• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನಾವು ಸೂಜಿಯಂತೆ ಹೊಲಿಯುತ್ತೇವೆ. ಕತ್ತರಿಯಂತೆ ಕತ್ತರಿಸುವುದನ್ನು ಮಾಡಲ್ಲ : ಬಿಜೆಪಿಗೆ ಸಿಎಂ ಡಿಕೆಶಿ ಟಾಂಗ್..!

ನನಗೆ ಸಿಕ್ಕಿರೋ ಅವಕಾಶದಲ್ಲಿ ಜನರ ಹೃದಯ ಗೆದ್ದು, ಕೆಲಸ ಮಾಡುವೆ. ಅದೇ ನನ್ನ ಗುರಿ : ಸಿಎಂ ಡಿಕೆ ಶಿವಕುಮಾರ್..

ಪ್ರತಿಧ್ವನಿ by ಪ್ರತಿಧ್ವನಿ
October 10, 2026
in ಇದೀಗ, ಕರ್ನಾಟಕ, ದೇಶ, ರಾಜಕೀಯ
0
ನಾವು ಸೂಜಿಯಂತೆ ಹೊಲಿಯುತ್ತೇವೆ. ಕತ್ತರಿಯಂತೆ ಕತ್ತರಿಸುವುದನ್ನು ಮಾಡಲ್ಲ : ಬಿಜೆಪಿಗೆ ಸಿಎಂ ಡಿಕೆಶಿ ಟಾಂಗ್..!
Share on WhatsAppShare on FacebookShare on Telegram

ಬೆಂಗಳೂರು : ಸರಕಾರ ಏನೇ ಮಾಡಬಹುದು. ಆದರೆ ಗುರುಗಳ ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ. ಗುರು ಇಲ್ಲದೇ ಒಂದು ಹೆಜ್ಜೆ ಮುಂದೆ ಇಡಲು ಆಗದು. ಅಕ್ಷರ, ಅನ್ನ, ಧರ್ಮ ದಾಸೋಹವನ್ನು ಮಠಾಧೀಶರುಗಳು ಮಾಡುತ್ತಿದ್ದಾರೆ. ಇದು ಸ್ತುತ್ಯಾರ್ಹ  ಎಂದು ಸಿಎಂ‌ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ADVERTISEMENT
Chamarajanagar Encouter Exposed : ಭಯಾನಕ ಎನ್ ಕೌಂಟರ್ ಸೀಕ್ರೇಟ್ ಬಿಚ್ಚಿಟ್ಟ ಮಹಿಮಾ ದಾಸ್..#pratidhvani

ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ 25 ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗ ಉದ್ದೇಶಿಸಿ ಗೃಹಕಚೇರಿ ಕೃಷ್ಣಾದಲ್ಲಿ ಶನಿವಾರ ಮಾತನಾಡಿ, ಈ ಹಿಂದೆ ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ. ನಾವು ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತೇವೆ. ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುವುದಿಲ್ಲ. ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ. ವಿಭಜನೆ ಮಾಡುವುದಲ್ಲ. ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಳೆ ಹೊನ್ನೂರು ಮಠ ಸೇರಿದಂತೆ ಅನೇಕ ಮಠಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಆಚಾರ ವಿಚಾರ ಗಮನಿಸಿದ್ದೇನೆ. ನಾನು ವೀರ ಗಂಗಾಧರ ಅಜ್ಜಯ್ಯನವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಇದಕ್ಕೆ ಇಡೀ ದೇಶದ ನಾಯಕರು ಅಚ್ಚರಿಪಟ್ಟರು. ಚೆನ್ನೈನ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಆಗ ನಾನು ಧರ್ಮ, ಜಾತಿ ಎಂಬುದು ಮಾನವೀಯತೆಯಲ್ಲಿ ಇದೆ. ಎಲ್ಲರೂ ಒಂದೇ ಎಂದು ಹೇಳಿದಾಗ ಬಹಳ ಜನ ಟೀಕೆ ಮಾಡಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : ‘ಜ್ಞಾನೇಶ್ ಕುಮಾರ್ ಹೋಗ್ತಾರೆ, ಈ ಸರ್ಕಾರವೂ ಬೀಳುತ್ತೆ’: ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ದಸರಾ ಉದ್ಘಾಟನೆ ಗವಿಮಠ ಶ್ರೀಗಳು ಒಪ್ಪಿಲ್ಲವೆಂದು ಸುಳ್ಳುಸುದ್ದಿ ಹರಡಿದರು..

