ಬೆಂಗಳೂರು : ಮೇ.೨೨: ಮೂರು ದಿನಗಳ ಕರ್ನಾಟಕ ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ನೂತನ ಶಾಸಕರು ಎತ್ತಿನ ಗಾಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿ, ನೆರೆದಿದ್ದವರ ಗಮನ ಸೆಳೆದರು.



ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಸೇರಿದಂತೆ ಹಲವು ಶಾಸಕರು ವಿಧಾನಸೌಧದ ಕೆಂಗಲ್ ಗೇಟ್ ದ್ವಾರದ ಮುಖ್ಯ ಗೇಟ್ ಮೂಲಕ ಪಶ್ಚಿಮ ದ್ವಾರಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿದರು.