ಹೆಚ್ಚು ಜನಕ್ಕೆ ಬೆಳಗ್ಗೆ ಆಯ್ತು ಅಂದ್ರೆ ಸಾಕು ಇವತ್ತಿನ ಡೇ ಹೇಗಿರುತ್ತೆ ಏನ್ ಕೆಲಸ ಇರುತ್ತೆ ಅನ್ನೋ ಟೆನ್ಶನ್ ತುಂಬಾನೇ ಇರುತ್ತೆ. ಅದರಲ್ಲೂ ವರ್ಕ್ ಲೋಡ್ ಜಾಸ್ತಿ ಆಯ್ತು ಅಂದ್ರೆ ಅಬ್ಬಬ್ಬಾ ಇಡೀ ದಿನ ಸ್ಟ್ರೆಸ್. ದಿನಕ್ಕೆ ೮ ಗಂಟೆಗಳ ಕಾಲ ಕೆಲಸ, ಈ ಸ್ಟ್ರೆಸ್ ಇಂದ ಹೊರೆಗೆ ಬರೋದು ತುಂಬಾನೇ ಇಂಪಾರ್ಟೆಂಟ್ ಯಾಕೆಂದರೆ ನಮ್ಮ ಮೆಂಟಲ್ ಪೀಸ್ ಗೋಸ್ಕರ. ಇಡೀ ದಿನ ಒತ್ತಡದಿಂದ ಕಳೆದಿದ್ದರೆ ಸ್ವಲ್ಪ ರಿಲ್ಯಾಕ್ಸ್ ಆಗಲು ಏನು ಮಾಡಬಹುದು ಎಂಬುದರ ಮಾಹಿತಿ ಹೀಗಿದೆ.

ಯೋಗ ಮತ್ತು ಮೆಡಿಟೇಶನ್
ನಿಮ್ಮ ಕೆಲಸದ ಒತ್ತಡದಿಂದ ಹೊರಬರಲು ಈ ಅಭ್ಯಾಸವನ್ನ ರೂಡಿಸಿಕೊಳ್ಳುವುದು ತುಂಬಾನೇ ಒಳ್ಳೆಯದು. ಕೆಲಸ ಮುಗಿದ ನಂತರ ಯೋಗ ಮಾಡುವುದರಿಂದ ಫಿಸಿಕಲ್ ಸ್ಟ್ರೆಸ್ ಕಡಿಮೆಯಾಗುತ್ತದೆ ಹಾಗೂ ಮೆಡಿಟೇಶನ್ ಅನ್ನ ಮಾಡುವುದರಿಂದ ಮೆಂಟಲ್ ಸ್ಟ್ರೆಸ್ ಗೆ ಉತ್ತಮ. ಅಭ್ಯಾಸ ರಿಲ್ಯಾಕ್ಸ್ ಮಾಡುವುದರ ಜೊತೆಗೆ ನಿದ್ದೆಯೂ ಕೂಡ ಚೆನ್ನಾಗಿ ಆಗುತ್ತದೆ.

ಮೊಬೈಲ್ ಮತ್ತು ಲ್ಯಾಪ್ಟಾಪ್
ಇಡೀ ದಿನ ಲ್ಯಾಪ್ಟಾಪ್ ಮುಂದೆ ಕುಳಿತು ಕೆಲಸ ಮಾಡಿ ಸ್ಟ್ರೆಸ್ ಹೆಚ್ಚಿದ್ರೆ, ನಿಮ್ಮ ಸ್ಕ್ರೀನ್ ಟೈಮ್ ಅವಾಯ್ಡ್ ಮಾಡಿ..ಅಂದ್ರೆ ಮೊಬೈಲ್ ಮತ್ತು ಲ್ಯಾಪ್ಟಾಪ್ ಅಥವ ಟಿವಿ ನೋಡಬೇಡಿ..ಅದರಿಂದ ಮೈಂಡ್ ಗೆ ಸ್ಟ್ರೆಸ್ ಹೆಚ್ಚಾಗುತ್ತದೆ ಹಾಗೂ ಕಣ್ಣು ಉರಿ ಆಗುತ್ತದೆ.
ಒಳ್ಳೆಯ ಆಹಾರ
ಸ್ಟ್ರೆಸ್ ಅನ್ನ ಕಡಿಮೆ ಮಾಡೋದಕ್ಕೆ ಮತ್ತೊಂದು ಉತ್ತಮ ಮಾರ್ಗ ಅಂದ್ರೆ ನೀವು ನಿಮಗೆ ಇಷ್ಟವಾದಂತಹ ಆಹಾರವನ್ನ ಸೇವಿಸುವಂತದ್ದು. ಕೆಲವುಮ್ಮೆ ಈ ಬ್ಯುಸಿ ಲೈಫ್ ಸ್ಟೈಲಲ್ಲಿ ಊಟ ತಿಂಡಿ ಮಾಡಲು ಟೈಮ್ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ಊಟ ಅಥವಾ ನಿಮಗಿಷ್ಟವಾದ ಆಹಾರವನ್ನು ಸೇವಿಸುವುದರಿಂದ ತೃಪ್ತಿ ಜೊತೆಗೆ ರಿಲ್ಯಾಕ್ಸ್ ಆಗುತ್ತದೆ.

ಇಷ್ಟವಾದವರ ಜೊತೆ ಕಾಲ ಕಳೆಯಿರಿ
ಕೆಲಸ ಮುಗಿದ ನಂತರ ನಿಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಕೆಲವೊಂದಿಷ್ಟು ಕಾಲ ಕಳೆಯುವುದರಿಂದ ರಿಲ್ಯಾಕ್ಸ್ ಆಗುತ್ತದೆ. ಹಾಗೂ ನಿಮ್ಮ ಮನೆಯಲ್ಲಿರುವಂತಹ ಪೆಟ್ಟುಗಳ ಜೊತೆ ಕಾಲ ಕಳೆಯಿರಿ ವಾಕ್ ಮಾಡುವುದರಿಂದ ಕೂಡ ಒತ್ತಡದಿಂದ ಹೊರ ಬರಬಹುದು.