೆ ಸಹಾಯಕಾರಿ ಹಾಗೂ ಓವರ್ ಆಲ್ ಹೆಲ್ತ್ ನ ಕೂಡ ಕಾಪಾಡುತ್ತದೆ.
ತರಕಾರಿಗಳು
ತರಕಾರಿಗಳನ್ನ ಹಾಫ್ ಬಾಯ್ಲ್ ಮಾಡಿಕೊಂಡು ಸೇವಿಸುವುದರಿಂದ ಬೇಗನೆ ಸಣ್ಣ ಆಗಬಹುದು. ಇದರಲ್ಲಿ ಕ್ಯಾಲೋರಿಸ್ ತುಂಬಾನೇ ಕಡಿಮೆ ಇರುತ್ತದೆ. ನ್ಯೂಟ್ರಿಷನ್ ಹಾಗೂ ಫೈಬರ್ ಅಂಶ ಚೆನ್ನಾಗಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.