• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

Shivakumar by Shivakumar
November 3, 2026
in Top Story, ಕರ್ನಾಟಕ
0
Sites to be allotted this year to 5 lakh poor people in the state who do not own a home: CM D.K. Shivakumar announces
Share on WhatsAppShare on FacebookShare on Telegram

ಚಿತ್ರದುರ್ಗ: ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ ಬಡವರಿಗಾಗಿ ಪ್ರಸಕ್ತ ವರ್ಷದಲ್ಲೇ 5 ಲಕ್ಷ ಮಂದಿಗೆ ನಿವೇಶನ (Sites ) ಹಂಚಿಕೆ ಮಾಡಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಪ್ರಕಟಿಸಿದ್ದಾರೆ.

ADVERTISEMENT

ಹಿರಿಯೂರು ತಾಲ್ಲೂಕಿನ ಧರ್ಮಪುರ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಮೂಲಕ ₹2,200 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಜಾಗವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿ

ಬಡವರ ಸೂರು ಕಲ್ಪಿಸುವ ಯೋಜನೆಗೆ ಒತ್ತು ನೀಡಿದ ಮುಖ್ಯಮಂತ್ರಿಗಳು, “ಎಲ್ಲೆಲ್ಲಿ ಸರ್ಕಾರಿ ಜಾಗ ಲಭ್ಯವಿದೆಯೋ ಅಲ್ಲೆಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ನಿವೇಶನ ನೀಡಲಾಗುವುದು. ಒಂದು ವೇಳೆ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ, ಖಾಸಗಿ ಜಮೀನನ್ನು ಸರ್ಕಾರವೇ ಖರೀದಿಸಿ ಪ್ರತಿಯೊಬ್ಬ ಬಡವರಿಗೂ ಸೈಟ್ ಹಾಗೂ ಮನೆ ಒದಗಿಸಲು ಬದ್ಧವಾಗಿದೆ” ಎಂದರು.

ಮನೆ ಬಾಗಿಲಿಗೆ ‘ಪ್ರಜಾಸೇವೆ’: ಅಧಿಕಾರಿಗಳಿಂದಲೇ ಸಮಸ್ಯೆ ಪರಿಹಾರ

ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ‘ಪ್ರಜಾಸೇವೆ’ ಅಭಿಯಾನವನ್ನು ಜಾರಿಗೆ ತರಲಾಗುತ್ತಿದೆ. “ಈ ಯೋಜನೆಯಡಿ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ತೆರಳಿ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಅರ್ಜಿಯಲ್ಲಿ ಗುರುತಿಸಲಾದ ಸೈಟ್, ಮನೆ, ಪಿಂಚಣಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅಧಿಕಾರಿಗಳೇ ಖುದ್ದು ಮನೆ ಬಾಗಿಲಿಗೆ ಒದಗಿಸಲಿದ್ದಾರೆ” ಎಂದು ವಿವರಿಸಿದರು.

ಸ್ನೇಹಿತ ಡಿ. ಸುಧಾಕರ್ ಒಡನಾಟ ಸ್ಮರಿಸಿದ ಸಿಎಂ

ಮಾಜಿ ಸಚಿವ ಡಿ. ಸುಧಾಕರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, “‘ನಾನು ಮಂತ್ರಿಯಾಗದಿದ್ದರೂ ಪರವಾಗಿಲ್ಲ, ನನ್ನ ಆತ್ಮೀಯ ಸ್ನೇಹಿತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು’ ಎಂದು ಸುಧಾಕರ್ ಬಹಿರಂಗವಾಗಿ ಘೋಷಿಸಿದ್ದರು. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ಜನಪರ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸುತ್ತಿದ್ದೇನೆ” ಎಂದರು.

