ಮೈಸೂರು : ಬಂಡೀಪುರ ಸಮೀಪ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ಸಿಲುಕಿದ ನೂರಾರು ವಾಹನಗಳು, ರಾತ್ರಿಯಿಡೀ ಹಸಿವಿನಿಂದ ಬಳಲಿದ ಮಕ್ಕಳು ಹಾಗೂ ಮಹಿಳೆಯರು. ಊಟಿಗೆ ತೆರಳಿ ವಾಪಸಾಗುತ್ತಿದ್ದ ಪ್ರವಾಸಿಗರಿಗೆ ಭಾರೀ ಸಂಕಷ್ಟ ಎದುರಿಸಿದ್ರು.
ತಮಿಳುನಾಡು ವ್ಯಾಪ್ತಿಯ ಮಧುಮಲೈ ರಸ್ತೆಯಲ್ಲಿ ವಾಹನ ಅಪಘಾತ, ಸಂಜೆ 4 ಗಂಟೆ ನಂತರ ಮೈಸೂರು ಕಡೆ ಹೊರಟ ವಾಹನಗಳೆಲ್ಲವೂ ಮಧುಮಲೈ ಬಳಿ ಜಾಮ್. ರಾತ್ರಿ 9 ಗಂಟೆಯಾದರೂ ಮುಕ್ತಗೊಳ್ಳದ ರಸ್ತೆ ಸಂಚಾರ ವ್ಯವಸ್ಥೆ. 9 ಗಂಟೆ ನಂತರ ರಸ್ತೆ ಸಂಚಾರ ಮುಕ್ತವಾಗಿದೆ. 9.30ರ ಬಳಿಕ ಕೆಕ್ಕನಹಳ್ಳ ಚೆಕ್ ಪೋಸ್ಟ್ ತಲುಪಿದ ಪ್ರವಾಸಿ ವಾಹನಗಳು. ರಾತ್ರಿ 9 ಗಂಟೆಗೆ ಫಾರೆಸ್ಟ್ ಚೆಕ್ ಪೋಸ್ಟ್ ಬಂದ್ ಮಾಡಿದ್ರು. ಯಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಒಂದು ಸಾವಿರಕ್ಕೂ ಹೆಚ್ಚು ವಾಹನಗಳು ಚೆಕ್ಬಪೋಸ್ಟ್ ನಲ್ಲಿ ಲಾಕ್ ಆಗಿದ್ದವು. ನೂರೈವತ್ತಕ್ಕೂ ಹೆಚ್ಚು ಪ್ರವಾಸಿ ವಾಹನಗಳಲ್ಲಿ ಸಿಲುಕಿದ ಮಕ್ಕಳು, ಮಹಿಳೆಯರು. ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ಕುಡಿಯುವ ನೀರೂ ಸಿಗಲ್ಲ.
ಚೆಕ್ ಪೋಸ್ಟ್ ನ ಪೊಲೀಸ್ ಸಿಬ್ಬಂದಿ ಜತೆ ವಾಗ್ವಾದ, ಮೇಲಧಿಕಾರಿಗಳು ಹೇಳೋ ತನಕ ಬಿಡಲ್ಲವೆಂದು ಸಿಬ್ಬಂದಿ ಪಟ್ಟು, ರಾತ್ರಿಯಿಡಿ ಸಂಪರ್ಕ ಮಾಡಿದರೂ ಸಂಪರ್ಕಕ್ಕೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್. ಅರಣ್ಯ ಇಲಾಖೆ ಅನುಮತಿ ಇಲ್ಲದೆ ನಾವೇನೂ ಮಾಡಲು ಆಗಲ್ಲವೆಂದು ಕೈ ಚೆಲ್ಲಿದ ಗುಂಡ್ಲುಪೇಟೆ ಇನ್ಸ್ ಪೆಕ್ಟರ್. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಬೇಡಿಕೊಂಡರೂ ಸ್ಪಂದಿಸದ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ. ಇಡೀ ರಾತ್ರಿ ಹಸಿವಿನಲ್ಲೇ ಕಾಲ ಕಳೆದ ನೂರಾರು ಮಕ್ಕಳು. ಮಕ್ಕಳೊಂದಿಗೆ ಉಪವಾಸವಿದ್ದ ಪ್ರವಾಸಿಗರು, ಬೆಳಗ್ಗೆ 6 ಗಂಟೆವರೆಗೂ ಕಾದು ನಂತರ ಮೈಸೂರು ಕಡೆ ಹೊರಟ ಪ್ರವಾಸಿ ವಾಹನಗಳು.