ಪ್ರತಿಯೊಬ್ಬರು ಆಹಾರವನ್ನು ಸೇವಿಸುವುದು ಹಸಿವನ್ನು ನೀಗಿಸೋಕೆ, ಹಾಗೂ ದೇಹಕ್ಕೆ ತಾನು ಸೇವಿಸುವ ಆಹಾರ ಎಲ್ಲಾ ರೀತಿಯ ಪೋಷಕಾಂಶಗಳು, ಖನಿಜಾಂಶಗಳು ಹಾಗೂ ವಿಟಮಿನ್ಗಳನ್ನು ಒದಗಿಸುವುದಕ್ಕೆ.ಇದರಲ್ಲಿ ಯಾವುದಾದರು ಒಂದರ ಕೊರತೆ ಕಂಡರು ಆರೋಗ್ಯ ಸಮಸ್ಯೆಗಳು ಎದುರಾಗುವುದು ಕಂಡಿತ..ಅದರಲ್ಲೂ ವಿಟಮಿನ್ D ಕೊರತೆಯಾದರೆ ಏನೆಲ್ಲಾ ಆರೋಗ್ಯದಲ್ಲಿ ಏನೆಲ್ಲ ಏರುಪೇರಾಗುತ್ತದೆ ಅನ್ನುವ ಮಾಹಿತಿ ಹೀಗಿದೆ..

ಮೂಳೆಗಳ ಆರೋಗ್ಯ
ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲಿ ಮೂಳೆಗಳಿಗೂ ಕೂಡ ಒಂದು. ಮೂಳೆಗಳು ಆರೋಗ್ಯವಾಗಿರಬೇಕು ಅಂದ್ರೆ ವಿಟಮಿನ್ ಡಿ ಖಂಡಿತವಾಗಿಯೂ ಇರಬೇಕು.ಇಲ್ಲವಾದಲ್ಲಿ ಮೂಳೆಗಳು ಗಟ್ಟಿಯಾಗಿರುವುದಿಲ್ಲ ಬೇಗನೆ ಸವಿಯುತ್ತದೆ ಜಾಯಿಂಟ್ ಪೈನ್ ಶುರುವಾಗುತ್ತದೆ. ಮುಖ್ಯವಾಗಿ ಮೂಳೆಗಳು ಗಟ್ಟಿಯಾಗಿರುವುದಿಲ್ಲ ವಿಟಮಿನ್ ಡಿ ಕೊರತೆಯಿಂದ.

ಹೃದಯಕ್ಕೆ ಸಂಬಂಧಿಸಿ ಕಾಯಿಲೆಗಳು
ವಿಟಮಿನ್ ಡಿ ಕೊರತೆಯಾದರೆ ಹೃದಯ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಾಡುತ್ತದೆ ಅದರಲ್ಲಿ ಅಧಿಕ ರಕ್ತದೊತ್ತಡ, ಹೃದ್ರೋಗ, ಸ್ಟ್ರೋಕ್, ಅಥೆರೋಸ್ಕ್ಲೆರೋಸಿಸ್ ಅಂದ್ರೆ ಅಪಧಮನಿಗಳ ಗಟ್ಟಿಯಾಗುವುದು.

ಮಾನಸಿಕ ಆರೋಗ್ಯ
ಸರಿಯಾದ ರೀತಿಯಲ್ಲಿ ವಿಟಮಿನ್ ಡಿ ದೇಹಕ್ಕೆ ಒದಗದಿದ್ದರೆ ಮಾನಸಿಕ ಆರೋಗ್ಯದ ಮೇಲೂ ಕೂಡ ಪ್ರಭಾವವನ್ನು ಬೀರುತ್ತೆ ಇದರಿಂದಾಗಿ ಖಿನ್ನತೆ, ಆತಂಕ, ಕಾಲೋಚಿತ ಅಫೆಕ್ಟಿವ್ ಡಿಸಾರ್ಡರ್,ಅರಿವಿನ ದುರ್ಬಲತೆ.

ಇಷ್ಟು ಮಾತ್ರವಲ್ಲದೆ ಹೇರ್ ಫಾಲ್ ಜಾಸ್ತಿ ಆಗುತ್ತದೆ, ಚರ್ಮದಲ್ಲಿ ಪ್ರಾಬ್ಲಮ್ಸ್ ಶುರುವಾಗುತ್ತದೆ, ಗಾಯಗಳಾದಾಗ ಬೇಗ ಹೀಲ್ ಆಗುವುದಿಲ್ಲ, ರಿಪ್ರೊಡಕ್ಟಿವ್ ಇಶ್ಯೂಸ್ ಹೆಚ್ಚಾಗುತ್ತದೆ ಹಾಗೂ ದೇಹದಲ್ಲಿ ಇನ್ಫೆಕ್ಷನ್ಗಳಾಗಲು ಶುರುವಾಗುತ್ತದೆ.