ಬೆಲೆ ಏರಿಕೆ ನಡುವೆ ರೈತರು, ಮಹಿಳೆಯರ ಪರ ಸರ್ಕಾರ

ದೇಶದಲ್ಲಿ ಬೆಲೆ ಏರಿಕೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರ ಆದಾಯ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, “ಹೆಣ್ಣುಮಕ್ಕಳು ಹಾಗೂ ರೈತರ ಬದುಕು ರಕ್ಷಿಸುವುದು ನಮ್ಮ ಆದ್ಯತೆ. ರೈತರಿಗೆ ಇಂಧನ ಇಲಾಖೆಯಿಂದ ಉಚಿತ ಪಂಪ್‌ಸೆಟ್ ಯೋಜನೆ ನೀಡಲಾಗುತ್ತಿದೆ. ಧರ್ಮಪುರ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ₹3.5 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಹಾಗೂ ಕ್ಷೇತ್ರಕ್ಕೆ ₹2,500 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ” ಎಂದರು.

ಗ್ಯಾರಂಟಿ, ಭದ್ರಾ ಮೇಲ್ದಂಡೆ ಯೋಜನೆಗೆ ವೇಗ: ಸಚಿವ ಟಿ. ರಘುಮೂರ್ತಿ

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, “ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ರೈತರಿಗೆ ‘ನೇಗಿಲಯೋಗಿ’, ‘ತೇಗದ ಸಿರಿ’ ಹಾಗೂ ಮನೆ ಬಾಗಿಲಿಗೆ ‘ಪ್ರಜಾಸೇವೆ’ಯಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಐಮಂಗಳ ಹೋಬಳಿಗೆ 1.35 ಟಿಎಂಸಿ ನೀರು ಹರಿದಿದೆ. ಜವಗೊಂಡನಹಳ್ಳಿ ಹೋಬಳಿಯಲ್ಲಿ ₹144 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬಿಸುವ ಯೋಜನೆ ಸೇರಿದಂತೆ ವೇದಾವತಿ ನದಿಯ ಚೆಕ್‌ಡ್ಯಾಂಗಳಿಗೆ ನೀರು ತುಂಬಿಸುವ ಕೆಲಸ ಭರದಿಂದ ಸಾಗಿದೆ” ಎಂದು ಮಾಹಿತಿ ನೀಡಿದರು.

ಯುರೋಪ್‌ನ ಸೂಪರ್‌ಮಾರ್ಕೆಟ್‌ಗಳ ಮೇಲೆ ಸೈಬರ್ ದಾಳಿ: ಕೆಟ್ಟುಹೋದ ಆಹಾರ, ಕೋಟ್ಯಂತರ ರೂಪಾಯಿ ನಷ್ಟ

Tags: CM D.K. ShivakumarKarnatakaSite
Previous Post

ಯುರೋಪ್‌ನ ಸೂಪರ್‌ಮಾರ್ಕೆಟ್‌ಗಳ ಮೇಲೆ ಸೈಬರ್ ದಾಳಿ: ಕೆಟ್ಟುಹೋದ ಆಹಾರ, ಕೋಟ್ಯಂತರ ರೂಪಾಯಿ ನಷ್ಟ

Next Post

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

Related Posts

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!
ಕರ್ನಾಟಕ

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

by Shivakumar
November 3, 2026
0

ನಟ ದರ್ಶನ್ ಅವರ ಹೆಸರಿನಲ್ಲಿ ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು...

Read moreDetails
ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

November 3, 2026
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

November 3, 2026
Cyberattack on European Supermarkets: Food Spoiled, Losses Worth Crores of Rupees

ಯುರೋಪ್‌ನ ಸೂಪರ್‌ಮಾರ್ಕೆಟ್‌ಗಳ ಮೇಲೆ ಸೈಬರ್ ದಾಳಿ: ಕೆಟ್ಟುಹೋದ ಆಹಾರ, ಕೋಟ್ಯಂತರ ರೂಪಾಯಿ ನಷ್ಟ

November 3, 2026
Congress members have set out to engage in new-style politics after finishing off Siddaramaiah: H.D. Kumaraswamy

ಸಿದ್ದರಾಮಯ್ಯರನ್ನು ಮುಗಿಸಿ ಕಾಂಗ್ರೆಸ್ ನವರು ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ : ಹೆಚ್.ಡಿ. ಕುಮಾರಸ್ವಾಮಿ

November 3, 2026
Next Post
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada