ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ (Delhi elections) ಮತದಾನ ಪ್ರಕ್ರಿಯೆ ಆರಂಭವಾಗಿದೆ.ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಬೆಳಿಗ್ಗೆ 7 ಗಂಟೆಯಿಂದಲೆ ಮತದಾನ ಶುರುವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.ಒಟ್ಟು 1.56 ಕೋಟಿ ಜನ ಮತದಾನ ಮಾಡಲಿದ್ದು, ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ (AAP) ಮೂರನೆ ಬಾರಿಗೆ ಅಧಿಕಾರ ಹಿಡಿಯೋ ಭರವಸೆಯಲ್ಲಿದೆ.
ಆದರೆ ಇತ್ತ ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದಿಸಿದ್ದ ಕನಿಷ್ಠ ಒಂದು ಸ್ಥಾನ ಗೆಲ್ಲಲು ಕೂಡ ಸಾಧ್ಯವಾಗಿರಲಿಲ್ಲ.ಆದ್ರೆ ಕಾಂಗ್ರೆಸ್ (Congress) ಈ ಬಾರಿಯಾದ್ರು ಉತ್ತಮ ಸ್ಥಾನಗಳಿಸುವ ನಿರೀಕ್ಷೆಯಲ್ಲಿದೆ.
ಇನ್ನು ಬಿಜೆಪಿ (Bjp) 27 ವರ್ಷಗಳ ನಂತರ, ಈ ಬಾರಿ ದೆಹಲಿ ಗದ್ದುಗೆ ಹಿಡಿಯಬೇಕು ಎಂಬ ತವಕದಲ್ಲಿದೆ. ಹೀಗಾಗಿ ಆಪ್ ವಿರುದ್ಧ ನೇರ ನೇರ ಜಿದ್ದಿಗೆ ಬಿದ್ದಿದ್ದ ಬಿಜೆಪಿ ಈ ಬಾರಿ ಅಬ್ಬರದ ಪ್ರಚಾರ ನಡೆಸಿದೆ. ಚುನಾವಣಾ ಕಣದಲ್ಲಿ ಎಲ್ಲಾ ಪಕ್ಷದ ಒಟ್ಟು 699 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.