“ದಸರಾ ಉದ್ಘಾಟನೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಠಗಳ ಶ್ರೀಗಳು ನೆರವೇರಿಸಲಿದ್ದಾರೆ. ಆ ಮಠದ ಕೆಲಸ ನೋಡಿದ್ದೇನೆ. ಅವರ ವ್ಯಕ್ತಿತ್ವ ದೊಡ್ಡದು. ಅವರನ್ನು ಇಡೀ ರಾಜ್ಯ ಒಪ್ಪಿದೆ. ಸ್ವಾಮಿಗಳೂ ಉದ್ಘಾಟನೆಗೆ ಒಪ್ಪಿದ್ದಾರೆ. ಅವರ ಜತೆ ಮಾತಾಡಿಯೇ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಆದರೆ ಕೆಲವರು ಇದರಲ್ಲೂ ರಾಜಕೀಯ ಮಾಡಲು ನೋಡಿದರು. ಸ್ವಾಮಿಗಳು ಒಪ್ಪಿಲ್ಲವೆಂದು ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಮುಖ್ಯಮಂತ್ರಿ ಕಿಡಿಕಾರಿದ್ದಾರೆ.

Abhijeet Dipke Arrest : ಸಿಜೆಪಿ ಹೋರಾಟಕ್ಕೆ ಬ್ರೇಕ್‌ ಹಾಕಲು ಹರಸಾಹಸ ಪಡುತ್ತಿರುವ ನರೇಂದ್ರ ಮೋದಿ ಸರ್ಕಾರ..

ನನಗೆ ಸಿಕ್ಕಿರೋ ಅವಕಾಶದಲ್ಲಿ ಜನರ ಹೃದಯ ಗೆದ್ದು, ಕೆಲಸ ಮಾಡುವೆ. ಅದೇ ನನ್ನ ಗುರಿ. ಗುರುಗಳೆಲ್ಲರೂ ಮಾಡಿರುವ ಆಶೀರ್ವಾದ ನನಗೆ ಮಾತ್ರವಲ್ಲ, ಇಡೀ ಸರಕಾರಕ್ಕೆ. ನಿಮಗೆ ಧನ್ಯವಾದಗಳು. ನಿಮ್ಮ ಸಹಕಾರ ಹೀಗೇ ಇರಲಿ ಎಂದು ಡಿಕೆ ಶಿವಕುಮಾರ್‌ ಕೋರಿದ್ದಾರೆ.

Previous Post

BREAKING : ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ ನಿಧನ | Grandmother passes away

Next Post

`ನೀವು ಈ ವಿಡಿಯೋ ನೋಡುತ್ತಿದ್ದರೆ, ನಮ್ಮನ್ನು ಬಂಧಿಸಲಾಗಿದೆ ಎಂದರ್ಥ’: ಸಿಜೆಪಿ ಅಭಿಜಿತ್ ದಿಪ್ಕೆಯ ವಿಡಿಯೋ ವೈರಲ್ | Abhijit Dipke

Related Posts

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!
ಕರ್ನಾಟಕ

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

by Shivakumar
November 3, 2026
0

ನಟ ದರ್ಶನ್ ಅವರ ಹೆಸರಿನಲ್ಲಿ ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು...

Read moreDetails
ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

November 3, 2026
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

November 3, 2026
Sites to be allotted this year to 5 lakh poor people in the state who do not own a home: CM D.K. Shivakumar announces

ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

November 3, 2026
Congress members have set out to engage in new-style politics after finishing off Siddaramaiah: H.D. Kumaraswamy

ಸಿದ್ದರಾಮಯ್ಯರನ್ನು ಮುಗಿಸಿ ಕಾಂಗ್ರೆಸ್ ನವರು ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ : ಹೆಚ್.ಡಿ. ಕುಮಾರಸ್ವಾಮಿ

November 3, 2026
Next Post
If you are watching this video, it means we have been arrested": CJP Abhijit Dipke video goes viral

`ನೀವು ಈ ವಿಡಿಯೋ ನೋಡುತ್ತಿದ್ದರೆ, ನಮ್ಮನ್ನು ಬಂಧಿಸಲಾಗಿದೆ ಎಂದರ್ಥ’: ಸಿಜೆಪಿ ಅಭಿಜಿತ್ ದಿಪ್ಕೆಯ ವಿಡಿಯೋ ವೈರಲ್ | Abhijit Dipke

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada