• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನನ್ನ ಊರು ನನ್ನ ಜನ: ಕೋವಿಡ್ ಸಂಕಷ್ಟದಲ್ಲೂ ಗ್ರಾಮಸ್ಥರಿಗೆ ಆರೋಗ್ಯ ಚಿಕಿತ್ಸೆ ಮುಂದುವರೆಸುತ್ತಿರುವ ವಿನ್ ಶಿ ಸಂಸ‍್ಥೆ

Any Mind by Any Mind
September 1, 2021
in ಕರ್ನಾಟಕ
0
ನನ್ನ ಊರು ನನ್ನ ಜನ: ಕೋವಿಡ್ ಸಂಕಷ್ಟದಲ್ಲೂ ಗ್ರಾಮಸ್ಥರಿಗೆ ಆರೋಗ್ಯ ಚಿಕಿತ್ಸೆ ಮುಂದುವರೆಸುತ್ತಿರುವ ವಿನ್ ಶಿ ಸಂಸ‍್ಥೆ
Share on WhatsAppShare on FacebookShare on Telegram

ಕೋವಿಡ್ ಸಂಕಟದಲ್ಲಿ ಹಲವು ಸಂಸ್ಥೆಗಳು ಮುಂದೆ ಬಂದು ಸಾವಿರಾರು ಕಿಟ್ ಗಳನ್ನು ಹಂಚಿದರು. ಬಹುತೇಕರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಅಂತವರಲ್ಲಿ ವಿನ್ ಶಿ ಸಂಸ್ಥೆ ಯೂ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಉತ್ತರ ಕರ್ನಾಟಕದ ಅನೇಕ ಉದ್ಯೋಸ್ಥರು ಬೆಂಗಳೂರಿನಲ್ಲಿ ಸಂಕಟದಲ್ಲಿರುವಾಗ ಕೈಚಾಚಿದ್ದು ವಿನ್ ಶಿ ಸಂಸ‍್ಥೆ. ಲಾಕ್ ಡೌನ್ ಸಮಯದಲ್ಲಿ ರಾಜರಾಜೇಶ್ವರಿನಗರದ ಸುತ್ತಮುತ್ತಲಿನ ಹತ್ತಾರು ಕಿಮಿಗಳಲ್ಲಿ ವಾಸಿಸುವ ಕೋವಿಡ್ ಸಂತ್ರಸ್ಥರಿಗೆ ಉಚಿತ ಆಹಾರ ವಿತರಿಸಿದರು.  

ADVERTISEMENT

ಇದು ಒಂದೆ ಬಾರಿ ಮುಗಿಯಲಿಲ್ಲ, ಲಾಕ್ ಡೌನ್ ಮುಗಿದ ಮೇಲೂ ನವಲಗುಂದದ ಶಿರೊಳ ಗ್ರಾಮದಲ್ಲಿ ಕಾರ್ಯ ನಿರಂತರವಾಗಿ ಸಾಗುತ್ತಿದೆ. ನನ್ನ ಊರು ನನ್ನ ಜನ ಈ ಕಾರ್ಯಕ್ರಮದಡಿಯಲ್ಲಿ ಇನ್ನೂ ಅನೇಕ ಯೋಜನೆ ಗಳು ಸಿದ್ಧಗೊಂಡಿವೆ. ಇದು ನಮ್ಮ ಕೈ ಲಾದ ಅಲ್ಪ ಮಟ್ಟಿನ ಸಹಾಯ, ಎನ್ನುತ್ತಾರೆ ವಿನಯ್ ಮತ್ತು ಶಿಲ್ಪಾ ಶಿರಹಟ್ಟಿಮಠ.

ವಿನ್ ಶಿ ಸಂಸ್ಥೆಯಿಂದ ಇನ್ನೂ ಕೆಲವೇ ದಿನಗಳಲ್ಲಿ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಆರಂಭವಾಗುತ್ತಿವೆ. ಇದಕ್ಕಾಗಿ ಉತ್ತಮ ತರಬೇತುದಾರರನ್ನು ನೇಮಿಸಲಾಗಿದೆ. ಮಹಿಳೆಯರು ತರಬೇತಿ ಮುಗಿದ ನಂತರ ಅರ್ಥಿಕ ಸ್ವಾವಲಂಬಿಗಳಾಗಲು ಅನೇಕ ಪರ್ಸನಾಲಿಟಿ ಡೆವೆಲೆಪ್ ಮೆಂಟ್ ಶಿಬಿರಗಳನ್ನು ಹೊಲಿಗೆ ತರಬೇತಿ ಶಿಬಿರದಲ್ಲಿ ನಡೆಸಲಾಗುವುದು ಎಂದು ಶಿಲ್ಪಾತಿಳಿಸಿದರು.

