ವಿಜಯಪುರ: ವಕ್ಫ್ ಬೋರ್ಡ್ಗೆ ರೈತರ ಜಮೀನು ಕಬಳಿಸುತ್ತಿರುವ ವಿವಾದ ಬಗ್ಗೆ ಬಿಜೆಪಿ ಅಧ್ಯಯನ ತಂಡ ರಚನೆ ಮಾಡಿತ್ತು. ಆದರೆ ತಂಡದ ಸದಸ್ಯರ ನೇಮಕದ ಬಗ್ಗೆ ಬಿಜೆಪಿಯಲ್ಲೇ ವಿರೋಧ ಕೇಳಿ ಬಂದಿತ್ತು. ಇದೀಗ ತಂಡದ ಸದಸ್ಯರಲ್ಲಿ ಬದಲಾವಣೆ ಮಾಡಿದ್ದಾರೆ ಬಿಜೆಪಿ ನಾಯಕರು.
ತಂಡದ ಸದಸ್ಯರ ವಿವಾರವಾಗಿ ಬೆಳಗ್ಗೆಯಷ್ಟೇ ವಿಜಯೆಂದ್ರ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಜಯೆಂದ್ರ ಮಾಡಿದ್ದ ತಂಡವನ್ನು ಬಹಿಷ್ಕಾರ ಮಾಡ್ತೇವೆ ಎಂದಿದ್ದರು. ಯತ್ನಾಳ್ ಗರಂ ಆಗ್ತಿದ್ದ ಹಾಗೆ ಇದೀಗ ತಂಡದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಿಗಜಿಣಗಿ ಸೇರ್ಪಡೆ ಮಾಡಲಾಗಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆವಾಜ್ ಹಾಕುತ್ತಿದಂತೇಯೆ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಮಾಜಿ ಡಿಸಿಎಂ ಹಾಗು ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕರ ತಂಡ ರಚನೆ ಮಾಡಲಾಗಿದೆ.
ಈ ಹಿಂದೆ ತಂಡದಲ್ಲಿ ಸಂಸದ ಗೋವಿಂದ್ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ ಹಾಗೂ ಮುಖಂಡ ಕಲ್ಮರುಡಪ್ಪ ಇದ್ದರು. ಇದೀಗ ತಂಡಕ್ಕೆ ಯತ್ನಾಳ್ ಹಾಗೂ ಜಿಗಜಿಣಗಿ ಮತ್ತು ಮುಖಂಡ ಎಂಜಿ ಜಿರಲಿ ಸೇರ್ಪಡೆ ಆಗಿದ್ದಾರೆ.
ನಾಳೆ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಹವಾಲು ಆಲಿಸಲಿರುವ ತಂಡ. ರೈತರ ಅಹವಾಲು ಆಲಿಸಿ ವರಿಷ್ಠರಿಗೆ ವರದಿ ಸಲ್ಲಿಸಲಿದ್ದಾರೆ. ಆ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ.