ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದ್ದು ಹಾಡಿಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ.
ಅಪ್ಪ ಮಗಳ ನಡುವಿನ ಭಾಂದವ್ಯವನ್ನ ವರ್ಣಿಸುವ ಹಾಡು ಇದಾಗಿದ್ದು ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿಗೆ ಧನಿಯಾಗಿದ್ದಾರೆ.

ಅದ್ಧೂರಿ ಸೆಟ್ ಹಾಗು ಮನೋಮೋಹಕ ಛಾಯಾಗ್ರಹಣದಿಂದಾಗಿ ಹಾಡು ಪ್ರೇಕ್ಷಕರನ್ನು ಸೆಳೆಯುತ್ತಿದ್ದು ಬಿಡುಗಡೆಯಾದ 16 ಘಂಟೆಗಳಲ್ಲಿ 1.7 ಮಿಲಿಯನ್ಗೂ ಅಧಿಕ ಜನರು ಹಾಡನ್ನು ಯೂಟ್ಯೂಬ್ ವೀಕ್ಷಿಸಿದ್ದಾರೆ. ಈಗಾಗಲೇ ರಕ್ಕಮ್ಮ ಹಾಡು ಭಾರೀ ಸದ್ದು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ರೀಲ್ಸ್ ವೈರಲ್ ಆಗಿದೆ.
ಜುಲೈ 28ರಂದು ವಿಶ್ವದಾದ್ಯಂತ ವಿಕ್ರಾಂತ್ ರೋಣ ತೆರೆಕಾಣಲಿದೆ.