ಹಾಂ.. ವಿನ್ ಶಿ ಸಂಸ್ಥೆಯಿಂದ ಅಶಕ್ತ ಮಹಿಳೆ ಮತ್ತು ಮಕ್ಕಳಿಗಾಗಿ ಪೌಷ್ಟಿಕ ಪೌಡರ್ ತಯಾರಿಸುವುದುನ್ನು ಕಲಿಸಿಕೊಡಲಾಗಿತ್ತದೆ. ಇದರ ಉದ್ದೇಶ ಮಹಿಳಾ ಸಬಲೀಕರಣ ಮತ್ತು ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಈ ಪೌಡರ್ ಮುಟ್ಟಲಿ. ಸೆಪ್ಟೆಂಬರ್ ನಲ್ಲಿ ಮೂರನೆಯ ಅಲೆ ಬರುತ್ತೆ ಎಂದು ಹೇಳಲಾಗುತ್ತದೆ. ಅದು ಬರಲಿ ಬಿಡಲಿ ಎಲ್ಲರಿಗೂ ಪೌಡರ್ ಸಿಗಲಿ ಭಯ ಬೆಡ ಜಾಗೃತಿ ಇರಲಿ ಎನ್ನುತ್ತಾರೆ ವಿನಯ್ ಶಿರಹಟ್ಟಿಮಠ.

ಎಲ್ಲ ಶಾಲೆಗಳು ಆರಂಭವಾದ ಕೂಡಲೇ ಪ್ರತಿ ಕ್ಲಾಸಿನಲ್ಲಿಯೂ ವಿನ್ ಶಿ ಸಂಸ್ಥೆಯಿಂದ ುಚಿತ ಕಂಪ್ಯೂಟರ್ ಕೋಚಿಂಗ್ ಮತ್ತು ಡಿಜಿಟಲ್ ಲಿಟರೆಸಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮಹಿಳೆಯರಿಗೆ ಹೋಮ್ ನರ್ಸಿಂಗ್ ತರಬೇತಿ, ಕೋವಿಡ್ ಬಗ್ಗೆ ಅರಿವು, ಲಸಿಕೆ ಬಗ್ಗೆ ತಿಳಿವಳಿಕೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಬರಲಿವೆ.

ವಿನ್ ಶಿ ಸಂಸ್ಥೆ ಎನೇನು ಮಾಡಿದೆ?

ವಿನ್ ಶಿ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಜನೇವರಿಯಲ್ಲಿ ಆಯೋಜಿಸಿದ ನನ್ನ ಊರು ನನ್ನ ಜನ ಕಾರ್ಯಕ್ರಮದಲ್ಲಿ 130 ರೋಗಿಗಳಿಗೆ     ಉಚಿತ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಲಾಯಿತು. ಫೆಬ್ರುವರಿಯಲ್ಲಿ 180 ಕ್ಕೂ ಅಧಿಕ ಜನರಿಗೆ ಕಣ್ಣಿನ ತಪಾಸಣೆ ಹಾಗೂ ಅವಶ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಮಾರ್ಚ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ 161 ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಅದರಲ್ಲಿ 56 ಮಹಿಳೆಯರಿಗೆ ಗರ್ಭಕೋಶ ತಪಾಸಣೆ ಮಾಡಿ 10 ಮಹಿಳೆಯರಿಗೆ ಕಾಲ್ಪೊಸ್ಕೋಪಿಗೆ ರೆಫರ್ ಮಾಡಲಾಯಿತು. 3 ಮಹಿಳೆಯರಿಗೆ ಹುಬ್ಬಳ್ಳಿಯ ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಕೋವಿಡಾತಂಕದ ಮಧ್ಯೆಯೂ ಗ್ರಾಮಸ್ಥರಿಗೆ ಸಹಾಯ ಮಾಡಲು ಮುಂದೆ ಬಂದ ಶಿರೂರ ವಾರಿಯರ್ಸ್

ಕೋವಿಡ್ ಒಂದು ಎರಡು ಅಲೆಗಳು ಬಂದವು. ಈಗ ಮೂರನೇಯ ಅಲೆಯ ಆತಂಕ. ಇಂಥ ಸಮಯದಲ್ಲಿ ನಗರಗಳಲ್ಲಿ ಒಂದು ಬಿಟ್ಟು ಇನ್ನೊಂದು ಆಸ್ಪತ್ರೆ ಇರುತ್ತವೆ. ಆದರೆ ಹಳ್ಳಿಗಳಲ್ಲಿ ಜನರು ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸಬೇಕು. ನವಲಗುಂದದ ಶಿರೂರನಲ್ಲಿ ಮೆಡಿಕಲ್ ಕ್ಯಾಂಪ್ ಗಳು ವಿನ್ ಶಿ ಎಂಬ ಬೆಂಗಳೂರು ಮೂಲದ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದ್ದವು. ನಂತರ ಮತ್ತೇ ಕೋವಿಡ್ ರಾಕ್ಷಸನ ಅಟ್ಟಹಾಸ. ಆದರೂ ಮೆಡಿಕಲ್ ಕ್ಯಾಂಪ್ ಮುಂದು ವರೆಸಬೇಕೆಂಬ ಸದಿಚ್ಛೆ ವಿನ್ ಶಿ ಸಂಸ್ಥೆಯದು. ತಕ್ಷಣವೇ ಶಿರೂರಿನ ನಾಗಪ್ಪ ಮ ಪಟ್ಟಣ ಹಾಗೂ ಗ್ರಾಮದ ಆಸ್ಪತ್ರೆ ನರ್ಸ್ ದೀಪಾ ಅವರು ಮುಂದೆ ಬಂದು ಕೋವಿಡಾತಂಕದ ಮಧ್ಯೆಯೂ ಆರೋಗ್ಯ ಶಿಬಿರವನ್ನು ನಡೆಸಿದರು. 3 ನೇ ಅಲೆ ಭಯ ಇರುವಾಗ ಗ್ರಾಮದಲ್ಲಿ ಬೇರೆ ಆರೋಗ್ಯ ಶಿಬಿರಗಳೇ ನಡೆಯುದಿಲ್ಲ ಎಂಬ ಚಿಂತೆಗೀಡಾಗಿದ್ದ ಗ್ರಾಮಸ್ಥರಿಗೆ ಕೊಂಚ ನಿರಾಳವಾಯಿತು. ವಿನಯ್ ಶಿಲ್ಪಾ ದಂಪತಿಗಳ ಕಾರ್ಯದಿಂದ ಪ್ರೇರಿತರಾಗಿ ಹಲವರು ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.

ನಾಗಪ್ಪ ಪಟ್ಟಣ ಮತ್ತು ನರ್ಸ್ ದೀಪಾ ಅವರು ಗ್ರಾಮಸ್ಥರಿಗೆ ಮನೋಸ್ಥೈರ್ಯ ತುಂಬಿ ಕೋವಿಡೆತರ ಆರೋಗ್ಯ ಸಮಸ್ಯೆಗಳಿಗೂ ಸ್ಪಂದಿಸಿದರು. ಅವರು ಸೂಕ್ತ ಮಾತ್ರೆ ನೀಡಿದರು. ಹಲವು ಸಣ್ಣ ಸಣ್ಣ ಆಸ್ಪತ್ರೆಗಳು ಭಯದಿ ಬಾಗಿಲು ಹಾಕಿರುವಂತ ದಿನಗಳಲ್ಲಿ ಈ ಇಬ್ಬರ ಸೇವೆ ಜನರಿಗೆ ಅನುಕೂಲವಾಯಿತು. ಇರಬೇಕು ಇಂಥವರು ಅಲ್ಲವೇ

Tags: Covid 19ಆರೋಗ್ಯಕರೋನಾಕೋವಿಡ್-19ಚಿಕಿತ್ಸೆವಿನ್ ಶಿ ಸಂಸ‍್ಥೆ
Previous Post

ದೆಹಲಿ: 13 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ : ಆರೋಪಿ ಬಂಧನ

Next Post

ಲಸಿಕೆ ಹಾಕಿಸಿಕೊಂಡಿಲ್ಲಾಂದ್ರೆ ದಂಡ : ಸುಪ್ರೀಂ ಕೋರ್ಟ್ ಆದೇಶ ಕಡೆಗಣಿಸಿತೇ ಬಿಬಿಎಂಪಿ!

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಲಸಿಕೆ ಹಾಕಿಸಿಕೊಂಡಿಲ್ಲಾಂದ್ರೆ ದಂಡ : ಸುಪ್ರೀಂ ಕೋರ್ಟ್ ಆದೇಶ ಕಡೆಗಣಿಸಿತೇ ಬಿಬಿಎಂಪಿ!

ಲಸಿಕೆ ಹಾಕಿಸಿಕೊಂಡಿಲ್ಲಾಂದ್ರೆ ದಂಡ : ಸುಪ್ರೀಂ ಕೋರ್ಟ್ ಆದೇಶ ಕಡೆಗಣಿಸಿತೇ ಬಿಬಿಎಂಪಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada