ಬೆಳಗಾವಿಯಲ್ಲಿ (Belagavi) ಸದ್ದಿಲ್ಲದೇ ಹಿಡಕಲ್ ಜಲಾಶಯದಿಂದ (Hiralal dam) ಧಾರವಾಡಕ್ಕೆ ಪೈಪ್‌ಲೈನ್ ಮೂಲಕ ನೀರು ಲಿಫ್ಟ್‌ಗೆ (Water lifting) ಮಾಡುವ ಯೋಜನೆ ಕಾಮಗಾರಿ ಆರಂಭವಾಗಿದ್ದು, ಇದಕ್ಕೆ ಕೈ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ನೀರು ಸಲಹಾ ಸಮಿತಿಯಲ್ಲಿ ನಿರ್ಣಯ ತೆಗೆದುಕೊಂಡು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಬೆಳಗಾವಿಯಿಂದ ನೀರು ಲಿಫ್ಟ್ ಮಾಡಲು ತೀರ್ಮಾನಿಸಲಾಗಿದೆ.ಡಿಸಿಎಂ ಡಿಕೆಶಿ (Dcm dk Shivakumar) ಅವರ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಜ್ಯ ನೀರು ಸಲಹಾ ಸಮಿತಿಯಲ್ಲಿ ನಿರ್ಣಯ ಮಾಡಲಾಗಿದೆ. ಸತೀಶ್ ಜಾರಕಿಹೊಳಿ (Satish jarakiholi) ಸೇರಿ ಜಿಲ್ಲೆಯ ನಾಯಕರ ಗಮನಕ್ಕೆ ತರದೇ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ನೀರು ಒಯ್ಯುವ ಯೋಜನೆಗೆ ಚಾಲನೆ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿರುವ ಹಿಡಕಲ್ ಜಲಾಶಯದಿಂದ ಧಾರವಾಡ ಕೆಐಎಡಿಬಿಯಿಂದ ರೂಪಿಸಲಾಗಿರುವ 300 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಧಾರವಾಡ ಕೆಐಎಡಿಬಿ ಅಧಿಕಾರಿಗಳು. ಶಂಕುಸ್ಥಾಪನೆ ನೆರವೇರಿಸದೇ ಕಾಮಗಾರಿ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತದ ಅನುಮತಿ ಇಲ್ಲದೇ ನಡೆಯುತ್ತಿರುವ ಯೋಜನೆ ಸ್ಥಗಿತಗೊಳಿಸಲು ಒತ್ತಾಯ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಬೆಳಗಾವಿ ಡಿಸಿ ಮಹ್ಮದ್ ರೋಷನ್‌ಗೆ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಒತ್ತಾಯಿಸಿದ್ದಾರೆ.ಬೇಸಿಗೆ ಸಮಯದಲ್ಲಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ಅಭಾವ ಸೃಷ್ಟಿ ಆಗುತ್ತೆ.ಹೀಗಿದ್ದರೂ ಜಿಲ್ಲೆಯ ನಾಯಕರಿಗೆ ಗೊತ್ತಾಗದೇ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯಲಾಗ್ತಿದೆ.
ಈ ಯೋಜನೆ ಜಾರಿಗೆಗೆ ನಮ್ಮ ವಿರೋಧವಿದೆ, ತಕ್ಷಣವೇ ಯೋಜನೆ ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾರೆ. ಎರಡು ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಡಿಸಿ ಮಹ್ಮದ್ ರೋಷನ್ ಭರವಸೆ ನೀಡಿದ್ದು, ಬೆಳಗಾವಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಧಾರವಾಡಕ್ಕೆ ನೀರು ಲಿಫ್ಟ್ ಯೋಜನೆಗೆ ವಿರೋಧ ವ್ಯಕ್ತವಾಗಿದೆ.