ಹೊಸದಿಲ್ಲಿ : ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತ ಹಾಗೂ ಕೆನಡಾದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿದೆ. ಇದರ ನಡುವೆಯೇ ಭಾರತ ಸರ್ಕಾರ ಗುರುವಾರ ಕೆನಡಾ ನಾಗರಿಕರಿಗೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ. ಕಾರ್ಯಾಚರಣೆಯ ಕಾರಣದಿಂದ ಸೆಪ್ಟೆಂಬರ್ 21, 2023ರಿಂದ ಮುಂದಿನ ಆದೇಶದವರೆಗೂ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗಗೊಳಿಸಲಾಗಿದೆ. ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಬಿಎಲ್‌ಎಸ್ ವೆಬ್‌ಸೈಟ್ ಅನ್ನು ಪರಿಶೀಲನೆ ಮಾಡ್ತೀರಿ ಎಂದು ವೀಸಾ ಸೇವೆ ನೀಡುವ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ.