ಕೇಂದ್ರ ಸರ್ಕಾರದ 2022 ರ ಬಜೆಟ್ ಕುರಿತು ಅತಿಯಾದ ಅಪೇಕ್ಷೆಗಳಿದ್ದರು. ಆದರೆ ಅವೆಲ್ಲವೂ ಈ ಬಾರಿಯ ಬಜೆಟ್ ನಲ್ಲಿ ಹುಸಿಗೊಂಡಿವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದವಾ ಹೇಳಿದರು.
ಕೇಂದ್ರ ಬಜೆಟ್ ಪ್ರತಿಕ್ರಿಯೆ ನೀಡಿರುವ ಅವರು, ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಒಂದು ಸಣ್ಣ ಯೋಜನೆ ಕೂಡಾ ಘೋಷಣೆ ಆಗಿಲ್ಲ. ಉದ್ಯೋಗ ಅವಕಾಶಗಳ ಸೃಷ್ಟಿಗೆ ಒತ್ತು ನೀಡಿಲ್ಲ. ಏಮ್ಸ್ ತರುವ ಕುರಿತು ಚರ್ಚೆ ಆಗಲಿಲ್ಲ. ರಾಜ್ಯದಿಂದ ಈ ಬಾರಿ ನಾವು ಕೇಳಿದ್ದು ಹುಬ್ಬಳ್ಳಿ-ಅಂಕೋಲಾ ರೈಲು ಅದರ ಬಗ್ಗೆ ಕೂಡಾ ಕೇಂದ್ರ ಬಜೆಟ್ ನಲ್ಲಿ ಚರ್ಚೆಯೇ ಆಗಿಲ್ಲ. ರಾಜ್ಯದಿಂದ ಅತಿಹೆಚ್ಚು ಸಂಸದರನ್ನು ನೀಡಿದರು ಸಹಿತ ರಾಜ್ಯಕ್ಕೆ ಈ ಬಾರಿಯ ಬಜೆಟ್ ನಿಂದ ಯಾವುದೇ ಲಾಭ ಆಗಲಿಲ್ಲ ಎಂದರು.