ಭಾನುವಾರ ನಡೆದ ಸ್ಪೀಕರ್ ಚುನಾವಣೆಗೆ ಸಂಬಂಧಿಸಿದಂತೆ ಶಿವಸೇನೆಯ ಬಂಡಾಯ ಶಾಸಕರು ಭಾರೀ ಬಿಗಿ ಭದ್ರತೆಯೊಂದಿಗೆ ವಿಧಾನಸಭೆಗೆ ಆಗಮಿಸಿರುವುದನ್ನು ಖಂಡಿಸಿರುವ ಮಾಜಿ ಸಚಿವ ಆದಿತ್ಯ ಠಾಕ್ರೆ ಉಗ್ರ ಕಸಬ್ಗೂ ಇಷ್ಟು ಭದ್ರತೆ ಒದಗಿಸಿರಲಿಲ್ಲ ಎಂದು ಟೀಕಿಸಿದ್ದಾರೆ.
ಈ ಹಿಂದೆ ನಾವು ಮಹಾರಾಷ್ಟ್ರದಲ್ಲಿ ಈ ರೀತಿಯ ಭದ್ರತೆಯನ್ನ ಎಂದು ನೋಡಿರಲಿಲ್ಲ ನಿಮ್ಮಗೇಕೆ ಇಷ್ಟು ಭಯ ಯಾರಾದರೂ ಓಡಿ ಹೋಗುತ್ತಾರ ಎಂದು ಪ್ರಶ್ನಿಸಿದ್ದಾರೆ.

ಜುಲೈ 4ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಶಿವಸೇನೆ ಹಾಗು ಬಿಜೆಪಿ ಬಹುಮತ ಸಾಬೀತುಪಡಿಸುವುದಾಗಿ ಮಹಾ ವಿಕಾಸ್ ಅಘಾಡಿ ನಾಯಕರಿಗೆ ಬಹಿರಂಗ ಸವಾಲೆಸೆದಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ(ಬಂಡಾಯ) ಹಾಗು ಬಿಜೆಪಿ ಒಟ್ಟು ಸಂಖ್ಯಾಬಲ 170 ಇದ್ದು ಎಂವಿಎ ಸಂಖ್ಯಾಬಲ 107ಕ್ಕೆ ಕುಸಿದಿದೆ.